ETV Bharat / bharat

ರಜೌರಿಯಲ್ಲಿ ಉಗ್ರರು-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ: ಸೇನಾ ಕ್ಯಾಪ್ಟನ್​ ಸೇರಿ ನಾಲ್ವರು ಯೋಧರು ಹುತಾತ್ಮ - ರಜೌರಿಯಲ್ಲಿ ಗುಂಡಿನ ದಾಳಿ

Gunfight between militants and joint forces: ರಜೌರಿ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ಮುಂದುವರೆದಿದೆ.

ಅಡಗಿ ಕುಳಿತ ಉಗ್ರರು-ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ

author img

By ETV Bharat Karnataka Team

Published : Nov 22, 2023, 4:27 PM IST

Updated : Nov 23, 2023, 11:35 AM IST

ರಜೌರಿ: ಜಮ್ಮು ಪ್ರಾಂತ್ಯದ ರಜೌರಿ ಜಿಲ್ಲೆಯ ಬಾಜಿ ಕಲಾಕೋಟ್‌ ಪ್ರದೇಶದಲ್ಲಿ ಅಡಗಿ ಕುಳಿತಿರುವ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರಲ್ಲಿ ಒಬ್ಬರು ಸೇನಾ ಕ್ಯಾಪ್ಟನ್ ಕೂಡ ಇದ್ದಾರೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಉಗ್ರರ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.

ಇದಕ್ಕೂ ಮುನ್ನ ಬಾಜಿ ಬಾಲಕೋಟ್​ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಮತ್ತು ಜಮ್ಮು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು, ಜಂಟಿ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಮತ್ತು ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ.

63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್, ಪ್ಯಾರಾಚ್ಯುತ್ ರೆಜಿಮೆಂಟ್ (ಸ್ಪೆಷಲ್ ಪೋರ್ಸ್) ಕ್ಯಾಪ್ಟನ್ ಶುಭಂ, ಪ್ಯಾರಾಚ್ಯುತ್ ರೆಜಿಮೆಂಟ್ (ಸ್ಪೆಷಲ್ ಪೋರ್ಸ್) ಹವಾಲ್ದಾರ್ ಮಜಿದ್ ಹುತಾತ್ಮರಾಗಿದ್ದಾರೆ. ಇನ್ನೋರ್ವ ಹುತಾತ್ಮ ಯೋಧರೊಬ್ಬರ ಹೆಸರು ಗೊತ್ತಾಗಿಲ್ಲ. ಹಾಗೆಯೇ ಪ್ಯಾರಾಚ್ಯುತ್ ರೆಜಿಮೆಂಟ್ (ಸ್ಪೆಷಲ್ ಪೋರ್ಸ್) ಮೇಜರ್​ವೊಬ್ಬರು​ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರು ಮಂಗಳೂರು ಮೂಲದವರಾಗಿದ್ದಾರೆ.

  • #WATCH | An encounter is underway between terrorists and joint forces of Army & J-K Police in the Bajimaal area of Dharmsal in Rajouri district

    (Visuals deferred by unspecified time) pic.twitter.com/pNnXvtbRKt

    — ANI (@ANI) November 22, 2023 " class="align-text-top noRightClick twitterSection" data=" ">

ಈ ಪ್ರದೇಶದಲ್ಲಿ ಇಬ್ಬರಿಗಿಂತ ಹೆಚ್ಚಿನ ಉಗ್ರರು ಅಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ನವೆಂಬರ್ 17 ರಂದು, ರಜೌರಿಯ ಗಡಿ ಜಿಲ್ಲೆಯ ಬುಧಾಲ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಗಳು ಆ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದ.

ಈ ವರ್ಷ ಜಮ್ಮು ಪ್ರದೇಶದಲ್ಲಿ14 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ: ಈ ವರ್ಷ ಜಮ್ಮುವಿನ ಮೂರು ಜಿಲ್ಲೆಗಳಲ್ಲಿ 14 ಭದ್ರತಾ ಸಿಬ್ಬಂದಿ ಮತ್ತು 25 ಭಯೋತ್ಪಾದಕರು ಸೇರಿದಂತೆ ನಲವತ್ತಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಈ ವರೆಗೂ ಹುತಾತ್ಮರಾದ ಯೋಧರಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ಮೂವರು ಸೇನಾ ಅಧಿಕಾರಿಗಳು ಸೇರಿದ್ದಾರೆ, ಅವರು ರಜೌರಿ ಜಿಲ್ಲೆಯ ಬಾಜಿಮಾಲ್ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರರ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಪರಿಸ್ಥಿತಿ ಉದ್ವಿಗ್ನ

Last Updated : Nov 23, 2023, 11:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.