ಜಲ್ಪೈಗುರಿ: ಭಾರತದ ನೆರೆಯ ದೇಶವಾದ ಭೂತಾನ್‌ನಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿಯಿಂದ ಹಿಡಿದು ಮೊಟ್ಟೆಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಲಾಕ್‌ಡೌನ್‌ಗಳಿಂದಾಗಿ, ದೇಶವು ಮೊಟ್ಟೆ ಉತ್ಪಾದನೆಯಲ್ಲಿ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಆದಾಗ್ಯೂ, ಭೂತಾನ್ ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದೆ.
ಭೂತಾನ್‌ನಲ್ಲಿ ಪ್ರಸ್ತುತ ಅಗತ್ಯವಿರುವಷ್ಟು ಕಾರ್ಮಿಕರಿಲ್ಲ. ಆದ್ದರಿಂದ ದೇಶದ ಅಭಿವೃದ್ಧಿ ಬಹುತೇಕ ಸ್ಥಗಿತಗೊಂಡಿದೆ. ಭೂತಾನ್‌ನಲ್ಲಿ 7 ದಿನ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ನಿಯಮ ಇರುವುದರಿಂದ ಭಾರತೀಯ ಕಾರ್ಮಿಕರು ಸಹ ಬೇರೆ ಕಡೆ ಹೋಗುತ್ತಿದ್ದಾರೆ. ಈಗ, ಭೂತಾನ್ ಸರ್ಕಾರದ ಮುಂದಿರುವ ಪ್ರಮುಖ ಸವಾಲೆಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವುದು.
ಇದನ್ನೂ ಓದಿ:ಮುಸ್ಲಿಂ ಸಮುದಾಯದ 600 ಜನರಿಂದ ದಯಾಮರಣ ಕೋರಿ ಹೈಕೋರ್ಟ್‌ನಲ್ಲಿ ಸಾಮೂಹಿಕ ಅರ್ಜಿ
ಭಾರತದಿಂದ ಮೊಟ್ಟೆ ಆಮದು ಮಾಡಿಕೊಳ್ಳಲು ಭೂತಾನ್ ಸರ್ಕಾರ ಈಗಾಗಲೇ ನಿರ್ಧರಿಸಿದೆ. ತಮಿಳುನಾಡು ಸೇರಿದಂತೆ ಭಾರತದ ಹಲವು ರಾಜ್ಯಗಳಿಂದ ಮೊಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಮೆಣಸಿನಕಾಯಿ ಬೆಲೆ ಕೆಜಿಗೆ 600 ರೂ.ಗೆ ಏರಿಕೆಯಾಗಿದೆ. ಸರ್ಕಾರವು ಭಾರತದಿಂದ ಕೇವಲ 10 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತಿದೆ.
ಭೂತಾನ್ ಕೃಷಿ ಸಚಿವಾಲಯದ ಪ್ರಕಾರ, ಮೊಟ್ಟೆ ಉತ್ಪಾದನೆಯು ಇತ್ತೀಚೆಗೆ 380,2090 ರಿಂದ ಸರಾಸರಿ 120,723 ಅಥವಾ 68 ಪ್ರತಿಶತಕ್ಕೆ ಇಳಿದಿದೆ. ಇತ್ತೀಚೆಗೆ ಭೂತಾನ್‌ನಲ್ಲಿ ಸುಮಾರು 48,000 ಕೋಳಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ. ಮರಿ ಕೋಳಿ ಮೊಟ್ಟೆ ಇಡಲು ಇನ್ನೂ ಐದು ತಿಂಗಳು ಬೇಕು. ಹಾಗಾಗಿ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಸದ್ಯ ಒಂದು ಮೊಟ್ಟೆ ಬೆಲೆ 50 ರೂ. ಇದೆ.