ETV Bharat / bharat

ಗಾಂಧಿ ಜಯಂತಿಯಂದೇ ಗೋಡ್ಸೆ ಸ್ಮರಿಸಿದ ಹಿಂದೂ ಮಹಾಸಭಾ! - ಗಾಂಧಿ ಜಯಂತಿಯಂದೇ ಗೋಡ್ಸೆ ಸ್ಮರಣೆ

ಮಹಾತ್ಮನನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಸ್ಮರಿಸುವ ಕಾರ್ಯಕ್ರಮವೊಂದು ಮಧ್ಯಪ್ರದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ.

hindu-mahasabha-organizes-a-unique-seminar-to-talk-about-nathuram-godse-and-apte-ideology-on-gandhi-jayanti
ನಾಥೋರಾಂ ಗೋಡ್ಸೆ ಸ್ಮರಣೆಗೆ ವಿಚಾರ ಸಂಕಿರಣ ಆಯೋಜಿಸಿದ ಗ್ವಾಲಿಯಾರ್ ಹಿಂದೂ ಮಹಾಸಭಾ!
author img

By

Published : Oct 2, 2021, 12:10 PM IST

ಗ್ವಾಲಿಯರ್(ಮಧ್ಯಪ್ರದೇಶ): ಇಂದು ಮಹಾತ್ಮ ಗಾಂಧಿ ಅವರ ಜಯಂತಿ. ಈ ವೇಳೆ ಮಧ್ಯಪ್ರದೇಶದ ಗ್ವಾಲಿಯರ್ ಅನ್ನು ಉಲ್ಲೇಖಿಸುವುದು ಸಾಮಾನ್ಯವಾಗಿದೆ. ಏಕೆಂದರೆ ನಾಥೂರಾಂ ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಸ್ಥಳ ಗ್ವಾಲಿಯರ್.

ಈ ದಿನದಂದೇ 'ಗಾಂಧಿ ಮತ್ತು ಹುತಾತ್ಮ ಗೋಡ್ಸೆ, ಆಪ್ಟೆ' ಎಂಬ ವಿಚಾರ ಸಂಕಿರಣವನ್ನು ಹಿಂದೂ ಮಹಾಸಭಾ ಆಯೋಜಿಸಿದೆ. ಗೋಡ್ಸೆಯನ್ನು ಹುತಾತ್ಮ ಎಂದು ಕರೆಯುವ ಮೂಲಕ ಹಿಂದೂ ಮಹಾಸಭಾ ವಿವಾದ ಸೃಷ್ಟಿಸಿದೆ. ಇದರ ಜೊತೆಗೆ ನಾರಾಯಣ ಆಪ್ಟೆಯನ್ನೂ ಈ ವೇಳೆ ಸ್ಮರಿಸುತ್ತಿದೆ.

hindu-mahasabha-organizes-a-unique-seminar-to-talk-about-nathuram-godse-and-apte-ideology-on-gandhi-jayanti
ವಿಚಾರ ಸಂಕಿರಣದ ಮಾಹಿತಿ

ದೇಶಾದ್ಯಂತ ಮಹಾತ್ಮ ಗಾಂಧಿಯ ಸ್ಮರಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಹಿಂದೂ ಮಹಾಸಭಾ ಗೋಡ್ಸೆಯನ್ನು ಸ್ಮರಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಮಾತನಾಡಿರುವ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ರವಿ ಭಾರದ್ವಾಜ್, ಈ ವಿಚಾರ ಸಂಕಿರಣದಲ್ಲಿ ಗೋಡ್ಸೆ ಬಗ್ಗೆ ಯುವಕರು ಹೆಚ್ಚಾಗಿ ತಿಳಿದುಕೊಳ್ಳಬಹುದು ಎಂದಿದ್ದಾರೆ.

ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ್ ಆಪ್ಟೆ ಮಹಾತ್ಮ ಗಾಂಧಿಯ ಕೊಲೆಗಾರರು ಎಂದು ದೇಶದಾದ್ಯಂತ ಜನರಿಗೆ ತಿಳಿದಿದೆ. ಆದರೆ ಇಲ್ಲಿಯವರೆಗೆ ಅವರನ್ನು ಏಕೆ ಕೊಲೆ ಮಾಡಲಾಗಿದೆ ಎಂದು ಯಾರಿಗೂ ತಿಳಿದಿಲ್ಲ. ಆದ್ದರಿಂದ ಈ ವಿಚಾರ ಸಂಕಿರಣ ನಡೆಸಬೇಕಾಯಿತು ಎಂದು ಭಾರದ್ವಾಜ್​ ಹೇಳಿದ್ದಾರೆ.

ಗ್ವಾಲಿಯರ್‌ನಲ್ಲಿರುವ ಹಿಂದೂ ಮಹಾಸಭಾ ಮೊದಲಿನಿಂದಲೂ ಇಂಥಹ ವಿವಾದಗಳನ್ನು ಸೃಷ್ಟಿಸುತ್ತಿದೆ. ಇದಕ್ಕೂ ಮೊದಲು ನಾಥೂರಾಂ ಗೋಡ್ಸೆ ಅವರ ಪ್ರತಿಮೆಯನ್ನು ಸ್ಥಾಪಿಸಿತ್ತು. ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡ ನಂತರ ಗೋಡ್ಸೆಯನ್ನು ಸ್ಮರಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ, ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಹಿಂದೂ ಮಹಾಸಭಾದ ಈ ನಡೆಗೆ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಬಹದ್ದೂರರ 118ನೇ ಜನ್ಮದಿನ: ಶಾಸ್ತ್ರಿಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇವು...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.