ETV Bharat / bharat

ಡಂಪರ್​-ಬಸ್​ ಮಧ್ಯೆ ಡಿಕ್ಕಿ, ಧಗಧಗನೇ ಉರಿದ ವಾಹನಗಳು, 12 ಜನ ಸಜೀವದಹನ - ಸಜೀವ ದಹನ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡಂಪರ್‌ಗೆ ಡಿಕ್ಕಿ ಹೊಡೆದ ನಂತರ ಪ್ರಯಾಣಿಕರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 12 ಮಂದಿ ಸಜೀವ ದಹನವಾಗಿದ್ದಾರೆ.

Guna passenger bus fire  mp accident news  MP Major Accident  Guna bus caught fire  guna people burnt alive  mp accident many dead  ಡಂಪರ್​ ಬಸ್​ ಮಧ್ಯೆ ಡಿಕ್ಕಿ  ಧಗಧಗನೇ ಉರಿದ ವಾಹನಗಳು  12 ಜನ ಸುಟ್ಟು ಭಸ್ಮ  ಭೀಕರ ರಸ್ತೆ ಅಪಘಾತ  ಪ್ರಯಾಣಿಕರ ಬಸ್‌ಗೆ ಬೆಂಕಿ  12 ಮಂದಿ ಸಜೀವ ದಹನ  ಪೊಲೀಸ್ ವರಿಷ್ಠಾಧಿಕಾರಿ  ಸ್ಥಳಕ್ಕೆ ದೌಡಾಯಿಸಿದ ಆಡಳಿತ
ಧಗಧಗನೇ ಉರಿದ ವಾಹನಗಳು, 12 ಜನ ಸುಟ್ಟು ಭಸ್ಮ
author img

By ETV Bharat Karnataka Team

Published : Dec 28, 2023, 7:00 AM IST

Updated : Dec 28, 2023, 7:15 AM IST

ಡಂಪರ್​-ಬಸ್​ ಮಧ್ಯೆ ಡಿಕ್ಕಿ, ಧಗಧಗನೇ ಉರಿದ ವಾಹನಗಳು

ಗುನಾ (ಮಧ್ಯಮಪ್ರದೇಶ): ಬುಧವಾರ ರಾತ್ರಿ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುನಾದಿಂದ ಆರೋನ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ. ಬಸ್ ಕೂಡ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ 14 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಜಿಲ್ಲಾಡಳಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂಧಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಮೃತರನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಡಳಿತ: ಗುನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಮಾತನಾಡಿ, ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಬಸ್ ಗುನಾದಿಂದ ಆರೋನ್ ಕಡೆಗೆ ಹೋಗುತ್ತಿದ್ದು, ಡಂಪರ್ ವಾಹನ ಗುನಾ ಕಡೆಗೆ ಬರುತ್ತಿತ್ತು. ಇದೇ ವೇಳೆ ಬಸ್ ಮತ್ತು ಡಂಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ಇದನ್ನು ಅರ್ಥ ಮಾಡಿಕೊಂಡು ಓಡಿ ಹೋಗುವಷ್ಟರಲ್ಲಿ ಬಸ್​ ತುಂಬಾ ಬೆಂಕಿ ವ್ಯಾಪಿಸಿದೆ. ಘಟನೆ ವೇಳೆ ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದು, ನಾಲ್ವರು ಹೇಗೋ ಬಸ್ಸಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ 12 ಜನರು ಬೆಂಕಿಯಲ್ಲೇ ನರಳಾಡಿ ತಮ್ಮ ಪ್ರಾಣ ಬಿಟ್ಟಿದ್ದಾರೆ. ಇನ್ನು 14 ಜನರಿಗೆ ಗಾಯಗಳಾಗಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

  • गुना से आरोन जा रही बस में भीषण आग से यात्रियों के हताहत होने का समाचार अत्यंत दुःखद है।

    इस हृदय विदारक दुर्घटना में असमय मृत्यु को प्राप्त हुए दिवंगतों के परिजनों के साथ मेरी संवेदनाएं हैं। दुःख की इस विकट परिस्थिति में प्रदेश सरकार पीड़ित परिवारों के साथ खड़ी है।

    मैंने…

    — Dr Mohan Yadav (@DrMohanYadav51) December 27, 2023 " class="align-text-top noRightClick twitterSection" data=" ">

ಘಟನೆಗೆ ಸಂತಾಪ ವ್ಯಕ್ತಪಡಿಸಿದ ಸಿಎಂ ಮತ್ತು ಸಿಂಧಿಯಾ: ಘಟನೆಗೆ ಸಂಬಂಧಿಸಿದಂತೆ ಗುಣ ಕಲೆಕ್ಟರ್ ತರುಣ್ ರಾಠಿ ಮಾತನಾಡಿ, ಅಪಘಾತದ ಬಗ್ಗೆ ಆಡಳಿತ ಮಂಡಳಿ ತನಿಖೆ ನಡೆಸುತ್ತಿದೆ. ಇದಲ್ಲದೆ, ಈ ಘಟನೆಯ ನಂತರ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ಪರಿಹಾರ ಘೋಷಿಸಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿಗಳು ಘಟನೆಯ ತನಿಖೆಗೂ ಆದೇಶಿಸಿದ್ದಾರೆ ಎಂದು ತಿಳಿಸಿದರು.

  • गुना आरोन रोड पर यात्री बस में आग लगने की खबर दुखदायी है। घटना की खबर मिलते ही गुना कलेक्टर से दूरभाष पर चर्चा कर शीघ्र राहत एवं बचाव कार्य शुरू करने के निर्देश दिये।

    ईश्वर इस हादसे में दिवंगत हुए नागरिकों की आत्मा को शांति और उनके परिजनों को ये आघात सहने की शक्ति प्रदान करे।…

    — Jyotiraditya M. Scindia (@JM_Scindia) December 27, 2023 " class="align-text-top noRightClick twitterSection" data=" ">

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಘಟನೆಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, ಘಟನೆಯ ಬಗ್ಗೆ ನನಗೆ ಮಾಹಿತಿ ದೊರೆತ ತಕ್ಷಣ ನಾನು ಜಿಲ್ಲಾಧಿಕಾರಿ ಮತ್ತು ಎಸ್‌ಪಿಯೊಂದಿಗೆ ಮಾತನಾಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸೂಚಿಸಿದ್ದೇನೆ. ಬಳಿಕ ಮೃತರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

ಓದಿ: ಮೊದಲ ಮಗು ಗಂಡಾಗಲಿಲ್ಲ ಎಂಬ ಸಿಟ್ಟು: 2 ತಿಂಗಳ ಹಸುಳೆಯ ಕತ್ತು ಹಿಸುಕಿದ ಅಜ್ಜಿ

Last Updated : Dec 28, 2023, 7:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.