ETV Bharat / bharat

Shocking.. ಸಬ್‌ಇನ್ಸ್‌ಪೆಕ್ಟರ್​ಗೆ ಗುಂಡಿಕ್ಕಿ ಕೊಂದ ಕಾನ್ಸ್​ಟೇಬಲ್! - ದೆಹಲಿ ಕಾನ್ಸ್​ಟೇಬಲ್

ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ಹರಿಯಾಣದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್​ನನ್ನು ದೆಹಲಿಯ ಪೊಲೀಸ್ ಕಾನ್ಸ್​ಟೇಬಲ್​​ ಗುಂಡಿಕ್ಕಿ ಹತೈಗೈದಿದ್ದಾರೆ.

ಹರಿಯಾಣ ಸಬ್​ ಇನ್ಸ್‌ಪೆಕ್ಟರ್​ನ ಗುಂಡಿಕ್ಕಿ ಕೊಂದ ದೆಹಲಿ ಕಾನ್ಸ್​ಟೇಬಲ್

author img

By

Published : Oct 10, 2021, 12:55 PM IST

ನವದೆಹಲಿ: ಹರಿಯಾಣದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್​ನನ್ನು ದೆಹಲಿಯ ಪೊಲೀಸ್ ಕಾನ್ಸ್​ಟೇಬಲ್​​ ಗುಂಡಿಕ್ಕಿ ಸಾಯಿಸಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಮೃತ ಸಬ್​ ಇನ್ಸ್‌ಪೆಕ್ಟರ್​ಅನ್ನು ರೋಹ್ಟಕ್ ಮೂಲದ ವೀರೇಂದ್ರ ಎಂದು ಗುರುತಿಸಲಾಗಿದೆ. ಇವರು ಕಳೆದ ಐದಾರು ದಿನಗಳಿಂದ ದೆಹಲಿಯ ಕೃಷ್ಣ ನಗರದಲ್ಲಿರುವ ತಮ್ಮ ಸೋದರ ಮಾವನ ಮನೆಯಲ್ಲಿ ತಂಗಿದ್ದರು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ವಿಕ್ರಮ್‌ ಎಂಬ ದೆಹಲಿಯ ಕಾನ್ಸ್​ಟೇಬಲ್ ವೀರೇಂದ್ರ ಅವರ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಇದನ್ನೂ ಓದಿ: ಶಹಬ್ಬಾಸ್..! 58 ಸಿಸಿಟಿವಿ ಪರಿಶೀಲಿಸಿ Hit and run Case ಭೇದಿಸಿದ ಬೆಂಗಳೂರು ಪೊಲೀಸ್​

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇವರಿಬ್ಬರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಡಿಸಿಪಿ ಗೌರವ್ ಶರ್ಮಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.