ETV Bharat / bharat

ಜ್ಞಾನವಾಪಿ ಮಸೀದಿ ವಿವಾದ: ವಾದ ಆಲಿಸಿ ತೀರ್ಪು ಕಾಯ್ದಿರಿಸಿದ ವಾರಾಣಸಿ ಕೋರ್ಟ್.. ನಾಳೆ ಆದೇಶ ಸಂಭವ - ಜ್ಞಾನವಾಪಿ ಮಸೀದಿ ವಿವಾದ ತೀರ್ಪು ನಾಳೆ

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ವಾರಾಣಸಿ ಕೋರ್ಟ್​ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

gyanvapi-mosque-row
ಜ್ಞಾನವಾಪಿ ಮಸೀದಿ ವಿವಾದ
author img

By

Published : May 23, 2022, 5:00 PM IST

ವಾರಾಣಸಿ (ಉತ್ತರಪ್ರದೇಶ): ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ, ಮಸೀದಿ ಸರ್ವೇ ಕಾರ್ಯ ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ವಾರಾಣಸಿ ಕೋರ್ಟ್​ ತೀರ್ಪು ಕಾಯ್ದಿರಿಸಿದೆ. ನಾಳೆ ಆದೇಶ ನೀಡುವ ಸಾಧ್ಯತೆ ಇದೆ. ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಪರರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಸಂಘಟನೆ, ಮಸೀದಿ ಪರವಾಗಿ ಶಿವಲಿಂಗ ಪತ್ತೆಯಾದ ಜಾಗವನ್ನು ನಿರ್ಬಂಧಿಸಿದ್ದರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.

ಇಂದು ಕೋರ್ಟ್​ನಲ್ಲಿ ನಡೆದ ವಾದ - ಪ್ರತಿವಾದದ ವೇಳೆ ಮಸೀದಿ ಪರ ವಕೀಲರು, 1991 ರ ಪೂಜಾ ಸ್ಥಳಗಳ ಕಾಯ್ದೆಯನ್ನು ಉಲ್ಲೇಖಿಸಿ ಜ್ಞಾನವಾಪಿ ಸಮೀಕ್ಷೆ ಮತ್ತು ಪ್ರಕರಣವನ್ನು ಪರಿಗಣಿಸಲು ಕೋರಿದ್ದಾರೆ. ಇನ್ನೊಂದೆಡೆ ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ವುಜು (ಪ್ರಾರ್ಥನೆ) ಮಾಡಿದ್ದಾರೆ. ಇವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಬೇಕು ಎಂದು ಹಿಂದೂಪರ ವಕೀಲರು ವಾದಿಸಿದ್ದಾರೆ.

ನಾಳೆಯ ತೀರ್ಪಿನ ಮೇಲೆ ಕಣ್ಣು: ವಾರಾಣಸಿ ಕೋರ್ಟ್ ನಾಳೆ ನೀಡಲಿರುವ ಆದೇಶದ ಮೇರೆಗೆ ಪ್ರಕರಣದ ವಿಚಾರಣೆ ಹೇಗೆ ಮುಂದುವರಿಯಲಿದೆ ಎಂಬುದು ನಿರ್ಧಾರವಾಗಲಿದೆ. ಸುಪ್ರೀಂಕೋರ್ಟ್ ನೀಡಿರುವ ಆದೇಶದ ಆದ್ಯತೆ ಮೇರೆಗೆ ಅರ್ಜಿಯ ವಿಚಾರಣೆ ನಡೆಸಬೇಕೆಂದು ಮುಸ್ಲಿಂ ಸಮಿತಿ ಪರ ವಕೀಲರು ವಾದ ಮಂಡಿಸಿದ್ದರು.

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಸಮೀಕ್ಷೆ ನಡೆಸಿರುವ ಆಯೋಗದ ವರದಿಯ ಅಂಶದ ಆಧಾರದ ಮೇಲೆ ವಿಚಾರಣೆ ನಡೆಸಬೇಕು ಎಂದು ಹಿಂದೂ ಪರ ವಕೀಲರು ಪ್ರತಿವಾದ ಮಂಡಿಸಿರುವುದಾಗಿ ತಿಳಿದು ಬಂದಿದೆ. ಮಸೀದಿಯನ್ನು ಸರ್ವೇ ಮಾಡಿ ಸಲ್ಲಿಸಲಾದ ವರದಿಯನ್ನು ಕೋರ್ಟ್​ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ. ಇನ್ನು ಈ ಪ್ರಕರಣದ ಕುರಿತು ಸುಪ್ರೀಂಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ, ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿಯುಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಓದಿ: ವಿಸ್ಮಯಾ ಕೊಲೆ ಕೇಸ್​ನಲ್ಲಿ ಪತಿಯೇ ಆರೋಪಿ.. ಕೇರಳ ಕೋರ್ಟ್​ನಿಂದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.