ನುಹ್: ಹರಿಯಾಣದ ನುಹ್ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷ, ಹಿಂಸಾಚಾರದಲ್ಲಿ ಅಪಾರ ಆಸ್ತಿಪಾಸ್ತಿ ನಾಶ, ಲೂಟಿ ಮಾಡಿದ ಆರೋಪಿಗಳಿಗೆ ಸಂಬಂಧಿಸಿದ ಅಕ್ರಮ ಕಟ್ಟಡ, ಅಂಗಡಿಗಳನ್ನು ನೆಲಸಮ ಮಾಡುವ ಕಾರ್ಯಾಚರಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು (ಸೋಮವಾರ) ತಡೆ ನೀಡಿತು.
ಆಗಸ್ಟ್ 1ರಂದು ನುಹ್ನಲ್ಲಿ ಬ್ರಜ್ ಮಂಡಲ್ ಶೋಭಾಯಾತ್ರೆಯ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದಿತ್ತು. ನಂತರ ಜಿಲ್ಲೆಯಲ್ಲಿ ಅತಿಕ್ರಮಣದ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಿತ್ತು. ಈವರೆಗೆ 35 ಕಡೆಗಳಲ್ಲಿ ಬುಲ್ಡೋಜರ್ ಬಳಸಿ ಅಕ್ರಮ ಕಟ್ಟಡಗಳು, ಅಂಗಡಿಗಳು, ಹೋಟೆಲ್ಗಳನ್ನು ನೆಲಸಮ ಮಾಡಲಾಗಿದೆ. ಒತ್ತುವರಿಯಾಗಿದ್ದ 57 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
-
#WATCH | Barricading & checking underway by Haryana Police in Nuh.
— ANI (@ANI) August 7, 2023 " class="align-text-top noRightClick twitterSection" data="
Curfew will be lifted in Nuh from 9 am to 1 pm today for the movement of the public. pic.twitter.com/Bt2OzwptdL
">#WATCH | Barricading & checking underway by Haryana Police in Nuh.
— ANI (@ANI) August 7, 2023
Curfew will be lifted in Nuh from 9 am to 1 pm today for the movement of the public. pic.twitter.com/Bt2OzwptdL#WATCH | Barricading & checking underway by Haryana Police in Nuh.
— ANI (@ANI) August 7, 2023
Curfew will be lifted in Nuh from 9 am to 1 pm today for the movement of the public. pic.twitter.com/Bt2OzwptdL
ಸರ್ಕಾರದ ಬಲ್ಡೋಜರ್ ಕಾರ್ಯಾಚರಣೆ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನುಹ್ ಜಿಲ್ಲೆಯಲ್ಲಿ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ತಕ್ಷಣಕ್ಕೆ ತಡೆ ಹಾಕಿ ಆದೇಶಿಸಿದೆ.
ಕಲ್ಲು ತೂರಾಟ ನಡೆದ ಹೋಟೆಲ್ ಧ್ವಂಸ: ನುಹ್ ನಗರದ ನಲ್ಹಾದ್ ಪ್ರದೇಶದಲ್ಲಿರುವ ಸಹಾರಾ ಹೋಟೆಲ್ ಮೇಲಿಂದ ಕಲ್ಲು ತೂರಾಟ ನಡೆಸಲಾಗಿತ್ತು. ಬಳಿಕ ಹೋಟೆಲ್ ಪಕ್ಕದಲ್ಲಿದ್ದ ಗೋದಾಮನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿತ್ತು. ಹೀಗಾಗಿ ಹೋಟೆಲ್ ಅನ್ನು ಅಧಿಕಾರಿಗಳು ಅಕ್ರಮ ನಿರ್ಮಾಣದ ಅಡಿಯಲ್ಲಿ ನೆಲಸಮ ಮಾಡಿದ್ದಾರೆ. ಅದರ ಪಕ್ಕದ ಹಲವು ಮನೆಗಳು, ಸೇರಿದಂತೆ ಸ್ಲಂಗಳನ್ನೂ ತೆರವು ಮಾಡಿಸಲಾಗಿದೆ.
156 ಜನರ ಬಂಧನ, ಇಂಟರ್ನೆಟ್ ಸ್ಥಗಿತ: ನುಹ್ ಹಿಂಸಾಚಾರದ ನಂತರ ಪರಿಸ್ಥಿತಿ ಸಹಜವಾಗಿದ್ದರೂ, ಮುನ್ನೆಚ್ಚರಿಕೆಯಾಗಿ ಆ.8 ರವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಇನ್ನೂ ಕರ್ಫ್ಯೂ ಜಾರಿಯಲ್ಲಿದೆ. ಈವರೆಗೂ 156 ಜನರನ್ನು ಬಂಧಿಸಲಾಗಿದೆ. ಜನರು ಕಠಿಣ ನಿರ್ಬಂಧಗಳಿಂದ ತೊಂದರೆ ಅನುಭವಿಸದಿರಲಿ ಎಂಬ ಕಾರಣಕ್ಕಾಗಿ ಸೋಮವಾರ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.
ಬ್ಯಾಂಕ್, ಎಟಿಎಂ ಪುನಾರಂಭ: ನುಹ್ನಲ್ಲಿ ಹಿಂಸಾಚಾರ ನಡೆದು 8ನೇ ದಿನವಾದ ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬ್ಯಾಂಕ್ ಮತ್ತು ಎಟಿಎಂಗಳನ್ನು ತೆರೆಯಲು ಆದೇಶ ನೀಡಲಾಗಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಬ್ಯಾಂಕ್‌ಗಳಲ್ಲಿ ಹಣಕಾಸು ವಹಿವಾಟು ನಡೆಸಲು ಅನುಮತಿಸಿದರೆ, ಎಟಿಎಂಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತವೆ. ಬ್ಯಾಂಕ್, ಎಟಿಎಂ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದ್ದರೂ ಸಾಮಾನ್ಯ ದಿನಗಳಲ್ಲಿ ಕಂಡು ಬರುತ್ತಿದ್ದಷ್ಟು ಜನರು ಕಾಣಸಿಗುತ್ತಿಲ್ಲ.
ಇದನ್ನೂ ಓದಿ: ಹರಿಯಾಣ ಹಿಂಸಾಚಾರ: ಇಂದು ಸಹ ಮುಂದುವರಿದ ಬುಲ್ಡೋಜರ್ ಸದ್ದು, ಸಮಾಜಘಾತುಕರಿಗೆ ತಟ್ಟಿದ ಬಿಸಿ