ನೈನಿತಾಲ್(ಉತ್ತರಾಖಂಡ): ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ(13 ವರ್ಷ) ಬಾಲಕಿಯ ಗರ್ಭಪಾತಕ್ಕೆ ಉತ್ತರಾಖಂಡ ಹೈಕೋರ್ಟ್ ಅನುಮತಿ ಸೂಚಿಸಿದೆ. ಹಿರಿಯ ನ್ಯಾಯಮೂರ್ತಿ ಸಂಜಯ್ ಮಿಶ್ರಾ ಅವರ ಪೀಠ ಬುಧವಾರ ಈ ಆದೇಶ ನೀಡಿದೆ.
ತಜ್ಞ ವೈದ್ಯರ ತಂಡವನ್ನು ರಚಿಸಿ 25 ವಾರಗಳ ಒಳಗೆ ಗರ್ಭಪಾತ ಮಾಡಿಸುವಂತೆ ಸೂಚನೆಗಳನ್ನು ನೀಡಿದೆ. ಅತ್ಯಾಚಾರ ಸಂತ್ರಸ್ತೆಯ ತಂದೆಯು ಡೆಹ್ರಾಡೂನ್ ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಡೂನ್ ಆಸ್ಪತ್ರೆಗೆ ಸೂಕ್ತ ವಿಧಾನಕ್ಕಾಗಿ ನಿರ್ದೇಶನಗಳನ್ನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
1971 ರ ವೈದ್ಯಕೀಯ ಗರ್ಭಪಾತದ ಕಾಯ್ದೆ ಮತ್ತು ದೆಹಲಿ ಹೈಕೋರ್ಟ್, ಹಾಗೇ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ಗರ್ಭಪಾತಕ್ಕೆ ಅನುಮತಿಸಲಾಯಿತು. ಉತ್ತರಾಖಂಡ ಹೈಕೋರ್ಟ್ ಹುಡುಗಿ ಅಪ್ರಾಪ್ತ ವಯಸ್ಕಳಾದ್ದರಿಂದ ಮಾನಸಿಕ ಬೆಳವಣಿಗೆಗೆ ಹಾನಿಕಾರಕವಾಗಬಹುದು ಮತ್ತು ಅನಗತ್ಯ ಗರ್ಭಧಾರಣೆಯ ಕಾರಣ 25 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡಿದೆ. ಪ್ರಕರಣದ ಪ್ರಗತಿ ಪರಿಶೀಲನೆಗಾಗಿ ನಾಳೆಗೆ (ಡಿಸೆಂಬರ್ 9ಕ್ಕೆ) ವಿಚಾರಣೆಯನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: 'ಮಗುವಿಗೆ ಜನ್ಮ ನೀಡಬೇಕೇ, ಬೇಡವೇ ಎಂಬುದು ಮಹಿಳೆಯ ನಿರ್ಧಾರ': 8 ತಿಂಗಳ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ