ETV Bharat / bharat

ಹಥ್ರಾಸ್ ಪ್ರಕರಣದ ತನಿಖೆಯ ಎಸ್​ಐಟಿ ವರದಿ ಹೈಕೋರ್ಟ್​ಗೆ ಒಪ್ಪಿಸಲಿರುವ ಯೋಗಿ ಸರ್ಕಾರ

ಉತ್ತರ ಪ್ರದೇಶದ ಹಥ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ವಿಶೇಷ ತನಿಖಾ ದಳ ತನಿಖೆ ಪೂರ್ಣಗೊಳಿಸಿದ್ದು, ಉತ್ತರ ಪ್ರದೇಶ ಸರ್ಕಾರಕ್ಕೆ ವರದಿ ಒಪ್ಪಿಸಿದೆ.

yogi adityanath
ಯೋಗಿ ಆದಿತ್ಯನಾಥ್
author img

By

Published : Nov 2, 2020, 10:11 PM IST

ಲಖನೌ(ಉತ್ತರ ಪ್ರದೇಶ): ಹಥ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎ ಯೋಗಿ ಆದಿತ್ಯನಾಥ್ ಅವರಿಂದ ರಚಿಸಲ್ಪಟ್ಟಿದ್ದ ವಿಶೇಷ ತನಿಖಾ ದಳ ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಿದೆ. ಈ ವರದಿಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಕೋರ್ಟ್​ಗೆ ಒಪ್ಪಿಸಲಿದೆ.

ಸರ್ಕಾರ ಕೊಟ್ಟಿದ್ದ ಕಾಲಾವಕಾಶದಂತೆ ಹಿಂದಿನ ತಿಂಗಳು ವಿಶೇಷ ತನಿಖಾ ದಳ ತನ್ನ ವರದಿಯನ್ನು ಒಪ್ಪಿಸಬೇಕಿತ್ತು. ಆದರೆ ತನಿಖಾ ತಂಡದ ಅಧಿಕಾರಿಗಳ ಮನವಿಯ ಮೇರೆಗೆ ಮತ್ತಷ್ಟು ದಿನಗಳ ಕಾಲ ಅವಕಾಶ ನೀಡಲಾಗಿತ್ತು.

ಎಸ್​ಐಟಿ ತನಿಖೆ ನಡೆಸಲು ಸೆಪ್ಟೆಂಬರ್ 30ರಂದು ಆದೇಶಿಸಲಾಗಿತ್ತು. ತನಿಖೆ ಕೈಗೊಂಡ ಎಸ್​ಐಟಿ ಅಕ್ಟೋಬರ್ 7ರಂದು ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿತ್ತು. ಇದಾದ ನಂತರ ಮತ್ತಷ್ಟು ಅವಧಿ ನೀಡಲಾಗಿತ್ತು. ಈಗ ಎಸ್​ಐಟಿ ತನಿಖೆ ಪೂರ್ಣಗೊಳಿಸಿದೆ.

ಸಿಬಿಐ ಕೂಡ ಈ ತನಿಖೆಯ ವಿಚಾರಣೆ ನಡೆಸುತ್ತಿದ್ದು, ಈ ತನಿಖೆ ಅಲಹಾಬಾದ್​ ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ನಡೆಯಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಸಿಬಿಐ ತನಿಖೆ ಪೂರ್ಣಗೊಂಡ ನಂತರವೇ ವಿಚಾರಣೆಯನ್ನು ಉತ್ತರ ಪ್ರದೇಶದಿಂದ ಬೇರೆಡೆಗೆ ವರ್ಗಾವಣೆ ಮಾಡುವ ಕುರಿತಾದ ಮನವಿಯನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.