ETV Bharat / bharat

ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕೋಶ ತೆಗೆಯುವ ಪ್ರವೃತ್ತಿ: ತಜ್ಞರು ಹೇಳುವುದೇನು? - ಗರ್ಭಕೋಶವನ್ನು ತೆಗೆಯುತ್ತಿರುವ

ಗರ್ಭಕೋಶ ತೆಗೆಯುತ್ತಿರುವ ಪ್ರಕರಣ ಭಾರತದಲ್ಲಿ ಅಧಿಕವಾಗಿದೆ. ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳ ಹಿನ್ನೆಲೆಯಲ್ಲಿ ಯುವ ಮಹಿಳೆಯರಲ್ಲೂ ಈ ಪ್ರವೃತ್ತಿ ಬೆಳೆಯುತ್ತಿದೆ.

ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕೋಶ ನಿವಾರಣೆ; ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ತಜ್ಞರು
hysterectomy-is-increasing-in-women-experts-say-that-awareness-needs-to-be-created-about-this
author img

By

Published : Nov 25, 2022, 11:59 AM IST

ನವ ದೆಹಲಿ: ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಮಹಿಳೆಯರಲ್ಲಿ ಗರ್ಭಕೋಶವನ್ನು ತೆಗೆಯುತ್ತಿರುವ ಬೆಳವಣಿಗೆಯ ಕುರಿತು ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಗರ್ಭಕೋಶ ತೆಗೆಯುತ್ತಿರುವ ಪ್ರಕರಣ ಭಾರತದಲ್ಲಿ ಅಧಿಕವಾಗಿದೆ. ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಯುವ ಮಹಿಳೆಯರಲ್ಲೂ ಈ ಪ್ರವೃತ್ತಿ ಬೆಳೆಯುತ್ತಿದೆ.

ಮಹಿಳೆಯರ ಆರೋಗ್ಯ ವಿಷಯದಲ್ಲಿ ಕುಟುಂಬ ಮಹತ್ವದ ಪಾತ್ರ ವಹಿಸುತ್ತದೆ. ಮಹಿಳೆಗೆ ಉತ್ತಮ ವೈದ್ಯಕೀಯ ಸೇವೆಯ ಬೆಂಬಲ ಬೇಕಿದ್ದು ಇಂತಹ ವಿಷಯದಲ್ಲಿ ಕುಟುಂಬಕ್ಕೆ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ತಜ್ಞರಾದ ಅಮಿತಾ ಬಾಲಿ ವೊಹ್ರಾ.

ದೇಶದಲ್ಲಿ ಅನಗತ್ಯವಾಗಿ ಗರ್ಭಕೋಶ ತೆಗೆಯುತ್ತಿರುವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ವೊಹ್ರಾ, ಭಾರತೀಯ ಮಹಿಳೆಯರಲ್ಲಿ ಬೇಗ ಹೆರಿಗೆ ಆಗುವ ಹಿನ್ನೆಲೆಯಲ್ಲಿ ಯುವ ಜನತೆ ಗರ್ಭಕೋಶ ತೆಗೆಯುವುದಕ್ಕೆ ಮುಂದಾಗುತ್ತಿದ್ದಾರೆ. ಈ ಸಂಬಂಧ ಮಹಿಳೆಯರಿಗೆ ಅರಿವು ಮೂಡಿಸಿ, ಮಾರ್ಗದರ್ಶನ ನೀಡಬೇಕು ಎಂದರು.

'ಗರ್ಭಕೋಶವನ್ನು ಕಾಪಾಡಿಕೊಳ್ಳಿ'- ಎಂಬ ಜಾಗೃತಿ ಅಭಿಯಾನವನ್ನು ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಘಗಳ ಒಕ್ಕೂಟ ಮತ್ತು ಐಎಚ್​ಡಬ್ಲ್ಯೂ ಸಹಕಾರದೊಂದಿಗೆ ಕಳೆದ ಏಪ್ರಿಲ್​ನಲ್ಲಿ ದೇಶಾದ್ಯಂತ ಆರಂಭಿಸಲಾಗಿದೆ.

ಇದನ್ನೂ ಓದಿ: ಇಷ್ಟವಿಲ್ಲದವರಿಗೂ ತಿನ್ನುವಂತೆ ಮಾಡುತ್ತದೆ ಈ ಆಹಾರ.. ಸಂಶೋಧನೆಯಿಂದ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.