ಗುಂಟೂರು: ಕೊರೊನಾ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಜನರು ಜಾಗರೂಕರಾಗಿರಲು ಪೊಲೀಸರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ವೇಳೆ, ಎಸ್ಪಿಯೊಬ್ಬರು ಸಿಐಗೆ ಮಾಸ್ಕ್ ಹಾಕಿಕೊಳ್ಳದ ಹಿನ್ನೆಲೆ ದಂಡ ವಿಧಿಸಿದ ಪ್ರಸಂಗ ಕಂಡು ಬಂತು.
ಹೌದು, ಮಾಸ್ಕ್ ಧರಿಸದವರ ಮೇಲೆ ಗುಂಟೂರು ನಗರ ಪ್ರದೇಶದ ಲಾಡ್ಜ್ ಸೆಂಟರ್ ಮತ್ತು ಎಂಟಿಬಿ ಕೇಂದ್ರದಲ್ಲಿ ವಿಶೇಷ ಕ್ರಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್ಪಿ ಅಮ್ಮಿ ರೆಡ್ಡಿ ಭಾಗವಹಿಸಿದ್ದರು.
ವಸತಿ ಕೇಂದ್ರದಲ್ಲಿ ಎಸ್‌ಪಿ ಅಮ್ಮಿ ರೆಡ್ಡಿ ಕಾರ್ಯಕ್ಕೆ ತೆರಳುತ್ತಿದ್ದ ಟ್ರಾಫಿಕ್ ಸಿಐ ಮಲ್ಲಿಕರ್ಜುನ ರಾವ್ ತಡೆದಿದ್ದಾರೆ. ಬಳಿಕ ಮಾಸ್ಕ್ ಧರಿಸದ ಕಾರಣ ಅವರನ್ನು ಪ್ರಶ್ನಿಸಿದ್ದಾರೆ. ತರಾತುರಿಯಲ್ಲಿ ಮಾಸ್ಕ್ ಧರಿಸುವುದನ್ನು ಮರೆತಿದ್ದೇನೆ ಎಂದು ಸಿಐ ಉತ್ತರಿಸಿದ್ದಾರೆ.
ಮಾಸ್ಕ್ ಧರಿಸದ ಕಾರಣ ಸಿಐಗೆ ಎಸ್ಪಿ ದಂಡ ವಿಧಿಸಿ, ಮಾಸ್ಕ್ ಹಾಕಿಸಿದರು. ಈ ವೇಳೆ ಕೋವಿಡ್ ಸಮಯದಲ್ಲಿ ಪೊಲೀಸರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸಿಐಗೆ ಎಸ್ಪಿ ಕಿವಿ ಮಾತು ಸಹ ಹೇಳಿದರು.