ಡಾರ್ಜಿಲಿಂಗ್(ಪಶ್ಚಿಮ ಬಂಗಾಳ): ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಬಿಪಿನ್ ರಾವತ್ ಅವರ ಭದ್ರತಾ ಸಿಬ್ಬಂದಿ ಮತ್ತು ಗೂರ್ಖಾ ರೈಫಲ್ಸ್‌ನಲ್ಲಿ ಹವಿಲ್ದಾರ್ ಆಗಿದ್ದ ಸತ್ಪಾಲ್ ರಾಯ್ ಕೂಡಾ ಕೊನೆಯುಸಿರೆಳೆದಿದ್ದಾರೆ.
![Habildar from Derjeeling died in Chopper crash in Coonoor](https://etvbharatimages.akamaized.net/etvbharat/prod-images/wb-slg-03-bipin-rawat-satpal-rai-7209673_08122021220331_0812f_1638981211_769_0912newsroom_1639013442_300.jpg)
ಡಾರ್ಜಿಲಿಂಗ್‌ನ ತಾಕ್ಡಾದ ಗ್ಲೆನ್‌ಬರ್ನ್‌ನಲ್ಲಿರುವ ಮನೇದರಾ ನಿವಾಸಿ ಸತ್ಪಾಲ್ ರಾಯ್ ಅವರು ಬಿಪಿನ್ ರಾವತ್ ಅವರೊಂದಿಗೆ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು.
ಸಿಲಿಗುರಿಯ ಹಶ್ಮಿ ಚೌಕ್‌ನಲ್ಲಿ ಸೇರಿದ ಸ್ಥಳೀಯರು ಮೇಣದಬತ್ತಿಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್.ಪೊನ್ನಂಬಲಂ, ನಾವು ವಿಷಯ ತಿಳಿಯುತ್ತಿದ್ದಂತೆ, ಕುಟುಂಬವನ್ನು ಸಂಪರ್ಕಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!