ETV Bharat / bharat

ಪುಟ್ಟ ಹೃದಯದ ಬಗ್ಗೆ ನಿಮಗಿದೆಯೇ ಕಾಳಜಿ?: ಇಲ್ಲಿದೆ ಹೆಲ್ತ್​ ಟಿಪ್ಸ್​

author img

By

Published : Apr 8, 2021, 8:42 PM IST

ಭಾರತದಲ್ಲಿ ಹೃದಯ ರಕ್ತನಾಳದ ಕಾಯಿಲೆಗಳಿಂದ ಮರಣ ಹೊಂದುತ್ತಿರುವವರ ಪ್ರಮಾಣ ಗಣನೀಯವಾಗಿ ಬೆಳೆದಿದೆ ಎಂಬುದನ್ನು ಸಂಶೋಧನಾ ವರದಿಗಳು ಸೂಚಿಸುತ್ತಿವೆ. 1990 ರಲ್ಲಿ 2.26 ದಶಲಕ್ಷ ಹೃದಯ ಸಂಬಂಧಿತ ಕಾಯಿಲೆಯಿಂದ ಸಂಭವಿಸಿರುವ ಮರಣ ಪ್ರಮಾಣ 2020 ರ ವೇಳೆಗೆ 4.77 ದಶಲಕ್ಷಕ್ಕೆ ತಲುಪಿ ಆಘಾತಕ್ಕೆ ಕಾರಣವಾಗಿದೆ.

Heart health is the first step to health
ಹೃದಯ

ಹೈದರಾಬಾದ್​: ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ವರದಿಗಳ ಪ್ರಕಾರ, ಕಳೆದ 20 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಮರಣಕ್ಕೆ ಪ್ರಮುಖ ಕಾರಣವಾಗಿ ಹೃದಯ ಸಂಬಂಧಿತ ಕಾಯಿಲೆಗಳು ಕಂಡು ಬರುತ್ತಿವೆ. ಹೃದಯದ ನಿರಂತರ ಬಡಿತವೇ ಜೀವಂತಿಕೆಯ ಸೆಲೆಯಾಗಿರುವುದರಿಂದ ಇದರ ಆರೋಗ್ಯದ ಕುರಿತು ನಾವೆಲ್ಲರೂ ಗಮನ ಹರಿಸುವುದು ಸೂಕ್ತವಾಗಿದೆ.

ಭಾರತದಲ್ಲಿ ಹೃದಯ ರಕ್ತನಾಳದ ಕಾಯಿಲೆಗಳಿಂದ ಮರಣಹೊಂದುತ್ತಿರುವವರ ಪ್ರಮಾಣ ಗಣನೀಯವಾಗಿ ಬೆಳೆದಿದೆ ಎಂಬುದನ್ನು ಸಂಶೋಧನಾ ವರದಿಗಳು ಸೂಚಿಸುತ್ತಿವೆ. 1990 ರಲ್ಲಿ 2.26 ದಶಲಕ್ಷ ಹೃದಯ ಸಂಬಂಧಿತ ಕಾಯಿಲೆಯಿಂದ ಸಂಭವಿಸಿರುವ ಮರಣ ಪ್ರಮಾಣ 2020 ರ ವೇಳೆಗೆ 4.77 ದಶಲಕ್ಷಕ್ಕೆ ತಲುಪಿ ಆಘಾತಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕವಲ್ಲದ ಕಾಯಿಲೆಗಳು, ವಿಶೇಷವಾಗಿ ಹೃದ್ರೋಗಗಳು ಸಾವಿಗೆ ಪ್ರಮುಖ ಕಾರಣವಾಗಿವೆ. ಹೀಗಾಗಿ, ನಾವು ಹೃದಯದ ಆರೋಗ್ಯದ ಬಗ್ಗೆ ತಿಳಿದಿರಬೇಕು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಲೀಲಾವತಿ ಆಸ್ಪತ್ರೆಯ ಸಲಹೆಗಾರ ಶಶಾಂಕ್ ಜೋಶಿ ತಿಳಿಸಿದ್ದಾರೆ.

ಆರೋಗ್ಯದ ಬಗ್ಗೆ ಸಾಮಾನ್ಯವಾಗಿ ನಡೆಸುವ ಸಂಭಾಷಣೆಯಲ್ಲಿ, ಹೃದಯದ ಆರೋಗ್ಯ ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ, ಸಮಸ್ಯೆ ಬಂದಾಗ ಮಾತ್ರ ಹೃದಯದ ಆರೋಗ್ಯವನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ, ಯಾವುದೇ ವ್ಯಕ್ತಿ ಹೆಚ್ಚಿನ ಕೊಲೆಸ್ಟ್ರಾಲ್ ಅಥವಾ ಹೆಚ್ಚು ತೀವ್ರವಾದ ಸ್ಥಿತಿಯನ್ನು ಹೊಂದಿದ್ದರೆ, ಅದನ್ನು ನಿಯಂತ್ರಿಸಲು ಮಾತ್ರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ನಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಪೂರ್ವಭಾವಿಯಾಗಿ ಮಾಡುವುದರಿಂದ, ಭವಿಷ್ಯದಲ್ಲಿ ಎದುರಾಗಲಿರುವ ಹೃದಯದ ಆರೋಗ್ಯ ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿದಿರುವ ತುರ್ತು ಇದೆ.

ಅನಾರೋಗ್ಯಕರ ಜೀವನಶೈಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ತಿಳಿದಿರುವ ಸತ್ಯ. ಹೃದಯ ಸಂಬಂಧಿತ ಸಮಸ್ಯೆಗಳಿಗೂ ಇದು ಅನ್ವಯವಾಗುತ್ತದೆ. ನಮ್ಮ ವೇಗದ ಜೀವನಶೈಲಿಯಿಂದಾಗಿ ದೀರ್ಘಾವಧಿಯಲ್ಲಿ ಅದು ಬೀರಬಹುದಾದ ಪರಿಣಾಮವನ್ನು ಅರಿತುಕೊಳ್ಳದೇ ಅನಾರೋಗ್ಯಕರ ಆಯ್ಕೆಗಳನ್ನು ಮಾಡಲು ನಮ್ಮನ್ನು ತಳ್ಳುತ್ತದೆ. ಪ್ರಸ್ತುತ ದಿನಗಳಲ್ಲಿ ಜಡ ಜೀವನಶೈಲಿ ಹೆಚ್ಚುತ್ತಿದೆ. ಅಲ್ಲದೇ, ಊಟವನ್ನು ಬಿಡುವುದು ಸೇರಿದಂತೆ ಅನಾರೋಗ್ಯಕರ ಆಹಾರ ಪದ್ಧತಿ ಹೃದಯದ ಆರೋಗ್ಯದ ಹಾನಿಗೆ ಕಾರಣವಾಗುತ್ತಿದೆ. ಇವುಗಳು ತಿಳಿದಿರುವ ಅಂಶಗಳಾಗಿದ್ದರೂ, ಕೆಲವು ಇತರ ಅಂಶಗಳೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಉದಾ: ನಿದ್ರಾಹೀನತೆ.

ಸಫೊಲಾಲೈಫ್​ ನಡೆಸಿದ ಅಧ್ಯಯನದ ಪ್ರಕಾರ, ಮಹಾ ನಗರಗಳಲ್ಲಿ ಶೇಕಡಾ 63 ರಷ್ಟು ಜನರು ಕಡಿಮೆ ನಿದ್ರೆ ಮಾಡುತ್ತಿದ್ದು, ಪರಿಣಾಮ ಇವರೆಲ್ಲರೂ ಹೃದಯ ರೋಗದಿಂದ ಬಳಲುತ್ತಿದ್ದಾರೆ. ಅದೇ ರೀತಿ ಆರೋಗ್ಯವಂತ ಹೃದಯಕ್ಕೆ ಅಪಾಯವನ್ನುಂಟುಮಾಡುವ ಮತ್ತೊಂದು ಅಂಶ ಎಂದರೆ ಅದು ಒತ್ತಡ. ಇದೇ ಅಧ್ಯಯನವು ನಗರಗಳಲ್ಲಿ ವಾಸಿಸುವ ಶೇ. 65 ರಷ್ಟು ಜನರು ಒತ್ತಡದಿಂದ ಬಳಲುತ್ತಿದ್ದಾರೆ ಎಂಬುದನ್ನು ತಿಳಿಸಿದೆ.

ಅಧ್ಯಯನದಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮೆಟ್ರೊ ನಗರಗಳಲ್ಲಿ ವಾಸಿಸುತ್ತಿರುವ ಶೇ, 58 ರಷ್ಟು ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಹೆಚ್ಚಾಗಿ ಪರಿಗಣಿಸುವುದಿಲ್ಲ. ಈ ಅರಿವಿನ ಕೊರತೆ ಹೃದಯ ಆರೋಗ್ಯ ಮಟ್ಟವನ್ನು ಸುಧಾರಿಸುವಲ್ಲಿ ದೊಡ್ಡ ಅಡಚಣೆಯಾಗಿದೆ.

ಹೃದಯ ಸಂಬಂಧಿ ಖಾಯಿಲೆಗೆ ಕಾರಣಗಳು:

  • ಡಬ್ಲ್ಯುಎಚ್‌ಒ ಪ್ರಕಾರ, ಹೃದಯ ರಕ್ತನಾಳಗಳ ಅಸ್ವಸ್ಥತೆಗಳ ಒಂದು ಗುಂಪು. ಅವುಗಳಲ್ಲಿ ಪರಿಧಮನಿಯ ಹೃದಯ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ, ಸಂಧಿವಾತ ಹೃದ್ರೋಗ ಮತ್ತು ಜನ್ಮಜಾತ ಹೃದಯ ಕಾಯಿಲೆಗಳು ಸೇರಿವೆ.
  • 2016 ರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ 17.9 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಇದು ಎಲ್ಲ ಜಾಗತಿಕ ಸಾವುಗಳಲ್ಲಿ ಶೇ.31 ರಷ್ಟಿದೆ. ಈ ಸಾವುಗಳಲ್ಲಿ ಶೇ.85ರಷ್ಟು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಆಗಿವೆ.
  • 2015 ರಲ್ಲಿ ರೋಗ ಲಕ್ಷಣವಿಲ್ಲದ ಕಾಯಿಲೆಗಳಿಂದಾಗಿ 17 ದಶಲಕ್ಷ ಅಕಾಲಿಕ ಮರಣಗಳು (70 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಸಂಭವಿಸಿವೆ. ಶೇ.82ರಷ್ಟು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಈ ಸಾವು ಹೆಚ್ಚಿದ್ದು, ಶೇ. 37ರಷ್ಟು ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗಿವೆ.
  • ಹೆಚ್ಚಾಗಿ ಈ ಕಾಯಿಲೆಗಳು ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ನಿಷ್ಕ್ರಿಯತೆ, ತಂಬಾಕು ಬಳಕೆ ಮತ್ತು ಆಲ್ಕೊಹಾಲ್​ನ ಅತಿಯಾದ ಬಳಕೆಯಿಂದ ಬರುತ್ತವೆ.
  • ಇಂತಹ ಜೀವನಶೈಲಿಯ ಆಯ್ಕೆಗಳು ರಕ್ತದೊತ್ತಡ ಹೆಚ್ಚಾಗಲು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಲು ಮತ್ತು ಬೊಜ್ಜಿಗೆ ಕಾರಣವಾಗಬಹುದು. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಆಹಾರದಲ್ಲಿ ಹೆಚ್ಚಿನ ತರಕಾರಿಗಳು ಮತ್ತು ಫೈಬರ್ ಅನ್ನು ಸೇರಿಸುವುದು, ಉತ್ತಮ ಅಡುಗೆ ಎಣ್ಣೆಯನ್ನು ಬಳಸುವುದು, ಸರಿಯಾದ ಸಮಯಕ್ಕೆ ಊಟ ಹಾಗೂ ನಿತ್ಯ ವ್ಯಾಯಾಮ ಇವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಅತ್ಯುತ್ತಮ ಆರೋಗ್ಯಕ್ಕಾಗಿ ವಾರಕ್ಕೆ ಕನಿಷ್ಠ 4 ದಿನಗಳವರೆಗೆ, ದಿನಕ್ಕೆ 45 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕೆಂದು ಅವರು ಶಿಫಾರಸು ಮಾಡುತ್ತಾರೆ. ಸಾಕಷ್ಟು ನಿದ್ರೆ ಸಹ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ. ಪ್ರತಿ ರಾತ್ರಿ 7 ರಿಂದ 7.5 ಗಂಟೆಗಳ ನಿದ್ರೆ ಮಾಡಬೇಕೆಂದು ಸೂಚಿಸಿದ್ದಾರೆ.

ಧ್ಯಾನ ಮಾಡುವುದು ಮತ್ತು ಒತ್ತಡ ನಿವಾರಣೆಗೆ ಸಮಯ ತೆಗೆದುಕೊಳ್ಳುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಬಹಳ ಸಹಾಯಕವಾಗಿದೆ. ಮತ್ತು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಕೂಡಾ ಹೃದಯದ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ನಾವು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಸಮಾಜದತ್ತ ಸಾಗುತ್ತಿರುವಾಗ, ಅದು ಜೀವನವನ್ನು ಹೆಚ್ಚು ಒತ್ತಡಕ್ಕೆ ಕೊಂಡೊಯ್ಯುತ್ತದೆ ಮತ್ತು ಕಡಿಮೆ ಕ್ರಿಯಾಶೀಲವಾಗಿಸುತ್ತದೆ. ಈ ಸಮಯದಲ್ಲಿ ನಾವು ಆರೋಗ್ಯ ಮತ್ತು ಹೃದಯ ಆರೋಗ್ಯದ ಬಗೆಗೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು. ಆದ್ದರಿಂದ, ಈ ವಿಶ್ವ ಆರೋಗ್ಯ ದಿನವು ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರ ಹೃದಯದ ಆರೋಗ್ಯವನ್ನು ಹೆಚ್ಚಿಸಲಿ ಎಂದು ವೈದ್ಯರು ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.