ಮೇಷ : ಇಂದು ಯಾವುದೇ ದಿನದಂತೆ ಒಪ್ಪಬಲ್ಲ ದಿನ. ನೀವು ನಿಮ್ಮಲ್ಲಿ ಏನಿದೆಯೋ ಅದರಿಂದ ಸಂತೃಪ್ತರಾಗುತ್ತೀರಿ. ಪ್ರಣಯದ ದಿನ.
ವೃಷಭ : ಕಾರ್ಯದೊತ್ತಡದಿಂದ ಕೊಂಚ ಬಿಡುವು ಪಡೆದು ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ. ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನು ವಿನೋದ ತುಂಬಿದ ಸಂಜೆಗೆ ಮತ್ತು ನಂತರ ಡಿನ್ನರ್ ಹಾಗೂ ತಡರಾತ್ರಿಯ ಚಲನಚಿತ್ರಕ್ಕೆ ಕೊಂಡೊಯ್ಯುತ್ತೀರಿ.
ಮಿಥುನ : ಅತ್ಯಂತ ಒತ್ತಡ ಹಾಗೂ ಬೇಡಿಕೆಯ ದಿನ ಎದುರಿಸುತ್ತೀರಿ. ಮೂಡ್ ಏರಿಳಿತ ಎದುರಿಸಬಹುದು. ಧ್ಯಾನ ತಂತ್ರಗಳು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತವೆ.
ಕರ್ಕಾಟಕ : ಭಾವುಕರಾಗುವುದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ ಅತಿಯಾದ ಭಾವನಾತ್ಮಕತೆಯನ್ನು ಬಿಟ್ಟುಬಿಡಿ. ಇದು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ.
ಸಿಂಹ : ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಅಪಾರ ರಿಸ್ಕ್ ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ.
ಕನ್ಯಾ : ನೀವು ಅತ್ಯಂತ ಉತ್ಸಾಹ ಮತ್ತು ಶಕ್ತಿಯುತವಾಗಿದ್ದೀರಿ. ನಿಮ್ಮ ದಕ್ಷತೆ ಮತ್ತು ಬುದ್ಧಿಮತ್ತೆ ನಿಮ್ಮನ್ನು ಶ್ರೇಷ್ಠ ಕಲಾವಿದನಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ನಿಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತಂದರೆ ಸೃಜನಶೀಲತೆ ಅಪಾರವಾಗಿ ಹರಿಯುತ್ತದೆ.
ತುಲಾ : ನಿಮ್ಮಲ್ಲಿರುವ ಕಲಾವಿದ ಇಂದು ಮೇಲೆ ಬರುತ್ತಾನೆ. ನೀವು ನಿಮ್ಮ ಕಲ್ಪನಾಶಕ್ತಿ ಪ್ರದರ್ಶಿಸುತ್ತೀರಿ. ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ.
ವೃಶ್ಚಿಕ : ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ.
ಧನು : ಇದನ್ನು ಒಂದು ಸಣ್ಣ ಸಲಹೆ ಎಂದು ಪರಿಗಣಿಸಿ: ಅತ್ಯಂತ ಸಂಕಷ್ಟದ ಸಮಯದಲ್ಲೂ ಭರವಸೆಯ ಬೆಳಕು ಇದ್ದೇ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಏರಿಳಿತಗಳನ್ನು ಹೊಂದಿದೆ.
ಮಕರ : ನಿಮ್ಮ ಪ್ರಿಯತಮೆ ಇಂದು ಹಲವು ಆಶ್ಚರ್ಯಗಳನ್ನು ಎದುರಿಸುತ್ತಾರೆ. ನೀವು ಅತ್ಯಂತ ಪ್ರಣಯದ ಮನಸ್ಥಿತಿಯಲ್ಲಿದ್ದು, ಪ್ರಿಯತಮೆ ನಿಮಗೆ ಹೇಳುವ ಪ್ರತಿಯೊಂದು ಬಯಕೆಯನ್ನೂ ಈಡೇರಿಸುತ್ತೀರಿ. ನೀವಿಬ್ಬರೂ ಶಾಪಿಂಗ್ ನಡೆಸಿ ಆನಂದಿಸುತ್ತೀರಿ.
ಕುಂಭ : ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ, ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ.
ಮೀನ : ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ.
ಇದನ್ನೂ ಓದಿ : ಶುಭ ಶುಕ್ರವಾರದ ಭವಿಷ್ಯ... ಯಾರಿಗೆಲ್ಲ ಅದೃಷ್ಟ ?