ಜೈಪುರ: ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾ ಒಂದು ಕಾಲದಲ್ಲಿ ದೇವಸ್ಥಾನವಾಗಿತ್ತು ಎಂದು ಹಿಂದೂ ಸಂಘಟನೆಯೊಂದು ಹೇಳಿದ್ದು, ಈ ಕುರಿತು ಆವರಣದ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒತ್ತಾಯಿಸಿದೆ.
ಮಹಾರಾಣಾ ಪ್ರತಾಪ್ ಸೇನೆ ಸಂಘಟನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಎಂಬುವರು ದರ್ಗಾದ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಹಿಂದೂ ಧಾರ್ಮಿಕ ಚಿಹ್ನೆಗಳಿವೆ. "ಖ್ವಾಜಾ ಗರೀಬ್ ನವಾಜ್ ಅವರ ದರ್ಗಾ ಹಿಂದೆ ಪ್ರಾಚೀನ ಹಿಂದೂ ದೇವಾಲಯವಾಗಿತ್ತು. ಗೋಡೆಗಳು ಮತ್ತು ಕಿಟಕಿಗಳ ಮೇಲೆ ಸ್ವಸ್ತಿಕ ಚಿಹ್ನೆಗಳಿವೆ. ಕೂಡಲೇ ಭಾರತೀಯ ಪುರಾತತ್ವ ಇಲಾಖೆ ದರ್ಗಾದ ಸಮೀಕ್ಷೆ ನಡೆಸಬೇಕೆಂದು" ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಂಜುಮನ್ ಸೈಯದ್ ಝಡ್ಗಾನ್ ಅಧ್ಯಕ್ಷ ಮೊಯಿನ್ ಚಿಸ್ತಿ, "ಪ್ರತಿ ವರ್ಷ ಲಕ್ಷಾಂತರ ಜನ ಹಿಂದೂಗಳು ಮತ್ತು ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. 850 ವರ್ಷಗಳಿಂದ ದರ್ಗಾ ಇದೆ, ಇಲ್ಲಿ ಯಾವುದೇ ಸ್ವಸ್ತಿಕ ಚಿಹ್ನೆ ಇಲ್ಲ. ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹವರ ವಿರುದ್ಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು" ಎಂದಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ, ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು