ETV Bharat / bharat

ಕಂಟೈನರ್​​ನಲ್ಲಿ 1,725 ಕೋಟಿ ರೂ ಮೌಲ್ಯದ ಹೆರಾಯಿನ್!:​ ವಶಕ್ಕೆ ಪಡೆದ ದೆಹಲಿ ಪೊಲೀಸ್ - ಈಟಿವಿ ಭಾರತ ಕರ್ನಾಟಕ

ಭರ್ಜರಿ ಕಾರ್ಯಾಚರಣೆ ನಡೆಸಿರುವ ದೆಹಲಿ ವಿಶೇಷ ಪೊಲೀಸರ ತಂಡ ದಾಖಲೆಯ ಮೊತ್ತದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ.

Heroin container seized in mumbai
Heroin container seized in mumbai
author img

By

Published : Sep 21, 2022, 12:58 PM IST

ಮುಂಬೈ(ಮಹಾರಾಷ್ಟ್ರ): ಮಹತ್ವದ ಕಾರ್ಯಾಚರಣೆಯೊಂದರಲ್ಲಿ ದೆಹಲಿ ಪೊಲೀಸ್​ ವಿಶೇಷ ವಿಭಾಗದ ಅಧಿಕಾರಿಗಳು ದಾಖಲೆಯ ಮಟ್ಟದಲ್ಲಿ ಹೆರಾಯಿನ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನ ನವ ಶೇವಾ ಬಂದರಿನಲ್ಲಿ ಕಂಟೈನರ್​​​ನಲ್ಲಿ 22 ಟನ್​​ ಹೆರಾಯಿನ್​​ ಜಪ್ತಿ ಮಾಡಲಾಗಿದೆ.

ಲೈಕೋರೈಸ್​ ಹೊಂದಿರುವ ಕಂಟೈನರ್​​​ನಲ್ಲಿ ಇಷ್ಟೊಂದು ಹೆರಾಯಿನ್​​ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನ್ ಮೊತ್ತ 1,725 ಕೋಟಿ ರೂಪಾಯಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸರಿಂದ 200 ಕೋಟಿ ಮೌಲ್ಯದ ಹೆರಾಯಿನ್​ ಜಪ್ತಿ

ಕಳೆದ ಕೆಲ ದಿನಗಳ ಹಿಂದೆ ಗುಜರಾತ್​ ಪೊಲೀಸ್ ಅಧಿಕಾರಿಗಳ ತಂಡ ಕೋಲ್ಕತ್ತಾದ ಬಂದರಿನಲ್ಲಿ 40 ಕೆಜಿ ಹೆರಾಯಿನ್​ ವಶಕ್ಕೆ ಪಡೆದುಕೊಂಡಿದ್ದರು. ಗುಜರಾತ್ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಜಂಟಿ ಕಾರ್ಯಾಚರಣೆ ನಡೆಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.