ETV Bharat / bharat

ಹತ್ರಾಸ್ ಅತ್ಯಾಚಾರ ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಶಿಕ್ಷೆ, ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್​ - ಸಿಬಿಐನಿಂದ ಪ್ರಕರಣದ ತನಿಖೆ

ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಖುಲಾಸೆ - ಪ್ರಮುಖ ಆರೋಪಿಗೆ ಶಿಕ್ಷೆ - ಉತ್ತರ ಪ್ರದೇಶದ ಹತ್ರಾಸ್‌ನ ನ್ಯಾಯಾಲಯದ ತೀರ್ಪು ಪ್ರಕಟ - ಸಂತ್ರಸ್ತೆಯ ಪರ ವಕೀಲ ಮಹಿಪಾಲ್ ಸಿಂಗ್, ಯುವತಿಯ ಕುಟುಂಬದಿಂದ ತೀರ್ಪಿನ ಬಗ್ಗೆ ಅಸಮಾಧಾನ.

hathras murder case
ಹತ್ರಾಸ್ ಅತ್ಯಾಚಾರ ಕೊಲೆ ಪ್ರಕರಣ
author img

By

Published : Mar 2, 2023, 8:25 PM IST

ಹತ್ರಾಸ್ (ಉತ್ತರ ಪ್ರದೇಶ): 2020ರಲ್ಲಿ ಹತ್ರಾಸ್​ನಲ್ಲಿ ನಡೆದ 19 ವರ್ಷದ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಹತ್ರಾಸ್‌ನ ನ್ಯಾಯಾಲಯವು ಗುರುವಾರ ಪ್ರಮುಖ ಆರೋಪಿಯನ್ನು ಮಾತ್ರ ದೋಷಿ ಎಂದು ಘೋಷಿಸಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಎಸ್ಸಿ, ಎಸ್ಟಿ ಕಾಯಿದೆಯ ಸೆಕ್ಷನ್ 304ರ ಅಡಿ ಸಂದೀಪ್ ಸಿಂಗ್ ಅವರನ್ನು ದೋಷಿ ಎಂದು ಘೋಷಿಸಿದೆ.

ಅತ್ಯಾಚಾರ ಪ್ರಕರಣದಿಂದ ಮೂವರು ಖುಲಾಸೆ: ರವಿ, ರಾಮು ಮತ್ತು ಲವಕುಶ್ ಎಂದು ಖುಲಾಸೆಗೊಂಡ ಮೂವರನ್ನು ಗುರುತಿಸಲಾಗಿದೆ. ಯುವತಿ ಕುಟುಂಬವು ತೀರ್ಪಿನಿಂದ ಸಮಾಧಾನವಾಗಿಲ್ಲ. ನ್ಯಾಯಕ್ಕಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಎಂದು ಸಂತ್ರಸ್ತೆಯ ಪರ ವಕೀಲ ಮಹಿಪಾಲ್ ಸಿಂಗ್ ತಿಳಿಸಿದರು. ಪ್ರಮುಖ ಆರೋಪಿ ಸಂದೀಪ್‌ಗೆ ಮಾತ್ರ ಕೋರ್ಟ್​ ಶಿಕ್ಷೆ ವಿಧಿಸಿದೆ. ಕೆಳ ನ್ಯಾಯಾಲಯದ ಈ ತೀರ್ಪಿನಿಂದ ನಮಗೆ ತೃಪ್ತಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರದ್ಧಾಳ ಹತ್ಯೆ ರೀತಿಯಲ್ಲಿ ಪತ್ನಿಯನ್ನೇ ಕೊಲೆಗೈದ ಪತಿ: ಮೂವರು ಆರೋಪಿಗಳ ಬಂಧನ..!

ಸಿಬಿಐನಿಂದ ಪ್ರಕರಣದ ತನಿಖೆ: 2020ರ ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯನ್ನು ನಾಲ್ವರು ಮೇಲ್ಜಾತಿ ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವತಿ ಮೃತಪಟ್ಟಿದ್ದಳು. ಸಂತ್ರಸ್ತೆಯ ಅಂತ್ಯಕ್ರಿಯೆಯು ಆಕೆಯ ಮನೆಯ ಸಮೀಪ ರಾತ್ರಿ ಸಮಯದಲ್ಲೇ ಮಾಡಲಾಗಿತ್ತು. 2020ರ ಅಕ್ಟೋಬರ್ 2ರಂದು, ಸರ್ಕಾರವು ಅಂದಿನ ಎಸ್ಪಿ ಮತ್ತು ಸಿಒ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಿತ್ತು. ಇದಾದ ಎರಡು ದಿನಗಳ ನಂತರ, ಅತ್ಯಾಚಾರ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ನಿರ್ಧರಿಸಿತ್ತು.

ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ

ಸಂತ್ರಸ್ತೆ ಕುಟುಂಬ ಹೈಕೋರ್ಟ್‌ನ ಮೊರೆ ಹೋಗಲಿದೆ: ಸಿಬಿಐ ಅಕ್ಟೋಬರ್ 11ರಂದು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು. 2020ರ ಡಿಸೆಂಬರ್ 18 ರಂದು ವಿಶೇಷ ನ್ಯಾಯಾಲಯವು ಆರೋಪಿಗಳಾದ ಸಂದೀಪ್, ಲವ್ ಕುಶ್, ರವಿ ಮತ್ತು ರಾಮ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಚಾರ್ಟ್​ಶೀಟ್ ಸಲ್ಲಿಸಿತ್ತು. ಸ್ಥಳೀಯ ಪೊಲೀಸರೇ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದರು. ಆದರೆ, ಕುಟುಂಬದವರ ಅಪೇಕ್ಷೆಯಂತೆ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು. ಮೂರು ಆರೋಪಿಗಳ ಖುಲಾಸೆಯಿಂದ ಯುವತಿ ಕುಟುಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಶೀಘ್ರದಲ್ಲೇ ಹೈಕೋರ್ಟ್‌ನ ಮೊರೆ ಹೋಗುವುದಾಗಿ ಸಂತ್ರಸ್ತೆಯ ಕುಟುಂಬ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.