ETV Bharat / bharat

ಹೊಸ ಐಟಿ ನಿಯಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವಾಟ್ಸ್​ಆ್ಯಪ್-ಫೇಸ್‌ಬುಕ್: ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್​ - ಹೊಸ ಐಟಿ ನಿಯಮ ಸಂಬಂಧಿತ ಸುದ್ದಿ

ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್, ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ನೇತೃತ್ವದ ಪೀಠವು ಆಗಸ್ಟ್ 27ಕ್ಕೆ ಮುಂದೂಡಿದೆ.

Delhi High Court
ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್​
author img

By

Published : Jul 30, 2021, 12:26 PM IST

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಆಗಸ್ಟ್ 27ಕ್ಕೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ನೇತೃತ್ವದ ಪೀಠವು ಆಗಸ್ಟ್ 27 ರಂದು ಈ ಪ್ರಕರಣದ ಮುಂದಿನ ವಿಚಾರಣೆಗೆ ಆದೇಶಿಸಿದೆ.

ಇಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದಿಂದ ಸಮಯ ಕೋರಿದರು. ನಂತರ ನ್ಯಾಯಾಲಯವು ಮೆಹ್ತಾ ಅವರ ಕೋರಿಕೆಯನ್ನು ಅಂಗೀಕರಿಸಿತು. ಕಳೆದ ಜುಲೈ 9 ರಂದು ವಾಟ್ಸ್​ಆ್ಯಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಡೇಟಾ ಸಂರಕ್ಷಣಾ ಮಸೂದೆ ಬರುವವರೆಗೂ ತನ್ನ ಹೊಸ ಗೌಪ್ಯತೆ ನೀತಿ ಜಾರಿಗೆ ತರುವುದಿಲ್ಲ ಎಂದು ವಾಟ್ಸ್​ಆ್ಯಪ್ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ತಿಳಿಸಿದರು. ಅಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ನೋಟಿಸ್‌ಗೆ ವಾಟ್ಸ್​ಆ್ಯಪ್ ಸ್ಪಂದಿಸಿದೆ. ಗೌಪ್ಯತಾ ನೀತಿಗೆ ಆಕ್ಷೇಪಣೆ ಮಾಡುವುದು ಮತ್ತು ಸ್ಪರ್ಧಾ ಆಯೋಗದ ವಿಚಾರಣೆ ಎದುರಿಸುವುದು ಎರಡು ವಿಭಿನ್ನ ವಿಷಯಗಳಾಗಿವೆ ಎಂದು ಅವರು ತಮ್ಮ ವಾದ ಮಂಡಿಸಿದರು.

Delhi High Court
ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್​

ಏಪ್ರಿಲ್ 22ರಂದು ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ಏಕಸದಸ್ಯ ಪೀಠವು ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್‌ನ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಎರಡೂ ಕಂಪನಿಗಳು ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿವೆ. ಏಕ ಸದಸ್ಯ ಪೀಠದ ಮುಂದೆ ವಿಚಾರಣೆಯ ಸಮಯದಲ್ಲಿ, ಹಿರಿಯ ವಕೀಲ ಹರೀಶ್ ಸಾಳ್ವೆ ವಾಟ್ಸ್​ಆ್ಯಪ್ ಪರ ಹಾಜರಾಗಿ, ವಾಟ್ಸಾಪ್‌ನ ಗೌಪ್ಯತೆ ನೀತಿಯನ್ನು ಪ್ರಶ್ನಿಸಲು ಹಾಗೂ ಈ ಬಗ್ಗೆ ನಿರ್ದೇಶನ ನೀಡಲು ಸ್ಪರ್ಧಾ ಆಯೋಗಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದ್ದರು.

ಬಳಕೆದಾರರಿಗೆ ಹೆಚ್ಚಿನ ಪಾರದರ್ಶಕತೆ ನೀಡುವುದು ವಾಟ್ಸ್​ಆ್ಯಪ್​ನ ಹೊಸ ಗೌಪ್ಯತೆ ನೀತಿಯ ಉದ್ದೇಶವಾಗಿದೆ ಎಂದು ಸಂಸ್ಥೆಯ ನೀತಿ ಬಗ್ಗೆ ಸಮರ್ಥಿಸಿಕೊಂಡರು. ಈ ನೀತಿಯು ವಾಣಿಜ್ಯ ಸೇವೆಗಳ ಉತ್ತಮ ಬಳಕೆಯನ್ನು ಸುಗಮಗೊಳಿಸುತ್ತದೆ. ವಾಟ್ಸ್​ಆ್ಯಪ್​ನ ವಾಣಿಜ್ಯ ಸೇವೆ ಪ್ರತ್ಯೇಕವಾಗಿದೆ. ಇದು Facebookಗೆ ಲಿಂಕ್ ಆಗಿದೆ. ವಾಟ್ಸ್​ಆ್ಯಪ್ ಯಾವುದೇ ಬಳಕೆದಾರರ ಖಾಸಗಿ ಸಂಭಾಷಣೆಗಳನ್ನು ನೋಡುವುದಿಲ್ಲ ಎಂದು ಅವರು ಕೋರ್ಟ್​ ಗಮನಕ್ಕೆ ತಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.