ETV Bharat / bharat

ಡಿಸೆಂಬರ್​ನಲ್ಲಿ ಶೇ 14ರಷ್ಟು ಉದ್ಯೋಗ ನೇಮಕಾತಿಯಲ್ಲಿ ಹೆಚ್ಚಳ: ವರದಿ - ನೌಕರಿ ಡಾ.ಕಾಂನಿಂದ ವರದಿ ಬಿಡುಗಡೆ

ನವೆಂಬರ್​ ತಿಂಗಳಲ್ಲಿ 1,727 ಪಾಯಿಂಟ್​​ಗಳಷ್ಟಿದ್ದ ನೌಕರಿ ಜಾಬ್‌ಸ್ಪೀಕ್ ಸೂಚ್ಯಂಕ ಡಿಸೆಂಬರ್​ ತಿಂಗಳಲ್ಲಿ 1,972ರಷ್ಟಿದೆ. ಈ ಮೂಲಕ ನೇಮಕಾತಿ ಪ್ರಕ್ರಿಯೆ ಶೇಕಡಾ 14ರಷ್ಟು ಏರಿಕೆ ಕಂಡಿದೆ.

Hiring activity registers 14 pc growth in Dec
ಡಿಸೆಂಬರ್​ನಲ್ಲಿ ಶೇಕಡಾ 14ರಷ್ಟು ಉದ್ಯೋಗ ನೇಮಕಾತಿಯಲ್ಲಿ ಹೆಚ್ಚಳ
author img

By

Published : Jan 7, 2021, 6:36 PM IST

ಮುಂಬೈ: 2020ರ ನವೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್‌ ತಿಂಗಳ ಒಟ್ಟಾರೆ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 14ರಷ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ.

ವಿಮೆ, ವಾಹನ ಉತ್ಪಾದನಾ ವಲಯ ಮತ್ತು ಇತರ ವಲಯಗಳಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಸುಧಾರಿಸಿದೆ ಎಂದು 2020ರ ಡಿಸೆಂಬರ್​ನಲ್ಲಿ ಬಿಡುಗಡೆಯಾದ ನೌಕರಿ ಜಾಬ್​ ಸ್ಪೀಕ್ ಸೂಚ್ಯಂಕ ಮಾಹಿತಿ ಬಹಿರಂಗಪಡಿಸಿದೆ.

ನವೆಂಬರ್​ ತಿಂಗಳಲ್ಲಿ 1,727 ಪಾಯಿಂಟ್​​ಗಳಷ್ಟಿದ್ದ ನೌಕರಿ ಜಾಬ್‌ಸ್ಪೀಕ್ ಸೂಚ್ಯಂಕ ಡಿಸೆಂಬರ್​ ತಿಂಗಳಲ್ಲಿ 1,972ರಷ್ಟಿದೆ. ಈ ಮೂಲಕ ನೇಮಕಾತಿ ಪ್ರಕ್ರಿಯೆ ಶೇಕಡಾ 14ರಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ: ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ: 1,500 ನೌಕರರ ನೇಮಕಾತಿ ಘೋಷಿಸಿದ ನಿಸ್ಸಾನ್​ ಮೋಟಾರ್

ತಿಂಗಳುಗಳನ್ನು ಹೋಲಿಸಿದ್ರೆ ಸುಧಾರಣೆ ಕಂಡಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆ ವರ್ಷಗಳನ್ನು ಹೋಲಿಕೆ ಮಾಡಿದಾಗ ಸಾಕಷ್ಟು ಕುಸಿತವಾಗುತ್ತಿರುವುದು ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇಕಡಾ 10ರಷ್ಟು ಕುಸಿತವಾಗಿರುವುದು ದಾಖಲಾಗಿದೆ.

2020ನೇ ವರ್ಷ ಸವಾಲುಗಳಿಂದ ತುಂಬಿತ್ತು ಮತ್ತು ಕೊರೊನಾ ಸಾಂಕ್ರಾಮಿಕದಿಂದಾಗಿ ಪ್ರಮುಖ ಕೈಗಾರಿಕೆಗಳಲ್ಲಿ ನೇಮಕ ಪ್ರಕ್ರಿಯೆಗಳು ನಡೆದಿರಲಿಲ್ಲ. 2020ರ ಏಪ್ರಿಲ್, ಮೇ, ಜೂನ್‌ನಲ್ಲಿ ನೇಮಕವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 56ರಷ್ಟು ಕಡಿಮೆಯಾಗಿದೆ. ನಂತರದ ತಿಂಗಳುಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ ಎಂದು ನೌಕರಿ.ಕಾಂ ಮುಖ್ಯ ವ್ಯವಹಾರ ಅಧಿಕಾರಿ ಪವನ್ ಗೋಯಲ್ ಹೇಳಿದ್ದಾರೆ.

ಇನ್ನೂ ಹಲವು ಕ್ಷೇತ್ರಗಳು 2021ನೇ ಮತ್ತಷ್ಟು ಸುಧಾರಣೆಯಾಗುವ ಭರವಸೆ ಕಾಣುತ್ತಿದೆ. ಕೋವಿಡ್ ಸಮಯದಲ್ಲಿ ತಮ್ಮ ಆರೋಗ್ಯ ಮತ್ತು ವ್ಯವಹಾರಗಳನ್ನು ಜನರು ಭದ್ರಪಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ನೌಕರಿ ಜಾಬ್‌ಸ್ಪೀಕ್ ಸೂಚ್ಯಂಕದಲ್ಲಿ ಉಲ್ಲೇಖ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.