ETV Bharat / bharat

ಭಗವದ್ಗೀತೆ ಶ್ಲೋಕದ ತಪ್ಪಾದ ಅನುವಾದಕ್ಕೆ ಕ್ಷಮೆಯಾಚಿಸಿದ ಅಸ್ಸೋಂ ಸಿಎಂ - ಅಸ್ಸೋಂ ಮುಖ್ಯಮಂತ್ರಿ

ಭಗವದ್ಗೀತೆಯ ಶ್ಲೋಕದ ತಪ್ಪಾದ ಅನುವಾದವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕ್ಷಮೆಯಾಚಿಸಿದ್ದಾರೆ.

ಭಗವದ್ಗೀತೆ ಶ್ಲೋಕದ ತಪ್ಪಾದ ಅನುವಾದಕ್ಕೆ ನಾನು ಕ್ಷಮೆಯಾಚಿಸುತ್ತೇನೆ: ಹಿಮಂತ ಬಿಸ್ವ ಶರ್ಮಾ

author img

By ETV Bharat Karnataka Team

Published : Dec 29, 2023, 1:12 PM IST

ಗುವಾಹಟಿ (ಅಸ್ಸೋಂ): ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಜನ್ಮ ಜಾತಿಯ ಆಧಾರದ ಮೇಲೆ ಉದ್ಯೋಗವನ್ನು ವ್ಯವಹರಿಸುವ ಭಗವದ್ಗೀತೆಯ ಶ್ಲೋಕವನ್ನು ತಪ್ಪಾದ ಅನುವಾದ ಮಾಡಿ, ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಶ್ಲೋಕವನ್ನು ಅಪ್‌ಲೋಡ್ ಮಾಡಿದ್ದು, ತಮ್ಮ ತಂಡದ ಸದಸ್ಯರೇ ಮತ್ತು ಅದನ್ನು ಗಮನಿಸಿ ತಕ್ಷಣ ಅದನ್ನು ಅಳಿಸಿ ಹಾಕಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

"ವಾಡಿಕೆಯಂತೆ ನಾನು ಪ್ರತಿದಿನ ಬೆಳಗ್ಗೆ ನನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಅಪ್‌ಲೋಡ್ ಮಾಡುತ್ತೇನೆ. ಇಲ್ಲಿಯವರೆಗೆ, ನಾನು 668 ಶ್ಲೋಕಗಳನ್ನು ಪೋಸ್ಟ್ ಮಾಡಿದ್ದೇನೆ. ಇತ್ತೀಚೆಗೆ ನನ್ನ ತಂಡದ ಸದಸ್ಯರೊಬ್ಬರು 18ನೇ ಅಧ್ಯಾಯ, 44ರಿಂದ ತೆಗೆದುಕೊಳ್ಳಲಾಗಿದ್ದ ಶ್ಲೋಕವನ್ನು ತಪ್ಪಾದ ಅನುವಾದದೊಂದಿಗೆ ಪೋಸ್ಟ್ ಮಾಡಿದ್ದಾರೆ" ಎಂದು ಸಿಎಂ ಹಿಮಂತ ಎಕ್ಸ್​ ಖಾತೆಯ ಮೂಲಕ ಹೇಳಿದ್ದಾರೆ.

  • As a routine I upload one sloka of Bhagavad Gita every morning on my social media handles. Till date, I have posted 668 slokas.

    Recently one of my team members posted a sloka from Chapter 18 verse 44 with an incorrect translation.

    As soon as I noticed the mistake, I promptly…

    — Himanta Biswa Sarma (@himantabiswa) December 28, 2023 " class="align-text-top noRightClick twitterSection" data=" ">

''ತಪ್ಪನ್ನು ಗಮನಿಸಿದ ತಕ್ಷಣ ಆ ಪೋಸ್ಟ್ ಅನ್ನು ಡಿಲಿಟ್​ ಮಾಡಿದ್ದೇನೆ. ಅಸ್ಸೋಂ ರಾಜ್ಯವು ಜಾತಿರಹಿತ ಸಮಾಜದ ಪರಿಪೂರ್ಣತೆಯನ್ನು ಪ್ರತಿಬಿಂಬಿಸುತ್ತದೆ. ಮಹಾಪುರುಷ ಶ್ರೀಮಂತ ಶಂಕರದೇವ ನೇತೃತ್ವದ ಸುಧಾರಣಾ ಚಳವಳಿಗೆ ಧನ್ಯವಾದಗಳು. ಅಳಿಸಿ ಹಾಕಲಾದ ಪೋಸ್ಟ್​ನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ'' ಎಂದು ಅವರು ತಿಳಿಸಿದ್ದಾರೆ.

ಈ ಪೋಸ್ಟ್ ಬಗ್ಗೆ ಪ್ರತಿಪಕ್ಷಗಳು ಸಿಎಂ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದವು. ಸಿಎಂ ಹಿಮಂತ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಮ್ಮ ಜಾತಿಯ ಕಠೋರತೆಯನ್ನು ಸಂಪೂರ್ಣವಾಗಿ ಪ್ರದರ್ಶಿಸಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಶರದ್ ಪವಾರ್ ನಿವಾಸಕ್ಕೆ ಉದ್ಯಮಿ ಗೌತಮ್ ಅದಾನಿ ಭೇಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.