ETV Bharat / bharat

ಅಮೆಜಾನ್​ನಲ್ಲಿ 'ಬಲ್ಬ್'​​ ಕೊಂಡು, ತರಬೇತಿಯಲ್ಲಿದ್ದ ವೈದ್ಯೆಯ ರೂಮ್​ನಲ್ಲಿ ಅಳವಡಿಸಿದ ಹಿರಿಯ ವೈದ್ಯ - ವೈದ್ಯೆ ಮಲಗುವ ಕೋಣೆಯಲ್ಲಿ ಹಿಡನ್ ಕೆಮರಾ

ಆರೋಪಿ ಅಮೆಜಾನ್​ನಲ್ಲಿ ಹಿಡನ್ ಕೆಮರಾ ಇರುವ ಬಲ್ಬ್​ಗಳನ್ನು ಕೊಂಡು, ಯುವತಿ ಪಾಠ ಕೇಳಲು ತೆರಳಿದ್ದಾಗ, ಆಕೆಯ ರೂಮ್​ಗೆ ಆ ಬಲ್ಬ್​ಗಳನ್ನು ಅಳವಡಿಸಿದ್ದಾನೆ ಎನ್ನಲಾಗಿದೆ.

hidden-cameras-in-the-doctors-bedroom-and-bathroom-a-reputed-md-doctor-arrested-in-pune
ಅಮೆಜಾನ್​ನಲ್ಲಿ 'ಬಲ್ಬ್'​​ ಕೊಂಡು, ತರಬೇತಿಯಲ್ಲಿದ್ದ ವೈದ್ಯೆಯ ರೂಮ್​ನಲ್ಲಿ ಅಳವಡಿಸಿದ ಹಿರಿಯ ವೈದ್ಯ
author img

By

Published : Jul 13, 2021, 10:32 PM IST

ಪುಣೆ(ಮಹಾರಾಷ್ಟ್ರ): ತರಬೇತಿಯಲ್ಲಿದ್ದ ವೈದ್ಯೆಯ ಮಲಗುವ ಕೋಣೆ ಮತ್ತು ಸ್ನಾನದ ಕೋಣೆಯಲ್ಲಿ ಗುಪ್ತವಾಗಿ ಕೆಮರಾ ಅಳವಡಿಸಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ನಗರದ ಭಾರತಿ ಯುನಿವರ್ಸಿಟಿ ಆಸ್ಪತ್ರೆಯ ಹಿರಿಯ ವೈದ್ಯನೊಬ್ಬನನ್ನು ಬಂಧಿಸಲಾಗಿದೆ.

ಸುಜಿತ್ ಅಬಾಜಿರಾವ್ ಜಗ್ತಾಪ್ (42) ಬಂಧಿತ ಆರೋಪಿಯಾಗಿದ್ದು, 32 ವರ್ಷದ ತರಬೇತಿಯಲ್ಲಿದ್ದ ವೈದ್ಯೆ ಭಾರತಿ ಯುನಿವರ್ಸಿಟಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು. ಈ ದೂರಿನ ಅನ್ವಯ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Hidden cameras in the doctor's bedroom and bathroom; a reputed MD doctor arrested in Pune
ಬಲ್ಬ್​ನಲ್ಲಿ ಕೆಮರಾ

ಆರೋಪಿಯು ತಿಲಕ್ ರಸ್ತೆಯ ಹೀರಾಬಾಗ್ ಚೌಕ್​​ನಲ್ಲಿ ಆಸ್ಪತ್ರೆಯೊಂದನ್ನು ಹೊಂದಿದ್ದು, ಭಾರತಿ ಯುನಿವರ್ಸಿಟಿ ಆಸ್ಪತ್ರೆಗೆ ಪಾಠಗಳನ್ನು ಮಾಡಲು ತೆರಳುತ್ತಿದ್ದನು. ಯುವತಿಯೂ ಭಾರತಿ ಯುನಿವರ್ಸಿಟಿ ಆವರಣದಲ್ಲಿರುವ ವಸತಿಯೊಂದರಲ್ಲಿ ವಾಸವಾಗಿದ್ದಳು. ಆರೋಪಿ ಅಮೆಜಾನ್​ನಲ್ಲಿ ಹಿಡನ್ ಕೆಮರಾ ಇರುವ ಬಲ್ಬ್​ಗಳನ್ನು ಕೊಂಡು, ಯುವತಿ ಪಾಠ ಕೇಳಲು ತೆರಳಿದ್ದಾಗ, ಆಕೆಯ ರೂಮ್​ಗೆ ಆ ಬಲ್ಬ್​ಗಳನ್ನು ಅಳವಡಿಸಿದ್ದಾನೆ ಎನ್ನಲಾಗಿದೆ.

ಗೊತ್ತಾಗಿದ್ದು ಹೇಗೆ?

ಎಂದಿನಂತೆ ಕ್ಲಾಸ್ ಮುಗಿಸಿಕೊಂಡು, ರೂಮ್​ಗೆ ಬಂದ ಯುವತಿ ಲೈಟ್ ಹಾಕಲು ಮುಂದಾಗಿದ್ದಾಳೆ. ಅವು ಕಾರ್ಯ ನಿರ್ವಹಿಸದ ಕಾರಣದಿಂದ ಎಲೆಕ್ಟ್ರೀಷಿಯನ್​ ಅನ್ನು ಕರೆದು ಪರೀಕ್ಷಿಸುವಂತೆ ಕೇಳಿದ್ದಾಳೆ. ಆಗ ಬಲ್ಬ್​​ಗಳನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಹಿಡನ್ ಕೆಮರಾ ಇರುವುದು ಗೊತ್ತಾಗಿದೆ. ನಂತರ ಸ್ನಾನದ ಕೋಣೆಯಲ್ಲಿಯೂ ಇದೇ ರೀತಿಯ ಬಲ್ಬ್ ಇರುವುದು ಗೊತ್ತಾಗಿದೆ.

ಇದನ್ನೂ ಓದಿ: ದಳಪತಿ ವಿಜಯ್​ಗೆ ಮದ್ರಾಸ್ ಹೈಕೋರ್ಟ್​ನಿಂದ ಛೀಮಾರಿ, ಒಂದು ಲಕ್ಷ ರೂ. ದಂಡ

ಈ ಕುರಿತು ಯುವತಿ ನೀಡಿದ ದೂರನ್ನು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ವೈದ್ಯನನ್ನು ಬಂಧಿಸಿದ್ದಾರೆ. ಕೆಲವೊಂದು ಮೂಲಗಳು ಹೇಳುವಂತೆ ವೈದ್ಯ ತಪ್ಪನ್ನು ಒಪ್ಪಿಕೊಂಡಿದ್ದು, ಇಂದು ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಆರೋಪಿಯನ್ನ ತೆಗೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.