ETV Bharat / bharat

VIDEO.. ಲಾಹೌಲ್ - ಸ್ಪಿತಿಯಲ್ಲಿ ಭಾರಿ ಹಿಮಪಾತ: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಟಾಲಂಡಿ ಗ್ರಾಮದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

himachal pradesh
ಹಿಮಾಚಲ ಪ್ರದೇಶ
author img

By

Published : Jan 5, 2022, 2:15 PM IST

ಕುಲ್ಲು(ಹಿಮಾಚಲ ಪ್ರದೇಶ): ನಗರದ ವಿವಿಧ ಪ್ರದೇಶಗಳಲ್ಲಿ ಹಿಮಪಾತ ಮುಂದುವರೆದಿದೆ. ಬುಧವಾರ ಬೆಳಗ್ಗೆಯಿಂದ ಕಣಿವೆಯಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಮುಂದುವರೆದ ಹಿಮಪಾತ

ಹಿಂದಿನ ದಿನ ನಾಲ್ಕು ನಾಲ್ಕು ವಾಹನಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ಇಂದು ಭಾರಿ ಹಿಮಪಾತ ಹಿನ್ನೆಲೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದಲ್ಲದೇ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕಣಿವೆ ಜನರು ವಿದ್ಯುತ್ ಹಾಗೂ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ತೀವ್ರ ಚಳಿಯಿಂದಾಗಿ ಹಿಮಾಚಲದಲ್ಲಿ ನೀರಿನ ಪೈಪ್‌ಲೈನ್ ಹೆಪ್ಪುಗಟ್ಟಿದೆ. ಕುಲ್ಲು ಜಿಲ್ಲೆಯಲ್ಲಿ ಹಿಮಪಾತದಿಂದಾಗಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವೆಡೆ ಕಾಲ್ನಡಿಗೆಯಲ್ಲೇ ಜನರು ತಮ್ಮ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಕಳೆದ ಕೆಲ ದಿನದಿಂದ ಕುಲ್ಲು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹಿಮಪಾತ ಮುಂದುವರೆದಿದೆ. ಸಮಸ್ಯೆ ಪರಿಹರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಕುಲ್ಲು ಡಿಸಿ ಅಶುತೋಷ್ ಗಾರ್ಗ್ ತಿಳಿಸಿದ್ದಾರೆ. ಜತೆಗೆ ಸ್ಥಳೀಯರು ಮತ್ತು ಪ್ರವಾಸಿಗರು ಸಹ ಪ್ರತಿಕೂಲ ಹವಾಮಾನದ ನಡುವೆ ಪ್ರಯಾಣಿಸದಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಗನ್​ ಒಯ್ಯುತ್ತಿದ್ದ ಕೇರಳ ಕಾಂಗ್ರೆಸ್​ ನಾಯಕನ ಬಂಧನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.