ಹೈದರಾಬಾದ್: ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮುಂಗಾರು ಮಳೆಯಾಗುತ್ತಿದೆ. ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರಮುಖವಾಗಿ ಮಹಾರಾಷ್ಟ್ರ, ಕರ್ನಾಟಕ, ನವದೆಹಲಿ, ಪಂಜಾಬ್ ಹಾಗು ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಲ್ಲೂ ಜನಜೀವನಕ್ಕೆ ತೊಂದರೆಯಾಗಿದೆ.
ಪಕ್ಕದ ರಾಜ್ಯ ತೆಲಂಗಾಣದಲ್ಲೂ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇಲ್ಲಿನ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಆಯಾ ಕ್ಷೇತ್ರಗಳನ್ನು ಬಿಟ್ಟು ಬೇರೆಡೆ ಹೋಗದಂತೆ ಸೂಚಿಸಿದ್ದಾರೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ತೊಂದರೆಗೊಳಗಾಗುವ ಜನರಿಗೆ ತುರ್ತಾಗಿ ಸ್ಪಂದಿಸುವಂತೆಯೂ ತಿಳಿಸಿದ್ದಾರೆ.
-
Telangana | Incessant rainfall causes floods in Nirmal district. People seen fishing on main roads. pic.twitter.com/MchuL46I4w
— ANI (@ANI) July 22, 2021 " class="align-text-top noRightClick twitterSection" data="
">Telangana | Incessant rainfall causes floods in Nirmal district. People seen fishing on main roads. pic.twitter.com/MchuL46I4w
— ANI (@ANI) July 22, 2021Telangana | Incessant rainfall causes floods in Nirmal district. People seen fishing on main roads. pic.twitter.com/MchuL46I4w
— ANI (@ANI) July 22, 2021
ಇದನ್ನೂ ಓದಿ: Tokyo Olympics: ವಿಡಿಯೋ ಮೂಲಕ ಭಾರತೀಯ ಕ್ರೀಡಾಪಟುಗಳ ಪ್ರೋತ್ಸಾಹಿಸಲು ಠಾಕೂರ್ ಮನವಿ
ಪ್ರಮುಖವಾಗಿ ಗೋದಾವರಿ, ಕೃಷ್ಣಾ ಪ್ರದೇಶಗಳಲ್ಲಿನ ಜನಪ್ರತಿನಿಧಿಗಳು ಅಲ್ಲಿನ ಮಳೆ ಪರಿಸ್ಥಿತಿ ಅವಲೋಕನ ಮಾಡುವಂತೆಯೂ ತಿಳಿಸಿದ್ದು, ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ಕೊಟ್ಟಿದ್ದಾರೆ. ತೆಲಂಗಾಣ ಭವನದಲ್ಲಿ ಮಾತನಾಡಿರುವ ಸಿಎಂ, ಜನರು ಕೂಡ ಜಾಗೃತಿ ವಹಿಸಬೇಕಾಗಿದ್ದು, ಯಾವುದೇ ರೀತಿಯ ಸಾಹಸಗಳಿಗೆ ಕೈಹಾಕಬೇಡಿ ಎಂದಿದ್ದಾರೆ.