ಜಮ್ಮು-ಕಾಶ್ಮೀರ: ಅಳಿವಿನಂಚಿನಲ್ಲಿರುವ ಹಿಮಾಲಯನ್ ಕರಡಿಗಳು ಲಡಾಖ್ ಪ್ರದೇಶದ ಡ್ರಾಸ್ ಸೆಕ್ಟರ್ನಲ್ಲಿ ಕಂಡುಬಂದಿವೆ.
ಅಳಿವಿನಂಚಿನಲ್ಲಿರುವ ಈ ಜಾತಿಯ ಕರಡಿಗಳು ಕೆಲ ದಿನಗಳ ಹಿಂದೆ ಶಿಶಿರಸುಪ್ತಿಯಲ್ಲಿ ಪತ್ತೆಯಾಗಿದ್ದವು. ಇದೀಗ ಡ್ರಾಸ್ ಪ್ರದೇಶದಲ್ಲಿ ಸ್ಥಳೀಯರ ಕಣ್ಣಿಗೆ ಬಿದ್ದಿದೆವೆ. ಈ ಜಾತಿಯ ಕರಡಿಗಳ ಸಂಖ್ಯೆಯು ಕ್ಷೀಣಿಸುತ್ತಿದೆ. ಇದನ್ನು ಬೇರೆಡೆ ನೋಡುವುದು ಅಪರೂಪವಾಗಿದೆ.
ಇನ್ನು ಈ ಬಗ್ಗೆ ಸ್ಥಳೀಯರ ಮಾತನಾಡಿದ್ದು, "ಕಂದು ಕರಡಿ ಸಾಮಾನ್ಯವಾಗಿ ಹೈಬರ್ನೇಟ್ ಆಗುತ್ತದೆ. ಕಠಿಣ ಪರಿಸರ ಮತ್ತು ಹವಾಮಾನ ಪರಿಸ್ಥಿತಿಗಳನ್ನು ತಪ್ಪಿಸಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುತ್ತದೆ. ಏತನ್ಮಧ್ಯೆ, ಕಳೆದ ಕೆಲವು ದಿನಗಳಲ್ಲಿ ಕಂದು ಬಣ್ಣದ ಕರಡಿಗಳು ಈ ಪ್ರದೇಶಗಳಲ್ಲಿ ಮೇಕೆ ಮತ್ತು ಕುರಿ ಸೇರಿದಂತೆ ಅನೇಕ ಜಾನುವಾರುಗಳ ಮೇಲೆ ದಾಳಿ ನಡೆಸಿವೆ" ಎಂದು ಹೇಳಿದ್ದಾರೆ.