ಮುಂಬೈ: ಆನ್‌ಲೈನ್ ಪಾವತಿಯಲ್ಲಿ ಹೆಚ್ಚು ಬಳಕೆಯಲ್ಲಿರುವ ಫೋನ್ ಪೇ ಕೇಂದ್ರ ಕಚೇರಿ ಮುಂಬೈನಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ಕಂಪನಿ ನಿರ್ಧರಿಸಿದೆ. ಈ ಬಗ್ಗೆ ಆಗಸ್ಟ್ 16 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿದ್ದ ಫೋನ್ಪೇ ಆಡಳಿತ ಕಚೇರಿ ಕರ್ನಾಟಕಕ್ಕೆ ಸ್ಥಳಾಂತರ ಮಾಡಲು ನಿರ್ಣಯಿಸಿದ್ದು, ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಕಂಪನಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಜಾಹೀರಾತು ಕೂಡ ನೀಡಿದ್ದು, ಕರ್ನಾಟಕದಲ್ಲಿ ಸ್ಥಳ ನಿಗದಿ ಮಾಡಲು ಕೋರಿದೆ.
ವೇದಾಂತ ಮತ್ತು ಫಾಕ್ಸ್‌ಕಾನ್ ಗ್ರೂಪ್‌ಗಳು ಪುಣೆಯಲ್ಲಿ ಆರಂಭಿಸಬೇಕಿದ್ದ ಸೆಮಿಕಂಡಕ್ಟರ್ ಘಟಕ ಯೋಜನೆಯು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಗೊಂಡಿತ್ತು. ಇದೀಗ ಫೋನ್ಪೇ ಕಚೇರಿ ಕರ್ನಾಟಕಕ್ಕೆ ವಲಸೆ ಹೋಗುತ್ತಿರುವುದು ಮತ್ತೊಂದು ಸುತ್ತಿನ ರಾಜಕೀಯ ಕಿತ್ತಾಟಕ್ಕೆ ನಾಂದಿ ಹಾಡಿದೆ.
ಓದಿ: ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮುಂದಾದ ವೇದಾಂತ, ಫಾಕ್ಸ್‌ಕಾನ್