ETV Bharat / bharat

ಮಂಡ್ಯದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ - ಅಲ್ಲಾಹು ಅಕ್ಬರ್ ಎಂದ ವಿದ್ಯಾರ್ಥಿನಿ

ಮಂಡ್ಯದ ಪಿಇಎಸ್​ ಕಾಲೇಜಿನ ಬಳಿ ಧಾರ್ಮಿಕ ಹಿನ್ನೆಲೆಯ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್​ಗೆ ಇದೀಗ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Fatima sheikh award to muskan
Fatima sheikh award to muskan
author img

By

Published : Feb 10, 2022, 2:27 AM IST

Updated : Feb 10, 2022, 9:44 AM IST

ಚೆನ್ನೈ(ತಮಿಳುನಾಡು): ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್​ ವಿವಾದ ಈಗಾಗಲೇ ಪಕ್ಕದ ರಾಜ್ಯಗಳಿಗೂ ಹಬ್ಬಿದೆ. ಕಳೆದ ಎರಡು ದಿನಗಳ ಹಿಂದೆ ಮಂಡ್ಯದ ಪಿಇಎಸ್ ಕಾಲೇಜಿನ ಬಳಿ ಧರ್ಮದ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್​ಗೆ ಇದೀಗ ತಮಿಳುನಾಡಿನಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಮುಸ್ಲಿಂ ಮುನ್ನೇತ್ರ ಕಳಗಂ(TMMK) ಪ್ರಶಸ್ತಿ ಘೋಷಣೆ ಮಾಡಿದೆ.

ಇದನ್ನೂ ಓದಿ: 'ಅವರು ಜೈಶ್ರೀರಾಮ್‌ ಎಂದು ಕೂಗಿದ್ರು, ನಾನು ಅಲ್ಲಾಹು ಅಕ್ಬರ್‌ ಎಂದು ಕೂಗಿದೆ, ಅವರದ್ದೂ ತಪ್ಪಿಲ್ಲ, ನನ್ನದೂ ತಪ್ಪಿಲ್ಲ'

ಕಾಲೇಜ್​ಗೆ ಅಸೈನ್ಮೆಂಟ್ ಕೊಡಲು ತೆರಳಿದ್ದ ವೇಳೆ ಕೆಲವರು ಬುರ್ಕಾ ತೆಗೆದು ಹೋಗುವಂತೆ ಚುಡಾಯಿಸಿದ್ದಾರೆ. ಗುಂಪು ಕಟ್ಟಿಕೊಂಡು ಜೈಶ್ರೀರಾಮ್​​ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವತಿ ಅಲ್ಲಾಹು ಅಕ್ಬರ್​ ಎಂದು ಕೂಗಿದ್ದರು. ಇದರ ಬೆನ್ನಲ್ಲೇ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಯುವತಿ ಧೈರ್ಯಕ್ಕೆ ಮೆಚ್ಚಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಫಾತಿಮಾ ಶೇಖ್ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.

  • அரசியல் சாசனம் வழங்கிய உரிமையை பறிக்க நினைத்த காலிகளுக்கு எதிராக, ஓர் இந்தியக் குடிமகளின் உரிமையை, அஞ்சாமல் நிலைநாட்டிய, மாணவி முஸ்கான் அவர்களுக்கு, தமிழ்நாடு முஸ்லிம் முன்னேற்ற கழகம் சார்பில் கல்வி போராளி "பாத்திமா ஷேக் விருது" வழங்கப்படுமென பெருமையோடு அறிவிக்கின்றோம். #Hijab

    — Jawahirullah MH (@jawahirullah_MH) February 9, 2022 " class="align-text-top noRightClick twitterSection" data=" ">

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಟಿಎಂಎಂಕೆ, ಓರ್ವ ಭಾರತೀಯ ಪ್ರಜೆಯಾಗಿ ಯುವತಿ ತನ್ನ ಹಕ್ಕು ಪ್ರತಿಪಾದನೆ ಮಾಡಿದ್ದಾಳೆ. ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಕರೆಯಲ್ಪಡುವ ಫಾತಿಮಾ ಶೇಖ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಮುಸ್ಕಾನ್​ಗೆ ಈ ಪ್ರಶಸ್ತಿ ನೀಡಲು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಜವಾಹಿರುಲ್ಲಾ ತಿಳಿಸಿದ್ದಾರೆ.

Last Updated : Feb 10, 2022, 9:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.