ETV Bharat / bharat

ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಶಾಸಕ ಮುಖೇಶ್​: ಬಾಲಕ ಹೇಳಿದ್ದೇನು ಗೊತ್ತಾ? - MLA Mukesh Phone call controversy

ಕೊಲ್ಲಂ ಶಾಸಕ ಎಂ.ಮುಖೇಶ್, ತನ್ನ ಬಳಿ​ ಸಹಾಯ ಕೇಳಿ ಕರೆ ಮಾಡಿದ ವಿದ್ಯಾರ್ಥಿಯನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಆ ವಿದ್ಯಾರ್ಥಿ ಘಟನೆ ಸಂಬಂಧ ಹೇಳಿಕೆ ನೀಡಿದ್ದಾನೆ.

mla-mukesh
ಕೊಲ್ಲಂ ಶಾಸಕ ಎಂ.ಮುಖೇಶ್ ಫೋನ್​ ವಿವಾದ
author img

By

Published : Jul 6, 2021, 9:07 AM IST

ಪಾಲಕ್ಕಾಡ್: ಇಲ್ಲಿನ 10 ನೇ ತರಗತಿ ವಿದ್ಯಾರ್ಥಿಯೋರ್ವ ನಟ, ಶಾಸಕ ಎಂ.ಮುಖೇಶ್ ಅವ​ರಿಗೆ ಸತತವಾಗಿ ಕರೆ ಮಾಡಿ ಸಹಾಯ ನೀಡುವಂತೆ ದೂರವಾಣಿ ಮೂಲಕ ಒತ್ತಾಯಿಸುತ್ತಿದ್ದ. ಈ ವೇಳೆ ಕೋಪಗೊಂಡ ಮುಖೇಶ್​ ಫೋನ್​ ಮೂಲಕ ಕಿರುಚಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ.

ಶಾಸಕರಿಗೆ ಕರೆ ಮಾಡಿದ ವಿದ್ಯಾರ್ಥಿ ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಲಂನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. "ಆನ್​ಲೈನ್​​ ಕ್ಲಾಸ್​ಗೆ ಭಾಗಿಯಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳ ಬಳಿ ಕೇಳುವಂತೆ ಶಿಕ್ಷಕರು ತಿಳಿಸಿದ್ದರು. ಹೀಗಾಗಿ ನಾನು ಸತತವಾಗಿ ಮುಖೇಶ್​ ಸರ್​ಗೆ ಕರೆ ಮಾಡಿದೆ. ನಾನು ಸುಮಾರು 6 ಬಾರಿ ಕರೆ ಮಾಡಿದ್ದೇನೆ. ಇದರಿಂದ ಅವರು ಕೋಪಗೊಂಡರು. ಯಾರಾದರೂ ಕೋಪಗೊಳ್ಳಬಹುದು" ಎಂದು ಹೇಳಿದ್ದಾನೆ.

mla-mukesh
ಶಾಸಕರಿಗೆ ಕರೆ ಮಾಡಿದ ವಿದ್ಯಾರ್ಥಿ

ಇದನ್ನು ಓದಿ: ಸಹಾಯ ಕೋರಿ ಸತತ ಫೋನ್​ ಕಾಲ್​.. ವಿದ್ಯಾರ್ಥಿಗೆ ಹೀಗ್​ ಮಾಡೋದಾ ಕೊಲ್ಲಂ ಶಾಸಕ ಮುಖೇಶ್​?

ದೂರು ನೀಡಲು ಕರೆ ಮಾಡಿದ ವಿದ್ಯಾರ್ಥಿಗೆ ಶಾಸಕ ಮುಖೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಈ ಆರೋಪವನ್ನು ತಳ್ಳಿಹಾಕಿದ ಶಾಸಕ, ಮಗುವಿನ ಜೊತೆ ಕೆಟ್ಟ ಭಾಷೆಯಲ್ಲಿ ಮಾತನಾಡುವ ವ್ಯಕ್ತಿಯಲ್ಲ. ಒತ್ತಾಯಪೂರ್ವಕವಾಗಿ ಫೋನ್​ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಫೋನ್ ಕರೆ ವಿವಾದದ ನಂತರ ಸಿಪಿಎಂ ಮುಖಂಡರು ಮತ್ತು ಪಾಲಕ್ಕಾಡ್ ಸಂಸದ ವಿ.ಕೆ.ಶ್ರೀಕಂದನ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು. "ಈ ವಿವಾದದಲ್ಲಿ ಯಾವುದೇ ಕೆಟ್ಟ ಉದ್ದೇಶವಿಲ್ಲ. ಎಲ್ಲವನ್ನೂ ಪರಿಹರಿಸಲಾಗಿದೆ" ಎಂದು ಒಟ್ಟಪ್ಪಲಂ ಮಾಜಿ ಶಾಸಕ ಹಮ್ಸಾ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.