ಮುಂಬೈ: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಮುಂಬೈನಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಲ್ಲಿ ಕೆಲ ರೈಲ್ವೆ ಹಳಿ ಮುಳುಗಿದ ಹಿನ್ನೆಲೆ ಕೆಲವೆಡೆ ಲೋಕಲ್ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಉಂಬೆರಮಾಲಿ ಮತ್ತು ಕಾಸರ ರೈಲ್ವೆ ಸ್ಟೇಷನ್ ಮಧ್ಯೆ ಹಾಗೂ ಇಗತಪುರಿಯಾ-ಖರ್ದಿ ಮಧ್ಯೆ ಲೋಕಲ್ ರೈಲು ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹಾಗೆಯೇ ಕಾಸರ್ ಘಾಟ್ನಲ್ಲಿ ರೈಲು ಹಳಿ ಮೇಲೆ ನೀರು ನಿಂತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
-
#WATCH | Maharashtra: Heavy downpour causes waterlogging in Nashik's Trimbakeshwar area, earlier visuals pic.twitter.com/mrPiwLuBQU
— ANI (@ANI) July 21, 2021 " class="align-text-top noRightClick twitterSection" data="
">#WATCH | Maharashtra: Heavy downpour causes waterlogging in Nashik's Trimbakeshwar area, earlier visuals pic.twitter.com/mrPiwLuBQU
— ANI (@ANI) July 21, 2021#WATCH | Maharashtra: Heavy downpour causes waterlogging in Nashik's Trimbakeshwar area, earlier visuals pic.twitter.com/mrPiwLuBQU
— ANI (@ANI) July 21, 2021
ಕಾಸರ್ ಘಾಟ್ನಲ್ಲಿ ಭೂ ಕುಸಿತವಾದ ಹಿನ್ನೆಲೆ ಮುಂಬೈ-ನಾಸಿಕ್ ಹೆದ್ದಾರಿಯನ್ನು ಬಂದ್ ಮಾಡಿ, ತೆರವು ಕಾರ್ಯಾಚರಣೆ ನಡೆದಿದೆ. ಇನ್ನು ಮುಂಬೈ-ಆಗ್ರಾ ಹೆದ್ದಾರಿ ಕೆರೆಯಂತಾಗಿದ್ದು, ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಭಾರೀ ಮಳೆಯಿಂದಾಗಿ ರೈಲ್ವೆ ಹಳಿಗಳು ಜಲಾವೃತವಾದ ಹಿನ್ನೆಲೆಯಲ್ಲಿ ಖರ್ದಿ ಮತ್ತು ಇಗತ್ಪುರಿ ರೈಲ್ವೆ ನಿಲ್ದಾಣಗಳ ಮಧ್ಯೆ ಅಮರಾವತಿ ಎಕ್ಸ್ಪ್ರೆಸ್ ರೈಲು ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದೆ.