ETV Bharat / bharat

ಹಿಟ್ ಆ್ಯಂಡ್ ರನ್ ಕೇಸ್: ಮಹಿಳೆ ಸಾವಿಗೆ ಕಾರಣನಾದ ಡಿಎಸ್​ಪಿ ಮಗನ ಬಂಧನ

author img

By

Published : Mar 6, 2022, 11:52 AM IST

ತಂದೆಯ ಪೊಲೀಸ್​ ವಾಹನವನ್ನು ವೈಯಕ್ತಿಕವಾಗಿ ಬಳಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಡಿಎಸ್​ಪಿ ಪುತ್ರನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

Hit and run: DSP's son arrested for knocking down woman
ಹಿಟ್ ಆ್ಯಂಡ್ ರನ್: ಮಹಿಳೆ ಸಾವಿಗೆ ಕಾರಣನಾದ ಡಿಎಸ್​ಪಿ ಮಗನ ಬಂಧನ

ಚೆನ್ನೈ(ತಮಿಳುನಾಡು): ಪೊಲೀಸ್ ವಾಹನವನ್ನು ಬಳಸಿ ಮಹಿಳೆಯೊಬ್ಬರನ್ನು ಸಾವಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ಅಪರಾಧ ತನಿಖಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕುಮಾರನ್​ ಎಂಬುವವರ ಪುತ್ರನನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ಲೋಕೇಶ್ (21) ಬಂಧಿತ ವ್ಯಕ್ತಿ. ಲೋಕೇಶ್ ತನ್ನ ತಂದೆ ಕುಮಾರ್ ಅವರ ಸರ್ಕಾರಿ ವಾಹನದಲ್ಲಿ ತಾಯಿಯನ್ನು ಸೆಂಟ್ರಲ್​ ರೈಲ್ವೆ ನಿಲ್ದಾಣದ ಬಳಿ ಇಳಿಸಿ, ತನ್ನ ಮನೆಗೆ ಹಿಂದಿರುಗುತ್ತಿದ್ದ. ಈ ವೇಳೆ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆ ಬಳಿ ರಸ್ತೆ ದಾಟುತ್ತಿದ್ದ 30 ವರ್ಷದ ಅಮೃತ ಎಂಬುವವರಿಗೆ ಕಾರು ಗುದ್ದಿ, ಪರಾರಿಯಾಗಿದ್ದನು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.

ಪೊಲೀಸರು ಆರೋಪಿ​​ ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು 338ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರಿ ವಾಹನವನ್ನು ವೈಯಕ್ತಿಕವಾಗಿ ಬಳಸಿದ್ದಕ್ಕಾಗಿ ಡಿಎಸ್​ಪಿ ಕುಮಾರನ್ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಾ ಪೆರುಂಗುಡಿಯ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಳ್ಳಲು ಬಂದ ಯುವತಿ ಮೇಲೆ ಅತ್ಯಾಚಾರ: ಕೊಚ್ಚಿಯ ಟ್ಯಾಟೂ ಕಲಾವಿದ ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.