ETV Bharat / bharat

ತಾಯಿಯಿಲ್ಲದ 10 ತಿಂಗಳ ಮಗು ತಂದೆಗೆ ಹಸ್ತಾಂತರಿಸಲು ಹೈಕೋರ್ಟ್ ನಕಾರ.. ಏನಿದು ಪ್ರಕರಣ?

ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ : ಅಕ್ಟೋಬರ್ 15, 2021 ರಂದು ಅರ್ಜಿದಾರನ ಪತ್ನಿ ಕೆ. ಮೌನಿಕಾ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅನಾರೋಗ್ಯದ ಕಾರಣ ಏಪ್ರಿಲ್ 03, 2022 ರಂದು ಆಕೆ ನಿಧನರಾಗಿದ್ದರು. ಈ ಮಧ್ಯೆ ತನ್ನ ಅತ್ತೆ - ಮಾವ ಮಗುವನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಗೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಯಿಯಿಲ್ಲದ 10 ತಿಂಗಳ ಮಗುವನ್ನು ತಂದೆಗೆ ಹಸ್ತಾಂತರಿಸಲು ಹೈಕೋರ್ಟ್ ನಕಾರ
The AP High Court refused to hand over the ten month old child to her father
author img

By

Published : Oct 11, 2022, 4:05 PM IST

ಹೈದರಾಬಾದ್: ತಾಯಿ ಇಲ್ಲದ, ಅಜ್ಜಿಯ ಪಾಲನೆಯಲ್ಲಿರುವ 10 ತಿಂಗಳ ಕೂಸನ್ನು ತಂದೆಗೆ ಹಸ್ತಾಂತರಿಸಲು ಆಂಧ್ರ ಪ್ರದೇಶ ಹೈಕೋರ್ಟ್ ನಿರಾಕರಿಸಿದೆ. ಅಜ್ಜ-ಅಜ್ಜಿಯು ಮಗುವನ್ನು ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಸಾಬೀತು ಮಾಡಲು ತಂದೆ ವಿಫಲರಾಗಿದ್ದಾರೆ ಎಂದು ಕೋರ್ಟ್​ ಹೇಳಿದೆ.

ಜನಿಸಿದಾಗಿನಿಂದ ಮಗುವನ್ನು ಅಜ್ಜ-ಅಜ್ಜಿ ಚೆನ್ನಾಗಿ ನೋಡಿಕೊಂಡಿದ್ದಾರೆ. ದುರದೃಷ್ಟವಶಾತ್ ಮಗುವಿನ ತಾಯಿ ತೀರಿಕೊಂಡಿದ್ದಾರೆ. ನೈಸರ್ಗಿಕ ಪೋಷಕರು ಯಾರೆಂಬುದನ್ನು ನಿರ್ಧರಿಸುವ ಮೊದಲು, ನ್ಯಾಯಾಲಯಗಳು ಮಕ್ಕಳ ಕಲ್ಯಾಣವನ್ನು ಪರಿಗಣಿಸುವುದು ಅಗತ್ಯ ಎಂದು ಕೋರ್ಟ್ ಉಲ್ಲೇಖಿಸಿದೆ.

ಸಿವಿಲ್​ಕೋರ್ಟ್​ ಮೊರೆ ಹೋಗಬಹುದು: ಮಗುವನ್ನು ತನಗೆ ಹಸ್ತಾಂತರಿಸುವಂತೆ ತಂದೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದು. ಅಲ್ಲಿಯವರೆಗೆ ಅಜ್ಜಿ, ತಾತನ ಬಳಿ ಇರುವ ಮಗುವನ್ನು ನೋಡಲು ತಂದೆ ಪ್ರತಿ ಭಾನುವಾರ ಹೋಗಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ಯು.ದುರ್ಗಾ ಪ್ರಸಾದ ರಾವ್ ಮತ್ತು ನ್ಯಾಯಮೂರ್ತಿ ಬಿ.ವಿ.ಎಲ್.ಎಲ್ ಚಕ್ರವರ್ತಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.

ಬಾಪಟ್ಲಾ ಜಿಲ್ಲೆಯ ಗೋಪಿ ಎಂಬ ವ್ಯಕ್ತಿ ತನ್ನ ಅತ್ತೆಯ ಅಕ್ರಮ ಬಂಧನದಲ್ಲಿರುವ ತನ್ನ 10 ತಿಂಗಳ ಮಗಳನ್ನು ಪೊಲೀಸರಿಗೆ ಒಪ್ಪಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಿದೆ.

ಏಪ್ರಿಲ್​​ನಲ್ಲಿ ನಿಧನರಾಗಿದ್ದ ತಾಯಿ: ಅಕ್ಟೋಬರ್ 15, 2021 ರಂದು ಅರ್ಜಿದಾರನ ಪತ್ನಿ ಕೆ. ಮೌನಿಕಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದ ಕಾರಣ ಏಪ್ರಿಲ್ 03, 2022 ರಂದು ಅವರು ನಿಧನರಾಗಿದ್ದರು. ಈ ಮಧ್ಯೆ ತನ್ನ ಅತ್ತೆ-ಮಾವ ಮಗುವನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಗೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ತನ್ನ ಪತ್ನಿಯ ಆರ್ಥಿಕ ಲಾಭವನ್ನು ಹಂಚಿಕೊಳ್ಳುವಂತೆ ಅತ್ತೆ-ಮಾವ ಬೆದರಿಕೆ ಹಾಕುತ್ತಿದ್ದಾರೆ. ತನಗೆ ಬರಬೇಕಾದ ಹಣ ಸಿಗದ ಹಾಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ವಾದಿಸಿದ್ದರು. ಮಗುವನ್ನು ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ. ಆದರೆ ಮಗುವಿನ ಪಾಲನೆ ಮಾಡಲು ಮಗುವಿನ ತಂದೆ ಶಕ್ತರಾಗಿದ್ದಾರೆ ಎಂದು ವಾದಿಸಿದರು.

ಅರ್ಜಿದಾರನು ಕಟ್ಟಡ ನಿರ್ಮಾಣ ಕಂಪನಿಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗುವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು.

ಅಜ್ಜ ಮತ್ತು ಅಜ್ಜಿಯರ ಪರ ವಕೀಲರು ವಾದಿಸಿ, ಅಜ್ಜ- ಅಜ್ಜಿ ಹುಟ್ಟಿದಾಗಿನಿಂದ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಮಗಳ ನಿಧನದ ನಂತರ ಆಕೆಗೆ ಬರಬೇಕಿರುವ ಹಣವನ್ನು ತೆಗೆದುಕೊಳ್ಳುವ ದುರುದ್ದೇಶದಿಂದ ಅರ್ಜಿದಾರನು ಮೊಕದ್ದಮೆ ಹೂಡಿದ್ದಾರೆ ಎಂದು ಹೇಳಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಪೀಠ, ಮಗು ಅತ್ತೆಯರ ಅಕ್ರಮ ಬಂಧನದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರಿಗೆ ಸಾಧ್ಯವಾಗಿಲ್ಲ ಎಂದು ಹೇಳಿ ಮೊಕದ್ದಮೆಯನ್ನು ವಜಾಗೊಳಿಸಲಾಯಿತು. ತಂದೆ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಕೋರ್ಟ್ ಹೇಳಿತು.

ಇದನ್ನೂ ಓದಿ: ಕೇಂದ್ರ ಸಚಿವ ಜೋಶಿ ಮಾನಹಾನಿ ಕೇಸ್.. ಸಾಮಾಜಿಕ ಹೋರಾಟಗಾರ ಹಿರೇಮಠಗೆ ಹಿನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.