ಭುವನೇಶ್ವರ (ಒಡಿಶಾ): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಪ್ರವಾಹಕ್ಕೆ ನಾಲ್ವರು ಬಲಿಯಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ (ಎಸ್‌ಆರ್‌ಸಿ) ಕಚೇರಿ ಮಾಹಿತಿ ನೀಡಿದೆ.
ಕಳೆದೆರಡು ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ನಷ್ಟ ಸಂಭವಿಸಿದೆ. ರಾಜ್ಯದಲ್ಲಿ ಸೋಮವಾರದಿಂದ ಎರಡು ದಿನಗಳಲ್ಲಿ ಸರಾಸರಿ 155.9 ಮಿ.ಮೀ ಮಳೆಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹವನ್ನು ಉಂಟುಮಾಡಿದೆ ಎಂದು ಎಸ್‌ಆರ್‌ಸಿ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಭಯೋತ್ಪಾದನೆ, ಲವ್ ಜಿಹಾದ್ ಬಗ್ಗೆ ಕೇರಳ ಸಿಎಂ ಮೌನ: ಆಕ್ರೋಶ ಹೊರಹಾಕಿದ ಬಿಜೆಪಿ
ಅಂಗುಲ್ ಮತ್ತು ಸೋನೆಪುರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅಂಗುಲ್ ಜಿಲ್ಲೆಯ ತಾಲ್ಚರ್ನಲ್ಲಿ 394 ಮಿ.ಮೀ ಮಳೆಯಾಗಿದ್ದು, ಸೋನೆಪುರ ಜಿಲ್ಲೆಯ ಬಿರ್ಮಹರಾಜಪುರದಲ್ಲಿ 372 ಮಿಮೀ ಮಳೆಯಾಗಿದೆ. ಹದಿನೆಂಟು ಜಿಲ್ಲೆಗಳಲ್ಲಿ 200 ಮಿ.ಮೀ ನಿಂದ 300 ಮಿ.ಮೀ ನಷ್ಟು ಮಳೆಯಾಗಿದೆ. ಉಳಿದ ಹತ್ತು ಜಿಲ್ಲೆಗಳಲ್ಲಿ 100 ರಿಂದ 200 ಮಿ.ಮೀ ನಷ್ಟು ಮಳೆಯಾಗಿದೆ.
100 ರಸ್ತೆಗಳಿಗೆ ತೀವ್ರ ಹಾನಿಯನ್ನುಂಟು ಮಾಡಿದೆ. 25 ಹಳ್ಳಿಗಳು ಮುಳುಗಿವೆ. ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.