ಭುವನೇಶ್ವರ್(ಒಡಿಶಾ): ಮುಂದಿನ ಬಾರಿಗೆ ಸಾಂಗವಾಗಿ ರಥಯಾತ್ರೆಯನ್ನು ನಡೆಸಲು ದೇವರು ಅವಕಾಶ ಮಾಡಿಕೊಡುವ ಭರವಸೆ ಇದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.
ಒಡಿಶಾದ ವಿವಿಧೆಡೆ ರಥಯಾತ್ರೆ ನಡೆಸಲು ಅವಕಾಶ ಕೋರಿ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ಪೀಠ ಈ ರೀತಿಯಾಗಿ ಹೇಳಿತು.
ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿಗಳನ್ನು ರಾಜ್ಯವಾಗಲಿ ಮತ್ತು ರಾಜ್ಯ ಸರ್ಕಾರವಾಗಲಿ ಅಂದಾಜು ಮಾಡುವುದು ಸಾಧ್ಯವಿಲ್ಲ. ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಅನಿವಾರ್ಯವಾದ ಕಾರಣದಿಂದ ರಥಯಾತ್ರೆ ನಡೆಸುವುದು ಸೂಕ್ತವಲ್ಲ ಎಂದಿದೆ.
ಇದನ್ನೂ ಓದಿ: ಮೂವರು ಬಾಲಕಿಯರ ಜೀವ ತೆಗೆದ ಸೆಲ್ಫಿ: ಕಾಲು ಜಾರಿ ಕೆರೆಗೆ ಬಿದ್ದು ದಾರುಣ ಸಾವು
ಒಡಿಶಾ ಹೈಕೋರ್ಟ್ ಹಿಂದಿನ ತಿಂಗಳು ರಥಯಾತ್ರೆ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದು, ಈ ತೀರ್ಪನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪುರಿ ಮಾತ್ರವಲ್ಲದೇ ಕೇಂದ್ರಪಾರಾ ಮತ್ತು ಬಾರ್ಗಢ್ ಜಿಲ್ಲೆಗಳಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.
'ನಾನು ಮನೆಯಲ್ಲೇ ಪೂಜೆ ಮಾಡ್ತೀನಿ'
ನಾನು ಪುರಿ ಪುಣ್ಯಕ್ಷೇತ್ರಕ್ಕೆ ಪ್ರತೀವರ್ಷ ತೆರಳುತ್ತೇನೆ. ಆದರೆ ಸುಮಾರು ಒಂದೂವರೆ ವರ್ಷದಿಂದ ನಾವು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೇ ಪೂಜೆ ಮಾಡುತ್ತಿದ್ದೇನೆ. ಮನೆಯಲ್ಲಿಯೂ ಪೂಜೆ ಮಾಡಬಹುದು. ಒಡಿಶಾ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದು ಒಡಿಶಾ ಸರ್ಕಾರವನ್ನು ಸಿಜೆಐ ಹೊಗಳಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ರಥಯಾತ್ರೆಯನ್ನು ರದ್ದುಗೊಳಿಸಿ, ಆದೇಶ ಹೊರಡಿಸಿತ್ತು. ರಥಯಾತ್ರೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವರಿಗೂ ಕೂಡಾ ಸೋಂಕು ಆವರಿಸಿ, ಆತಂಕ ಸೃಷ್ಟಿಸಿತ್ತು.