ETV Bharat / bharat

ಪತ್ರ ಬರೆದು ತ್ರಿವಳಿ ತಲಾಖ್: ಡೆಹ್ರಾಡೂನ್‌ನಲ್ಲಿ ವ್ಯಕ್ತಿ ವಿರುದ್ಧ ಪ್ರಕರಣ - ತ್ರಿವಳಿ ತಲಾಖ್ ವ್ಯಕ್ತಿ ವಿರುದ್ಧ ಪ್ರಕರಣ

ಪತ್ರ ಬರೆದು ತ್ರಿವಳಿ ತಲಾಖ್. ವ್ಯಕ್ತಿಯ ವಿರುದ್ಧ ಡೆಹ್ರಾಡೂನ್‌ನಲ್ಲಿ ಪ್ರಕರಣ ದಾಖಲು.

Himachal man booked for giving triple talaq
ಸಾಂದರ್ಭಿಕ ಚಿತ್ರ
author img

By

Published : Nov 16, 2022, 2:42 PM IST

ಡೆಹ್ರಾಡೂನ್(ಉತ್ತರಾಖಂಡ್​): ಡೆಹ್ರಾಡೂನ್‌ನ ಕ್ಲೆಮೆಂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ರಿವಳಿ ತಲಾಖ್ ಪ್ರಕರಣ ಬೆಳಕಿಗೆ ಬಂದಿದೆ. ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದರು. ಇದೀಗ ಪತ್ರದ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿ ತಹ್ರೀರ್ ಎಂಬುವವರು ದೂರು ನೀಡಿದ್ದಾರೆ.

ಪ್ರಕರಣದ ವಿವರ: ಮಾ.13, 2017 ರಂದು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಪೌಂಟಾ ಸಾಹಿಬ್ ನಿವಾಸಿ ಮೆಹಬೂಬ್ ಅಲಿಯೊಂದಿಗೆ ತಹ್ರೀರ್ ಎಂಬುವವರು ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಈ ವೇಳೆ ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಅನೇಕ ಬೆಲೆ ಬಾಳುವ ಉಡುಗೊರೆಗಳನ್ನು ತಹ್ರೀರ್ ಕುಟುಂಬಸ್ಥರು ನೀಡಿದ್ದರಂತೆ.

ಆದರೆ, ಮದುವೆಯಾದ ನಂತರ ಕಡಿಮೆ ವರದಕ್ಷಿಣೆ ತಂದಿದ್ದೀಯಾ ಎಂದು ಅತ್ತೆ ಹೀಯಾಳಿಸುತ್ತಿದ್ದರು. ಅಲ್ಲದೇ ಪತಿ ಕೂಡ ತನಗೆ ಥಳಿಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ .

ಹೊಡೆದು ಗರ್ಭಪಾತ: ಮೊದಲ ಬಾರಿಗೆ ಗರ್ಭಿಣಿಯಾದಾಗ ಪತಿ ಹಾಗೂ ಅಣ್ಣಂದಿರಾದ ಶಂಶೇರ್ ಮತ್ತು ಗುಲ್ಶೇರ್ ಇಬ್ಬರೂ ಥಳಿಸಿದ್ದರಿಂದ ನನಗೆ ಗರ್ಭಪಾತವಾಗಿದೆ. ಅದರ ನಂತರ ಅತ್ತೆ ಫೆ.8 2022 ರಂದು ಮನೆಯಿಂದ ಹೊರಹಾಕಿದರು. ಮನೆಯಿಂದ ಹೊರಹಾಕಲ್ಪಟ್ಟ ನಂತರ ಪತಿ ಮೇ 12ರಂದು ಪತ್ರ ಕಳುಹಿಸುವ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆಕೆಯ ಪತಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಕುಲವಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೆಂಡತಿ ದಪ್ಪ ಆಗಿದ್ದಾಳೆಂದು ತಲಾಖ್ ಕೊಟ್ಟ ಗಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.