ತಿರುಪತಿ(ಆಂಧ್ರ ಪ್ರದೇಶ): ನಿರಂತರ ಮಳೆಯಿಂದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿ ಅಕ್ಷರಶಃ ನಲುಗಿ ಹೋಗಿದ್ದು,(heavy-rains-in-tirumala) ದೇವಸ್ಥಾನದ ಸುತ್ತಮುತ್ತ ಪ್ರದೇಶ ಜಲಾವೃತವಾಗಿದೆ. ತಿರುಮಲದ ಬೀದಿಗಳು, ಸಮೀಪದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ನಿನ್ನೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿಯವರೆಗೆ ತಿರುಮಲದಲ್ಲಿ ವರುಣನ ಆರ್ಭಟದಿಂದ(flood) ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ಗೆ(viakunata complex)ನೀರು ನುಗ್ಗಿ ಭಕ್ತರು ಪರದಾಡುವಂತಾಗಿದೆ. ಪ್ರವಾಹದ ಪರಿಸ್ಥಿಯಿಂದಾಗಿ ನಾರಾಯಣಗಿರಿ ವಸತಿ ಸಮುಚ್ಚವೂ ಮಳೆ ನೀರಿನಿಂದ ತುಂಬಿ ಹೋಗಿದೆ.
ದೇವಸ್ಥಾನ ಮಾರ್ಗದ ರಸ್ತೆಗಳಲ್ಲಿ ಪ್ರವಾಹದ ನೀರು ಜಲಪಾತಗಳ ರೀತಿಯಲ್ಲಿ ಇಳಿಯುವುದರಿಂದ ಭೂಕುಸಿತದ ಆಂತಕ ಶುರುವಾಗಿದೆ. ಅಲಿಪಿರಿ-ಶ್ರೀವಾರಿ ಮೆಟ್ಟಿಲು ಪಾದಚಾರಿ ಮಾರ್ಗದಲ್ಲಿ ನೀರು ತುಂಬಿರುವ ಕಾರಣ ಈಗಾಗಲೇ ಈ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಮಳೆ ಕಡಿಮೆಯಾದಾಗ ಮಾತ್ರ ಭಕ್ತರಿಗೆ ಪ್ರವೇಶ
ದೊಡ್ಡ ಪ್ರಮಾಣದ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ ಪಾಪವಿನಾಶನ ಮತ್ತು ಜಪಾಲಿ ಕ್ಷೇತ್ರಗಳಿಗೆ ಹೋಗುವ ರಸ್ತೆಗಳನ್ನು (ಟಿಟಿಡಿ) ಮುಚ್ಚಿದೆ. ಮಳೆ ಕಡಿಮೆಯಾದ ನಂತರವೇ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಭಾರಿ ಮಳೆಗೆ ಹೋಟೆಲ್‌ನ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಕಾಲು ಸಿಲುಕಿಕೊಂಡಿದ್ದ ನಾರಾಯಣ ಎಂಬ ಕಾರ್ಮಿಕನನ್ನು ರಕ್ಷಿಸಲಾಗಿದೆ.
ಯಾವುದೇ ಭಕ್ತರು ತಿರುಮಲಕ್ಕೆ ಬರದಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಸದ್ಯ ದೇವರ ದರ್ಶನ ರದ್ದುಗೊಂಡಿದ್ದು, ಗುರುವಾರ ಮತ್ತು ಶುಕ್ರವಾರದ ದರ್ಶನ ಟಿಕೆಟ್ ಪಡೆದಿರುವ ಭಕ್ತರಿಗೆ ಮಳೆ ಕಡಿಮೆಯಾದ ಬಳಿಕ ಅವಕಾಶ ನೀಡಲಾಗುತ್ತಿದೆ.