ETV Bharat / bharat

Delhi services bill: ಇನ್ನು ದಿಲ್ಲಿಗೆ ಕೇಂದ್ರವೇ ಬಾಸ್​​..ಬಹುಮತವಿಲ್ಲದಿದ್ದರೂ ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ಪಾಸ್​​, ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ

ದೆಹಲಿಯ ಮೇಲೆ ಕೇಂದ್ರ ಸರ್ಕಾರ ಅಧಿಕಾರ ಹೊಂದುವ ಸುಗ್ರೀವಾಜ್ಞೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ. ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ ಉಳಿದಿದೆ. ಅಧಿಕಾರಿ ಚಲಾವಣೆ ಹಗ್ಗಜಗ್ಗಾಟದಲ್ಲಿ ವಿಪಕ್ಷಗಳ ಇಂಡಿಯಾ ಕೂಟಕ್ಕೆ ತೀವ್ರ ಮುಖಭಂಗವಾದರೆ, ಮೋದಿ ಸರ್ಕಾರ ಗೆದ್ದಿದೆ.

ದಿಲ್ಲಿಗೆ ಕೇಂದ್ರವೇ ಬಾಸ್
ದಿಲ್ಲಿಗೆ ಕೇಂದ್ರವೇ ಬಾಸ್
author img

By

Published : Aug 8, 2023, 6:56 AM IST

Updated : Aug 8, 2023, 7:47 AM IST

ನವದೆಹಲಿ: ಭಾರೀ ವಿರೋಧ ಮತ್ತು ಸವಾಲಿನ ನಡುವೆಯೂ ದೆಹಲಿಯ ಉನ್ನತಾಧಿಕಾರಿಗಳ ನೇಮಕ, ವರ್ಗಾವಣೆ ಮತ್ತು ಕೆಲವು ವಿಶೇಷ ಅಧಿಕಾರಗಳನ್ನು ನೀಡುವ ಸುಗ್ರೀವಾಜ್ಞೆಯನ್ನು(ದೆಹಲಿ ಪ್ರದೇಶದ ಸರ್ಕಾರ ಮಸೂದೆ-2023(ತಿದ್ದುಪಡಿ) ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆದಿದೆ. ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲು ರಾಷ್ಟ್ರಪತಿ ಅಂಕಿತವೊಂದೇ ಬಾಕಿ ಉಳಿದಿದೆ. ಈ ಮೂಲಕ ವಿಪಕ್ಷಗಳ 'ಇಂಡಿಯಾ' ಒಕ್ಕೂಟ ಹಾಕಿದ್ದ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ ದಾಟಿದೆ.

ಕೆಲ ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ಪಡೆದುಕೊಂಡಿದ್ದ ಸರ್ಕಾರ, ನಿನ್ನೆ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಿತು. ರಾಜ್ಯಸಭೆಯಲ್ಲಿ ಎನ್​ಡಿಎ ಕೂಟಕ್ಕೆ ಪೂರ್ಣ ಬಹುಮತ ಇಲ್ಲವಾದ ಕಾರಣ ವಿಧೇಯಕವನ್ನು ಬಲವಾಗಿ ವಿರೋಧಿಸಿ ಸೋಲಾಗುವಂತೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಸರ್ವಪ್ರಯತ್ನ ನಡೆಸಿದಾಗ್ಯೂ ಪೂರ್ಣ ಬಹುಮತದೊಂದಿಗೆ ವಿಧೇಯಕ ಅಂಗೀಕಾರವಾಗಿದೆ. ಮಸೂದೆಯ ಪರವಾಗಿ 131 ಸಂಸದರು ಬೆಂಬಲ ನೀಡಿದರೆ, 102 ಇಂಡಿಯಾ ಒಕ್ಕೂಟದ ಸದಸ್ಯರು ಮತ ಹಾಕಿದರು.

ಕೈ ಹಿಡಿದ ವೈಎಸ್ಸಾರ್​, ಬಿಜೆಡಿ: ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಕೂಟಕ್ಕೆ ಪೂರ್ಣ ಬಹುಮತ ಇಲ್ಲ. ಹೀಗಾಗಿ ಲೋಕಸಭೆಯಲ್ಲಿ ಪಾಸಾದ ಸುಗ್ರೀವಾಜ್ಞೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಬಹು ಸವಾಲಿನದ್ದಾಗಿತ್ತು. ಮೋದಿ ವಿರೋಧಿ ಪಕ್ಷಗಳು ಕಟ್ಟಿಕೊಂಡಿರುವ ಇಂಡಿಯಾ ಒಕ್ಕೂಟ ವಿಧೇಯಕದ ವಿರುದ್ಧ ಮತ ಹಾಕುವುದಾಗಿ ಘೋಷಿಸಿದ್ದವು. ಆದರೆ, ಕೊನೆಗೆ ಬಿಜೆಡಿ ಮತ್ತು ವೈಎಸ್ಸಾರ್​ ಕಾಂಗ್ರೆಸ್​ನ ತಲಾ 9 ಸದಸ್ಯರು ವಿಧೇಯಕದ ಪರ ಮತ ನೀಡಿದ್ದರಿಂದ ಮಸೂದೆ ಸಲೀಸಾಗಿ ಪಾಸ್​ ಆಯಿತು.

  • #WATCH | BJP MP Ramesh Bidhuri, speaks on the allegation of five MPs claiming that their names were mentioned on the proposal moved by AAP MP Raghav Chadha to send Delhi NCT Amendment Bill to the Select Committee without their consent.

    "This is forgery. It is very unfortunate… pic.twitter.com/lvskxhDkhc

    — ANI (@ANI) August 7, 2023 " class="align-text-top noRightClick twitterSection" data=" ">

ಕೇಜ್ರಿವಾಲ್​​ಗೆ ಮುಖಭಂಗ: ಸುಗ್ರೀವಾಜ್ಞೆಯನ್ನು ಶತಾಯಗತಾಯ ಸೋಲಿಸಬೇಕೆಂಬ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟಾಯಿತು. ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿರುವ ಆಪ್​ ಉಳಿದ ಪಕ್ಷಗಳೂ ದೆಹಲಿ ಸುಗ್ರೀವಾಜ್ಞೆಯನ್ನು ವಿರೋಧಿಸುವಂತೆ ಒತ್ತಡ ತಂದಿದ್ದರು. ಮೊದಲು ಕಾಂಗ್ರೆಸ್​ ಇದನ್ನು ಒಪ್ಪಿಕೊಂಡಿಲ್ಲವಾದರೂ ಬಳಿಕ ಆಪ್​ ಒತ್ತಡಕ್ಕೆ ಮಣಿದು ವಿಧೇಯಕವನ್ನು ವಿರೋಧಿಸಿತ್ತು. ಆದರೆ, ಬಹುಮತದ ಕೊರತೆ ನಡುವೆಯೂ ಮಸೂದೆ ಅಂಗೀಕಾರವಾಗಿದ್ದು ಕೇಜ್ರಿವಾಲ್​ಗೆ ಮುಖಭಂಗ ತಂದಿದೆ.

ಜನರ ಹಕ್ಕುಗಳ ರಕ್ಷಣೆಗೆ ಮಸೂದೆ: ಇದಕ್ಕೂ ಮೊದಲು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನರ ಹಕ್ಕುಗಳನ್ನು ಕಾಪಾಡಲು ಮಸೂದೆಯನ್ನು ತರಲಾಗಿದೆಯೇ ಹೊರತು ಎಎಪಿ ಸರ್ಕಾರದ ಅಧಿಕಾರವನ್ನು ಕಸಿದುಕೊಳ್ಳಲು ಅಲ್ಲ ಎಂದು ಹೇಳಿದರು.

ದೆಹಲಿಯ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ- 2023 ರ ಚರ್ಚೆಗೆ ಉತ್ತರಿಸಿದ ಶಾ, ಮಸೂದೆಯ ಉದ್ದೇಶ ದಕ್ಷ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಜನಪ್ರಿಯ ಸರ್ಕಾರವನ್ನು ಒದಗಿಸುವುದಾಗಿದೆ. ಕಾಂಗ್ರೆಸ್ ಆಡಳಿತದಿಂದಲೂ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸುವ ಯಾವುದೇ ನಿಬಂಧನೆ ಇದರಲ್ಲಿ ಇಲ್ಲ ಎಂದು ಅವರು ಸದನಕ್ಕೆ ತಿಳಿಸಿದರು.

ಮಸೂದೆಯು ಸಾಂವಿಧಾನಿಕ ಮಾನ್ಯತೆ ಹೊಂದಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುವುದಿಲ್ಲ. ದೆಹಲಿಯು ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. ಇಲ್ಲಿ ಸಂಸತ್ತು, ರಾಯಭಾರ ಕಚೇರಿಗಳು, ಸುಪ್ರೀಂ ಕೋರ್ಟ್ ಮತ್ತು ವಿವಿಧ ದೇಶಗಳ ಅನೇಕ ಗಣ್ಯರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡುತ್ತಾರೆ. ಹಾಗಾಗಿ ದೆಹಲಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಅದರ ಅಧಿಕಾರ ಕೇಂದ್ರದ ಬಳಿ ಇರುವುದು ಒಳಿತು ಎಂದು ಪ್ರತಿಪಾದಿಸಿದರು.

ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ: ಪ್ರತಿಪಕ್ಷಗಳ ಒಕ್ಕೂಟದ ಇಂಡಿಯಾ ಸದಸ್ಯರು ಸೋಮವಾರ ರಾಜ್ಯಸಭೆಯಲ್ಲಿ ಮಸೂದೆಯ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು. ಪ್ರಸ್ತಾವಿತ ವಿಧೇಯಕ ಅಸಂವಿಧಾನಿಕ ಮತ್ತು ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿದೆ ಎಂದು ಟೀಕಿಸಿದರು. ಈ ಮಸೂದೆ ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರವನ್ನು ಕಸಿದುಕೊಳ್ಳುವ ಕ್ರಮವೆಂದು ಆರೋಪಿಸಿತು.

ತಿದ್ದುಪಡಿ ವಿರುದ್ಧ ಅಕ್ರಮ ಸಹಿ ಆರೋಪ; ರಾಜ್ಯಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆ ವಿಧೇಯಕದ ವಿರುದ್ಧ ತಮ್ಮ ಅನುಮತಿಯಿಲ್ಲದೇ ತಮ್ಮ ಹೆಸರುಗಳನ್ನು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸುವ ತಿದ್ದುಪಡಿ ನಿಲುವಳಿಯಲ್ಲಿ ಸೇರಿಸಲಾಗಿದೆ ಎಂದು ಎನ್​ಡಿಎ ಬಣದ ಐವರು ಸಂಸದರು ವಿಪಕ್ಷ ಕೂಟದ ವಿರುದ್ಧ ಆರೋಪಿಸಿದ್ದಾರೆ. ತಮ್ಮ ಹಕ್ಕುಚ್ಯುತಿಯಾಗಿದ್ದು ತನಿಖೆ ನಡೆಸಬೇಕು ಎಂದು ಸ್ಪೀಕರ್​ಗೆ ನೋಟಿಸ್​ ನೀಡಿದ್ದಾರೆ.

ಬಿಜೆಪಿಯ ಎಸ್ ಫಾಂಗ್ನೋನ್ ಕೊನ್ಯಾಕ್, ನರಹರಿ ಅಮೀನ್ ಮತ್ತು ಸುಧಾಂಶು ತ್ರಿವೇದಿ, ಎಐಎಡಿಎಂಕೆಯ ಎಂ ತಂಬಿದುರೈ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಅವರ ಹೆಸರನ್ನು ದೆಹಲಿ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ನಿಲುವಳಿಗೆ ಹೆಸರನ್ನು ಸೂಚಿಸಲಾಗಿದೆ.

ಇದನ್ನೂ ಓದಿ: ದೆಹಲಿ ನಾಗರಿಕ ಸೇವೆಗಳ ಕುರಿತ ಸುಗ್ರೀವಾಜ್ಞೆ ಬದಲಿಸುವ ಮಸೂದೆಗೆ ಕೇಂದ್ರ ಅನುಮೋದನೆ

Last Updated : Aug 8, 2023, 7:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.