ದೇಶಾದ್ಯಂತ ಜನರು ಹೋಳಿ ಸಂಭ್ರಮದಲ್ಲಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮದಲ್ಲಿರುವ ಕೇಂದ್ರ ಸಚಿವರ ಸಂಭ್ರಮವನ್ನು ಹೋಳಿ ಬಣ್ಣದ ಹಬ್ಬ ಮತ್ತಷ್ಟು ಹೆಚ್ಚಿಸಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಹೋಳಿ ಆಚರಣೆ ಮಾಡಿದ್ದಾರೆ.
ಈ ವೇಳೆ ಸಚಿವರು 'ಡೋಲ್' ಕೂಡಾ ಬಾರಿಸಿ, ಸಂಭ್ರಮಪಟ್ಟಿದ್ದಾರೆ. ಇದು ಏಕ ಭಾರತ, ಶ್ರೇಷ್ಠ ಭಾರತ ಎಂದಿರುವ ಅವರು, ಇಲ್ಲಿ ನಾವು ಎಲ್ಲಾ ಹಬ್ಬಗಳನ್ನು ಆಚರಣೆ ಮಾಡಬಹುದು. ಇದು ದೇಶದ ವೈಶಿಷ್ಠ್ಯತೆ ಎಂದು ನಖ್ವಿ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕೂಡಾ ದೆಹಲಿಯ ತಮ್ಮ ನಿವಾಸದಲ್ಲಿ ಹೋಳಿ ಹಬ್ಬ ಆಚರಿಸಿದ್ದಾರೆ. ಕೇಂದ್ರ ರಕ್ಷಣಾ ರಚಿವ ರಾಜನಾಥ್ ಸಿಂಗ್ ಅವರು ಕೂಡಾ ಹೋಳಿ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
ಉತ್ತರಾಖಂಡದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಸೋಲು ಅನುಭವಿಸಿದ ಮಾಜಿ ಸಿಎಂ ಹರೀಶ್ ರಾವತ್ ಅವರು ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದು, ಡೆಹ್ರಾಡೂನ್ನಲ್ಲಿರುವ ರಾಯ್ಪುರದಲ್ಲಿ ನಡೆದ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಢೋಲಕ್ ಬಾರಿಸಿ, ಸಂಭ್ರಮಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಮತ್ತು ಪಂಜಾಬ್ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಹೋಳಿ ಆಚರಣೆ ಮಾಡಿದ್ದು, ಹಾಡುಗಳನ್ನು ಹಾಡಿ, ಡ್ಯಾನ್ಸ್ ಮಾಡಿ, ಸಂಭ್ರಮಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯದಲ್ಲಿ ಬಳಿ ನೂರಾರು ಮಂದಿ ಜಮಾವಣೆಗೊಂಡಿದ್ದು, ಬಣ್ಣಗಳನ್ನು ಎರಚಿಕೊಳ್ಳುವ ಮೂಲಕ ಅದ್ಧೂರಿಯಾಗಿ ಹೋಳಿ ಆಚರಿಸಿದರು.
ಇದನ್ನೂ ಓದಿ: ಶೀಘ್ರದಲ್ಲೇ ಗುಲಾಂ ನಬೀ ಆಜಾದ್ ಸೇರಿ ಜಿ-23 ನಾಯಕರಿಂದ ಸೋನಿಯಾ, ರಾಹುಲ್ ಭೇಟಿ