ETV Bharat / bharat

ಕನಿಗಿರಿ ಕ್ಷೇತ್ರದ ಒಂದೇ ಅಂಗಡಿ ವಿಳಾಸದಲ್ಲಿ ನೂರಕ್ಕೂ ಹೆಚ್ಚು ಮತದಾರರ ಹೆಸರು! - Magic in Kanigiri Constituency

ಕನಿಗಿರಿ ಕ್ಷೇತ್ರದ ಒಂದೇ ಅಂಗಡಿ ವಿಳಾಸದಲ್ಲಿ ನೂರಕ್ಕೂ ಹೆಚ್ಚು ಮತದಾರರ ಹೆಸರು ಇರುವುದು ಪತ್ತೆಯಾಗಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

Etv Bharat
Etv Bharat
author img

By ETV Bharat Karnataka Team

Published : Aug 28, 2023, 2:40 PM IST

ಕನಿಗಿರಿ (ಆಂದ್ರ ಪ್ರದೇಶ): ಪ್ರಜಾಪ್ರಭುತ್ವದಲ್ಲಿ ಜನರ ಭವಿಷ್ಯವನ್ನು ನಿರ್ಧರಿಸುವುದು ಹಾಗೂ ನಾಯಕರ ಭವಿಷ್ಯವನ್ನು ಬದಲಾಯಿಸುವುದು ಮತ (ವೋಟ್). ಪ್ರಕಾಶಂ ಜಿಲ್ಲೆಯ ಕನಿಗಿರಿ ಕ್ಷೇತ್ರದಲ್ಲಿ ನಕಲಿ ಮತದಾರರು ಕಂಡುಬಂದಿದ್ದು, ಕೆಲ ಮುಖಂಡರು ಇಂತಹ ಮತಗಳ ವಿಚಾರದಲ್ಲಿ ಗಲಾಟೆ ಮಾಡುತ್ತಿದ್ದಾರೆ. ಬಿಎಲ್‌ಒಗಳ ಮೇಲೆ ಒತ್ತಡ ಹೇರಿ ಮತದಾರರ ಪಟ್ಟಿ ಬದಲಾವಣೆ ಮಾಡಲಾಗುತ್ತಿದೆ. ಕೆಲವೆಡೆ ಒಂದೇ ಮನೆ ಸಂಖ್ಯೆಯ ಮೇಲೆ ಹೆಚ್ಚು ಮತಗಳು ಸೇರ್ಪಡೆಗೊಂಡಿವೆ. ಇವುಗಳನ್ನು ಪತ್ತೆ ಹಚ್ಚುವ ಆಡಳಿತ ವ್ಯವಸ್ಥೆ ಕೈಕಟ್ಟಿ ಕುಳಿತುಕೊಂಡಿದೆ.

ವೋಟರ್​ ಐಡಿಯಲ್ಲಿ ಮನೆ ಸಂಖ್ಯೆ ಶೂನ್ಯ: ನಿಯಮಗಳ ಪ್ರಕಾರ, ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರು ಮನೆ ಸಂಖ್ಯೆಯನ್ನು ಹೊಂದಿರುತ್ತಾರೆ. ಕನಿಗಿರಿ ಪಟ್ಟಣದ 1ನೇ ವಾರ್ಡ್‌ನಲ್ಲಿ 280 ಜನ ಮತದಾರರಿಗೆ ಮೂಲ ಮನೆ ಸಂಖ್ಯೆ ಇಲ್ಲ. ಕನಿಗಿರಿ ಪಟ್ಟಣದ ಮತಗಟ್ಟೆ 142ರ ವ್ಯಾಪ್ತಿಯಲ್ಲಿ ಕೊಂಡಲರಾವ್ ಅವರ ಅಂಗಡಿ ಇದೆ. ಇದಕ್ಕೆ ಮನೆ ಸಂಖ್ಯೆ 498 ಇದೆ. ಈ ವಿಳಾಸದಲ್ಲಿ ನೂರಕ್ಕೂ ಹೆಚ್ಚು ಮತಗಳು ಸೇರ್ಪಡೆಯಾಗಿವೆ. ಇದೇ ಬೂತ್ ವ್ಯಾಪ್ತಿಯ ಇಂದಿರಾ ಕಾಲೋನಿ, ಬಿ.ಸಿ.ಕಾಲೋನಿ, ರಾಜೀವನಗರ ಕಾಲೋನಿಯಲ್ಲಿ ಒಟ್ಟು 280ಕ್ಕೂ ಹೆಚ್ಚು ಮತಗಳಿಗೆ ಮನೆ ಸಂಖ್ಯೆ ಇಲ್ಲ.

ಕನಿಗಿರಿ, ಪಾಮುರು, ಸೀಲಂವಾರಿಪಲ್ಲಿ, ಪೆದ್ದ ಅಲವಲಪಾಡು ಭಾಗದಲ್ಲಿ ಬೂತ್ ಸಂಖ್ಯೆ 100, 141, 263, ಮತ್ತು 228ರಲ್ಲಿ ಎರಡು ಮನೆಗಳ ಸೊನ್ನೆ ಇದೆ. ಈ ಡೋರ್‌ ನಂಬರ್‌ನಲ್ಲಿ 40 ಮತಗಳು, ಬಾಗಿಲು ಸಂಖ್ಯೆ 1-1ರಲ್ಲಿ 50ರಿಂದ 150 ರವರೆಗೆ ಮತಗಳಿವೆ. ಅದೇ ಪ್ರದೇಶದಲ್ಲಿರುವ ಮೂರು ಮನೆ ಸಂಖ್ಯೆ ಶೂನ್ಯ ಇದ್ದು, 70 ಮತದಾರರ ಹೆಸರು ನೋಂದಾಯಿಸಲಾಗಿದೆ.

ಮತದಾರರ ಪಟ್ಟಿಯಲ್ಲಿವೆ ಮೃತರ ಹೆಸರುಗಳು: ಮತದಾರರ ಪಟ್ಟಿಯಿಂದ ಮೃತರ ಹೆಸರು ತೆಗೆಯಬೇಕಿದೆ. ಆದರೆ, ಆ ಪ್ರಕ್ರಿಯೆಯೇ ನಡೆದಿಲ್ಲ. ಹಲವು ವರ್ಷಗಳ ಹಿಂದೆ ಮೃತಪಟ್ಟವರ ಹೆಸರೂ ಮತದಾರರ ಪಟ್ಟಿಯಲ್ಲಿವೆ. ಗಾರ್ಲಪೇಟೆ ರಸ್ತೆಯೊಂದರಲ್ಲೇ ಸುಮಾರು 20ರ ವರೆಗೆ ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿವೆ. ಕನಿಗಿರಿಯ ವೀರ ರಾಮಕೃಷ್ಣ ನಿಧನರಾಗಿ ಐದು ವರ್ಷಗಳಾಗಿವೆ. ಆದರೆ, ಅವರ ಹೆಸರಿನ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಅವರ ಚಿತ್ರದ ಬದಲು ಬೇರೆಯವರ ಚಿತ್ರ ಮಾರ್ಫ್ ಮಾಡಲಾಗಿದೆ. ಆ ವ್ಯಕ್ತಿ ಯಾರೆಂಬುದೇ ಗೊತ್ತಿಲ್ಲ ಎನ್ನುತ್ತಾರೆ ರಾಮಕೃಷ್ಣನವರ ಸಂಬಂಧಿಕರು

ಬಿಎಲ್‌ಒಗಳು ಅಧಿಕಾರಿಗಳ ಒತ್ತಡಕ್ಕೆ ಮಣಿದಿರುವ ಆರೋಪ: ಮತದಾರರ ಮನಪರಿವರ್ತನೆಗೆ ಸ್ವಯಂ ಸೇವಕರು ಹಸ್ತಕ್ಷೇಪ ಮಾಡಬಾರದು ಎಂದು ಚುನಾವಣಾ ಆಯೋಗ ಆದೇಶ ನೀಡಿದ್ದರೂ ಕನಿಗಿರಿ ಕ್ಷೇತ್ರದಲ್ಲಿ ಸರಿಯಾಗಿ ಅನುಷ್ಠಾನವಾಗಿಲ್ಲ. ಮತದಾರರ ಪಟ್ಟಿಯಲ್ಲಿ ಗೊಂದಲವಾಗಿರುವ ಶಂಕೆ ವ್ಯಕ್ತವಾಗಿದೆ. ರಾಜಕೀಯ ಮುಖಂಡರ ಒತ್ತಡಕ್ಕೆ ಬಿಎಲ್ಒಗಳೂ ಮಣಿಯುತ್ತಾರೆ ಎಂಬ ವಾದ ಕೇಳಿ ಬರುತ್ತಿದೆ. ಈ ಕುರಿತು ಕನಿಗಿರಿ ಆರ್‌ಡಿಒ ಟಿ.ಅಜಯಕುಮಾರ್‌ ಅವರಿಗೆ ವಿವರಣೆ ಕೇಳಲಾಗಿದೆ.

ಇದನ್ನೂ ಓದಿ: ಬೈಕ್​ ಕದ್ದ ಆರೋಪ: ಯುವಕನ ಬಡಿದು ಕೊಂದ ಉದ್ರಿಕ್ತರ ಗುಂಪು.. ಆದರೆ ಅಸಲಿ ಕತೆಯೇ ಬೇರೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.