ನವದೆಹಲಿ: ಇಂದು ನಸುಕಿನ ವೇಳೆ ದೆಹಲಿ - ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ)ದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಇದರಿಂದ ಬೆಳಗಿನ ಜಾವದ ಸಮಯದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ದೆಹಲಿಯ ಹಲವು ಪ್ರದೇಶಗಳು, ಗಾಜಿಯಾಬಾದ್ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿವೆ.
-
#WATCH | Waterlogging witnessed in several parts of Delhi after the rainfall. Visuals from Pankha road flyover. pic.twitter.com/9MtlORTdcT
— ANI (@ANI) April 4, 2023 " class="align-text-top noRightClick twitterSection" data="
">#WATCH | Waterlogging witnessed in several parts of Delhi after the rainfall. Visuals from Pankha road flyover. pic.twitter.com/9MtlORTdcT
— ANI (@ANI) April 4, 2023#WATCH | Waterlogging witnessed in several parts of Delhi after the rainfall. Visuals from Pankha road flyover. pic.twitter.com/9MtlORTdcT
— ANI (@ANI) April 4, 2023
ದೆಹಲಿ ಮತ್ತು ಹತ್ತಿರದ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಅಥವಾ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 2 ಗಂಟೆ ಅವಧಿಯಲ್ಲಿ ಸಂಪೂರ್ಣ ದೆಹಲಿ ಮತ್ತು ಎನ್‌ಸಿಆರ್, ಗನ್ನೌರ್, ಮೆಹಮ್, ತೋಷಮ್, ರೋಹ್ಟಕ್, ಭಿವಾನಿ (ಹರಿಯಾಣ) ಬರೌತ್, ಶಿಕರ್‌ಪುರ್, ಖುರ್ಜಾ (ಯುಪಿ) ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಅಥವಾ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುಂಜಾನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ 2 ಗಂಟೆಗಳಲ್ಲಿ, ಕಿಥೋರ್, ಗರ್ಮುಕ್ತೇಶ್ವರ, ಪಿಲಾಖುವಾ, ಹಾಪುರ್, ಗುಲಾವೋಟಿ, ಸಿಯಾನಾ, ಸಿಕಂದರಾಬಾದ್, ಬುಲಂದ್‌ಶಹರ್, ಜಹಾಂಗೀರಾಬಾದ್, ಅನುಪ್‌ಶಹರ್, ಬಹಾಜೋಯ್, ಪಹಾಸು, ದೇಬಾಯಿ, ನರೋರಾ, ಗಭಾನಾ, ಸಹಸ್ವಾನ್, ಜತ್ತರಿ, ಅಟ್ರೌಲಿ, ಅಟ್ರೌಲಿ, ಅಟ್ರೌಲಿ, ನಂದಗಾಂವ್, ಇಗ್ಲಾಸ್, ಸಿಕಂದರಾ ರಾವ್, ಬರ್ಸಾನಾ, ರಾಯಾ, ಹತ್ರಾಸ್, ಮಥುರಾ (ಯು.ಪಿ) ದೀಗ್ (ರಾಜಸ್ಥಾನ)ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
-
#WATCH | Waterlogging witnessed in several parts of Delhi after the rainfall. Visuals from Pankha road flyover. pic.twitter.com/9MtlORTdcT
— ANI (@ANI) April 4, 2023 " class="align-text-top noRightClick twitterSection" data="
">#WATCH | Waterlogging witnessed in several parts of Delhi after the rainfall. Visuals from Pankha road flyover. pic.twitter.com/9MtlORTdcT
— ANI (@ANI) April 4, 2023#WATCH | Waterlogging witnessed in several parts of Delhi after the rainfall. Visuals from Pankha road flyover. pic.twitter.com/9MtlORTdcT
— ANI (@ANI) April 4, 2023
ಇದನ್ನೂ ಓದಿ: ದಕ್ಷಿಣ ಒಳನಾಡಿನಲ್ಲಿ 5 ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಜನರಿಗೆ ಹವಾಮಾನ ಇಲಾಖೆ ನೀಡಿರುವ ಸಲಹೆಗಳೇನು?: "ಟ್ರಾಫಿಕ್ ಸಲಹೆಗಳನ್ನು ಅನುಸರಿಸಿ. ಮನೆಯೊಳಗೆ ಇರಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ. ಮರಗಳ ಕೆಳಗೆ ಆಶ್ರಯ ಪಡೆಯಬೇಡಿ" ಎಂದು ಭಾರತೀಯ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ದೆಹಲಿ - ಎನ್‌ಸಿಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ. ಆಲಿಕಲ್ಲು ಮಳೆ ಸುರಿದರೆ ಜನರು ಮತ್ತು ಜಾನುವಾರುಗಳನ್ನು ಗಾಯಗೊಳಿಸಬಹುದು ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಕಳೆದ ಗುರುವಾರ ಮುಂಜಾನೆ, ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು. ಮಾರ್ಚ್ 30 ರಿಂದ ಏಪ್ರಿಲ್ 1 ರವರೆಗೆ ವಾಯುವ್ಯ ಭಾರತದಲ್ಲಿ ವ್ಯಾಪಕ ಮಳೆ, ಗುಡುಗು, ಮಿಂಚು, ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿತ್ತು.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಸಿಂಚನ: ಆಲಿಕಲ್ಲು ಮಳೆಗೆ ತೆಲಂಗಾಣದಲ್ಲಿ ಬೆಳೆ ಹಾನಿ
ಪೂರ್ವ ಕಾಂಗೋದಲ್ಲಿ ಭಾರಿ ಭೂ ಕುಸಿತ: ಇನ್ನು ಪೂರ್ವ ಕಾಂಗೋದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ಸೋಮವಾರ ತಿಳಿಸಿದೆ. ಮಸಿಸಿ ಪ್ರಾಂತ್ಯದ ಬೊಲೊವಾ ಗ್ರಾಮದಲ್ಲಿ ಭಾನುವಾರ ಭೂಕುಸಿತ ಸಂಭವಿಸಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಗುಯಿಲೌಮ್ ಎನ್ಡ್ಜಿಕೆ ಕೈಕೊ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಭಾರಿ ಭೂ ಕುಸಿತ ಕನಿಷ್ಠ 20 ಮಂದಿ ಸಾವು