ಹೋಂ ಗಾರ್ಡ್ಸ್ ದಿನವನ್ನು ಡಿಸೆಂಬರ್ 6, 1946ರಂದು ಆಚರಿಸಲಾಗುತ್ತದೆ. ಈ ಸಾಂಕ್ರಾಮಿಕ ವರ್ಷದಲ್ಲಿ ನಾವು 74ನೇ ಹೋಂ ಗಾರ್ಡ್ಸ್ ರೈಸಿಂಗ್ ದಿನವನ್ನು ಆಚರಿಸುತ್ತಿದ್ದೇವೆ.
ಗೃಹರಕ್ಷಕರ ದಿನ ಬೆಳೆದುಬಂದ ಹಾದಿ:
ಸಮಾಜದಲ್ಲಿ ನಾಗರಿಕರ ನಡುವಿನ ಗಲಾಟೆಗಳನ್ನು ಮತ್ತು ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಲು ಭಾರತದಲ್ಲಿ ಮೊದಲು ಅಂದರೆ 1946ರ ಡಿಸೆಂಬರ್‌ನಲ್ಲಿ ‘ಹೋಂ ಗಾರ್ಡ್ಸ್’ ಎಂಬ ಸ್ವಯಂಪ್ರೇರಿತ ಪಡೆ ಅಸ್ತಿತ್ವಕ್ಕೆ ಬಂತು. ಆನಂತರ ಸ್ವಯಂಪ್ರೇರಿತ ಪಡೆಯ ಪರಿಕಲ್ಪನೆಯನ್ನು ಹಲವಾರು ರಾಜ್ಯಗಳು ಅಳವಡಿಸಿಕೊಂಡವು.
ಹೋಂ ಗಾರ್ಡ್‌ಗಳು ಕಾರ್ಯ ನಿರ್ವಹಿಸುವ ರೀತಿ :
- ಹೋಂ ಗಾರ್ಡ್ಸ್, ಇದು ಸ್ವಯಂಪ್ರೇರಿತ ಸಂಸ್ಥೆಯಾಗಿರುವುದರಿಂದ ಅದರ ಯಶಸ್ಸು ಸಾರ್ವಜನಿಕರ ಬೆಂಬಲದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ಹೋಂ ಗಾರ್ಡ್ ಸಂಸ್ಥೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಹುಟ್ಟುಹಾಕುವುದು ಮತ್ತು ಉಳಿಸಿಕೊಳ್ಳುವುದು ಅವಶ್ಯಕ. ಹೀಗಾಗಿ ಇಲ್ಲಿ ಪ್ರಚಾರದ ಅವಶ್ಯಕತೆಯೂ ಇದೆ. ಪ್ರಚಾರವು ಹೋಂ ಗಾರ್ಡ್ ಪ್ರದರ್ಶನಗಳು, ಸಿನಿಮಾ ಸ್ಲೈಡ್‌ಗಳ ಪ್ರದರ್ಶನ, ನ್ಯೂಸ್ ಪೇಪರ್ ಲೇಖನಗಳ ಪ್ರಕಟಣೆ ಮತ್ತು ಜಾಹೀರಾತು ಇತ್ಯಾದಿ ಒಳಗೊಂಡಿರಬಹುದು.
- ಹೋಂ ಗಾರ್ಡ್‌ಗಳು ನಿರ್ವಹಿಸುವ ಸಾರ್ವಜನಿಕ ಸೇವೆಯ ಮಹೋನ್ನತ ಕಾರ್ಯಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಮತ್ತು ಈ ಪ್ರಶಂಸೆಗೆ ಸಂಬಂಧಿಸಿದ ಪತ್ರಿಕೆಗಳನ್ನು ಕತ್ತರಿಸಿ ಹಾಗೂ ಗೃಹರಕ್ಷಕರ ಯೋಗ್ಯ ಚಟುವಟಿಕೆಗಳನ್ನೊಳಗೊಂಡ ವಿಚಾರಗಳನ್ನು ಪ್ರತಿ ತಿಂಗಳು ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು.
- ಈ ಸಂಸ್ಥೆಯ ಚಟುವಟಿಕೆಗಳನ್ನು ಸಾರ್ವಜನಿಕರ ಗಮನದಲ್ಲಿರಿಸಲು ರಾಜ್ಯಗಳು/ಯುಟಿಗಳ ಆಡಳಿತಗಳು ಗೃಹರಕ್ಷಕರ ವಾರ್ಷಿಕ ದಿನವನ್ನು ಸೂಕ್ತ ರೀತಿ ಆಚರಿಸಬೇಕು. ಸೂಕ್ತವಾದ ಕಾರ್ಯಕ್ರಮವನ್ನು ರೂಪಿಸಬೇಕು. ಇದರಲ್ಲಿ ವಿಧ್ಯುಕ್ತ ಮೆರವಣಿಗೆ, ಸಾಂಸ್ಕೃತಿಕ/ಶೈಕ್ಷಣಿಕ ಕಾರ್ಯಗಳು ಈ ಸಂಸ್ಥೆಯ ಪಾತ್ರವನ್ನು ಎತ್ತಿ ತೋರಿಸುತ್ತವೆ.
ಗೃಹರಕ್ಷಕರ ಪಾತ್ರ :
- ಆಂತರಿಕ ಭದ್ರತಾ ಸಂದರ್ಭಗಳ ನಿರ್ವಹಣೆಯಲ್ಲಿ ಪೊಲೀಸರಿಗೆ ಸಹಾಯಕ ಪಡೆಗಳಾಗಿ ಸೇವೆ ಸಲ್ಲಿಸುವುದು. ವಾಯು ದಾಳಿ, ಬೆಂಕಿ, ಚಂಡಮಾರುತ, ಭೂಕಂಪ, ಸಾಂಕ್ರಾಮಿಕ ಮುಂತಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಸಮುದಾಯಕ್ಕೆ ಸಹಾಯ ಮಾಡುವುದು ಹೋಂ ಗಾರ್ಡ್ಸ್ ಕರ್ತವ್ಯವಾಗಿರುತ್ತದೆ.
- ಹೋಂ ಗಾರ್ಡ್ಸ್ ಪಡೆಯು ಅಗತ್ಯ ಸೇವೆಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ. ಕೋಮು ಸೌಹಾರ್ದತೆ ಉತ್ತೇಜಿಸುತ್ತದೆ ಮತ್ತು ದುರ್ಬಲ ವರ್ಗಗಳನ್ನು ರಕ್ಷಿಸುವಲ್ಲಿ ಆಡಳಿತಕ್ಕೆ ಸಹಾಯ ಮಾಡುವುದು. ಸಾಮಾಜಿಕ-ಆರ್ಥಿಕ ಮತ್ತು ಕಲ್ಯಾಣ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ನಾಗರಿಕ ರಕ್ಷಣಾ ಕರ್ತವ್ಯಗಳನ್ನು ನಿರ್ವಹಿಸುವುದು.
- ಹೋಂ ಗಾರ್ಡ್‌ಗಳು ಗ್ರಾಮೀಣ ಮತ್ತು ನಗರ ಎಂಬ ಎರಡು ವಿಧಗಳಾಗಿವೆ.
- ಸಂಘಟನೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹೋಂ ಗಾರ್ಡ್‌ಗಳ ಸದಸ್ಯರಿಗೆ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆ, ಡಕೋಯಿಟಿ ವಿರೋಧಿ ಕ್ರಮಗಳು, ಗಡಿ ಗಸ್ತು, ನಿಷೇಧ, ಪ್ರವಾಹ ಪರಿಹಾರ, ಅಗ್ನಿಶಾಮಕ, ಚುನಾವಣಾ ಕರ್ತವ್ಯಗಳು ಮತ್ತು ಸಮಾಜ ಕಲ್ಯಾಣ ತರಬೇತಿ ನೀಡಲಾಗುತ್ತದೆ.
ರಾಜ್ಯ | ಸ್ವಯಂಪ್ರೇರಿತರ ಸಂಖ್ಯೆ | ಹೆಚ್ಚಿದ ಸಂಖ್ಯೆ |
ಆಂಧ್ರಪ್ರದೇಶ | 15903 | 11334 |
ಅರುಣಾಚಲ ಪ್ರದೇಶ | 805 | 0 |
ಅಸ್ಸಾಂ | 23907 | 5967 |
ಬಿಹಾರ | 55612 | 51300 |
ಛತ್ತೀಸ್‌ಗಡ | 7345 | 9865 |
ದೆಹಲಿ | 10285 | 4507 |
ಗೋವಾ | 750 | 1321 |
ಗುಜರಾತ್ | 49808 | 39852 |
ಹರಿಯಾಣ | 14025 | 14025 |
ಹಿಮಾಚಲ ಪ್ರದೇಶ | 8000 | 6991 |
ಜಮ್ಮು ಮತ್ತು ಕಾಶ್ಮೀರ | 4308 | 4300 |
ಜಾರ್ಖಂಡ್ | 25490 | 18864 |
ಕರ್ನಾಟಕ | 21700 | 27059 |
ಮಧ್ಯಪ್ರದೇಶ | 16894 | 7957 |
ಮಹಾರಾಷ್ಟ್ರ | 53856 | 36970 |
ಮಣಿಪುರ | 2038 | 2240 |
ಮೇಘಾಲಯ | 2538 | 1790 |
ಮಿಜೋರಾಂ | 1260 | 1028 |
ನಾಗಾಲ್ಯಾಂಡ್ | 2100 | 965 |
ಒಡಿಶಾ | 15708 | 17675 |
ಪಂಜಾಬ್ | 34595 | 12737 |
ರಾಜಸ್ಥಾನ | 28050 | 27147 |
ಸಿಕ್ಕಿಂ | 766 | 766 |
ತಮಿಳುನಾಡು | 11622 | 10140 |
ತ್ರಿಪುರ | 3955 | 1090 |
ಉತ್ತರ ಪ್ರದೇಶ | 118348 | 108607 |
ಉತ್ತರಖಂಡ್ | 6411 | 5399 |
ಪಶ್ಚಿಮ ಬಂಗಾಳ | 34842 | 9746 |
ಒಟ್ಟು | 573793 | 443229 |
ಗೃಹರಕ್ಷಕ ಕಾಯ್ದೆ:
ಹೋಂ ಗಾರ್ಡ್ಸ್ ಅನ್ನು ಹೋಂ ಗಾರ್ಡ್ಸ್ ಆ್ಯಕ್ಟ್ ಮತ್ತು ಸ್ಟೇಟ್ಸ್/ಯೂನಿಯನ್ ಪ್ರಾಂತ್ಯಗಳ ನಿಯಮಗಳ ಅಡಿಯಲ್ಲಿ ಬೆಳೆಸಲಾಗುತ್ತದೆ. ಅವರನ್ನು ಎಲ್ಲಾ ವರ್ಗದ ಜನರು ಮತ್ತು ಜೀವನದ ವಿವಿಧ ವರ್ಗಗಳಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರು ಸಮುದಾಯದ ಒಳಿತಾಗಿ ತಮ್ಮ ಬಿಡುವಿನ ವೇಳೆಯನ್ನು ಸಂಸ್ಥೆಗೆ ನೀಡುತ್ತಾರೆ.
ಹೋಂ ಗಾರ್ಡ್‌ಗಳಿಗೆ ಉಚಿತ ಸಮವಸ್ತ್ರ, ಕರ್ತವ್ಯ ಭತ್ಯೆ ಮತ್ತು ಶೌರ್ಯ ಸೇರಿದಂತೆ ವಿಶೇಷ ಪ್ರಶಂಸನೀಯ ಪ್ರಶಸ್ತಿಗಳು ಹಾಗೂ ಇನ್ನೂ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.
ಗೃಹರಕ್ಷಕರನ್ನು ಸರ್ಕಾರ ಹೇಗೆ ನಿಯಂತ್ರಿಸುತ್ತದೆ?
- ಗೃಹರಕ್ಷಕ ಸಚಿವಾಲಯವು ಗೃಹರಕ್ಷಕ ಸಂಸ್ಥೆಯ ಪಾತ್ರ, ಬೆಳೆಸುವಿಕೆ, ತರಬೇತಿ, ಸಜ್ಜುಗೊಳಿಸುವಿಕೆ, ಸ್ಥಾಪನೆ ಮತ್ತು ಇತರ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸುತ್ತದೆ.
- ಹೋಂ ಗಾರ್ಡ್‌ಗಳ ಮೇಲಿನ ವೆಚ್ಚವನ್ನು ಸಾಮಾನ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ವಿಭಜಿಸಲಾಗುತ್ತದೆ. ಕೇಂದ್ರವು 25% ಮತ್ತು ರಾಜ್ಯ ಸರ್ಕಾರವು 75%ರ ಅನುಪಾತದಲ್ಲಿ ಹಂಚಿಕೊಳ್ಳುತ್ತದೆ. ಅಸ್ಸೋಂ ಹೊರತುಪಡಿಸಿ ಈಶಾನ್ಯ ರಾಜ್ಯಗಳಲ್ಲಿನ ಹಂಚಿಕೆ ಮಾದರಿ 50:50 ಅನುಪಾತದಲ್ಲಿದೆ.