ETV Bharat / bharat

ಜ್ಞಾನವಾಪಿ ಮಸೀದಿ ಅರ್ಜಿದಾರ ಮಹಿಳೆ ಪತಿಗೆ ಪಾಕಿಸ್ತಾನದಿಂದ ಶಿರಚ್ಚೇದ ಬೆದರಿಕೆ - ವಾರಣಾಸಿ ಕೋರ್ಟ್​ನಲ್ಲಿ ವಿಚಾರಣೆ

shivalinga found in Gyanvapi mosque ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೋರಿ ಅರ್ಜಿ ಸಲ್ಲಿಸಿದ ದೂರುದಾರೆ ಪತ್ನಿಗೆ ಪಾಕಿಸ್ತಾನದ ನಂಬರ್​ನಿಂದ ಕರೆ ಬಂದಿದ್ದು, ರಾಜಸ್ಥಾನದ ಕನ್ಹಯ್ಯಾ ಲಾಲ್​ ಮಾದರಿ ಶಿರಚ್ಚೇದ ಮಾಡುವ ಬೆದರಿಕೆ ಹಾಕಲಾಗಿದೆ.

death-threat-from-pakistan
ಪಾಕಿಸ್ತಾನದಿಂದ ಶಿರಚ್ಚೇದ ಬೆದರಿಕೆ
author img

By

Published : Aug 18, 2022, 6:42 AM IST

ವಾರಾಣಸಿ: ಇಲ್ಲಿನ ಶೃಂಗಾರಗೌರಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಆದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಮಹಿಳೆಯ ಪತಿಗೆ ಪಾಕಿಸ್ತಾನದಿಂದ "ಶಿರಚ್ಚೇದ" (ಸರ್​ ತಾನ್​ ಸೆ ಜುದಾ) ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಆತ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ.

ಶೃಂಗಾರ್ ಗೌರಿ- ಜ್ಞಾನವಾಪಿ ಪ್ರಕರಣದಲ್ಲಿ ಐವರು ಮಹಿಳೆಯರು ಫಿರ್ಯಾದಿದಾರರಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಓರ್ವ ಮಹಿಳೆಯಾದ ಲಕ್ಷ್ಮೀದೇವಿ ಎಂಬವರ ಪತಿಗೆ ಪಾಕಿಸ್ತಾನದ ಸಂಖ್ಯೆಯಿಂದ ಕರೆ ಬಂದಿದ್ದು, ಪ್ರಕರಣದ ಅರ್ಜಿಯನ್ನು ವಾಪಸ್​ ಪಡೆಯಲು ಒತ್ತಡ ಹೇರಲಾಗಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಕೇಸ್​ ಕುರಿತು ಇಂದು ವಾರಾಣಸಿ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಅದಕ್ಕೂ ಮೊದಲು ಈ ಬೆದರಿಕೆ ಕರೆ ಮಾಡಲಾಗಿದೆ.

ಮಾರ್ಚ್ 19, ಜುಲೈ 20 ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿದ್ದ. ಅದು ಪಾಕಿಸ್ತಾನದ ಸಂಖ್ಯೆಯಾಗಿದೆ. ಕರೆ ಸ್ವೀಕರಿಸಿದಾಗ, ಅರ್ಜಿ ವಾಪಸ್​ ಪಡೆಯದಿದ್ದರೆ ರಾಜಸ್ಥಾನದ ಕನ್ಹಯ್ಯಾ ಲಾಲ್​ನ ತಲೆ ಕಡಿದಂತೆ ನಿನ್ನ ಶಿರಚ್ಚೇದ ಮಾಡಲಾಗುವುದು ಎಂದು ಬೆದರಿಕೆ ಹಾಕಿದ. ಬಳಿಕ ಆಗಸ್ಟ್​ 3 ರಂದು ಅದೇ ನಂಬರ್​​ನಿಂದ ಮಿಸ್​ ಕಾಲ್ಡ್​ ನೀಡಲಾಗಿದೆ ಎಂದು ಆ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಬೆದರಿಕೆ ಕರೆಗಳು ಮುಂದುವರೆದಿದ್ದರಿಂದ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಲಕ್ಷ್ಮೀದೇವಿ ಅವರ ಪತಿ ಹೇಳಿದರು. ವಾರಾಣಸಿ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಅವರ ಪೀಠ ಪ್ರಕರಣದ ಅರ್ಜಿಯನ್ನು ಇಂದು ಮತ್ತೆ ವಿಚಾರಣೆ ನಡೆಸಲಿದೆ.

ಓದಿ: ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ ಕೊಟ್ಟ ಕೇಂದ್ರ: ತಿಂಗಳ ವೆಚ್ಚವೆಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.