ETV Bharat / bharat

ವಿರೋಧದ ಮಧ್ಯೆ ನಡೀತು ಕ್ಷಮಾ ಬಿಂದು 'ಸೆಲ್ಫ್​ ಮ್ಯಾರೇಜ್​'.. ನಿಗದಿತ ದಿನಾಂಕಕ್ಕಿಂತ ಮುಂಚೆಯೇ ವಿವಾಹ! - ತನ್ನನ್ನು ತಾನೇ ಮದುವೆ ಮಾಡಿಕೊಂಡ ಯುವತಿ

ತನ್ನೊಂದಿಗೆ ತಾನೇ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದ ವಡೋದರಾದ 24 ವರ್ಷದ ಯುವತಿ ಎರಡು ದಿನ ಮುಂಚಿತವಾಗಿಯೇ ಮದುವೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಳೆ.

Gujarat woman Kshama Bindu Married
Gujarat woman Kshama Bindu Married
author img

By

Published : Jun 9, 2022, 12:16 PM IST

Updated : Jun 9, 2022, 5:24 PM IST

ವಡೋದರಾ(ಗುಜರಾತ್​): ತನ್ನನ್ನು ತಾನೇ ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ ಬಳಿಕ ಸಿಕ್ಕಾಪಟ್ಟೆ ವಿರೋಧಕ್ಕೊಳಗಾಗಿದ್ದ ವಡೋದರಾದ ಕ್ಷಮಾ ಬಿಂದು, ಮದುವೆಗೆ ಫಿಕ್ಸ್​ ಮಾಡಿದ್ದ ದಿನಾಂಕಕ್ಕಿಂತಲೂ ಎರಡು ದಿನ ಮುಂಚಿತವಾಗಿ ವಿವಾಹವಾಗಿದ್ದಾರೆ. ಈ ಮೂಲಕ ವಿವಾದ ತಪ್ಪಿಸುವ ಕೆಲಸ ಮಾಡಿ, ಎಲ್ಲರಿಗೂ ಸಡನ್ ಶಾಕ್​ ನೀಡಿದ್ದಾರೆ.

ಎರಡು ದಿನ ಮೊದಲೇ ಸ್ವಯಂ ವಿವಾಹವಾದ ಯುವತಿ

ಗುಜರಾತ್​ನ ವಡೋದರಾದ 24 ವರ್ಷದ ಯುವತಿ ಕ್ಷಮಾ ಬಿಂದು ಕಳೆದ ಕೆಲ ದಿನಗಳ ಹಿಂದೆ ತನಗೆ ತಾನೇ ತಾಳಿ ಕಟ್ಟಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದರೆ, ಕೆಲವರು ವಿರೋಧಿಸಿ ಮದುವೆ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದರು. ವಡೋದರಾದ ಬಿಜೆಪಿ ಮೇಯರ್ ಸುನೀತಾ ಅವರ ಸಹೋದರಿ ಶುಕ್ಲಾ ಯಾವುದೇ ಕಾರಣಕ್ಕೂ ದೇವಸ್ಥಾನದಲ್ಲಿ ಸೆಲ್ಫ್ ಮ್ಯಾರೇಜ್ ನಡೆಯಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಯುವತಿ ಇಂದು ಮದುವೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ವೇಳೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ನಡೆದಿದೆ. ಈ ವೇಳೆ ಯುವತಿ ತನ್ನಷ್ಟಕ್ಕೆ ತಾನೇ ಮಾಂಗಲ್ಯ ಕಟ್ಟಿಕೊಂಡಿದ್ದಾಳೆ.

Gujarat woman Kshama Bindu Married
ನಿಗದಿತ ದಿನಾಂಕಕ್ಕಿಂತ ಮುಂಚೆಯೇ ವಿವಾಹವಾದ ಕ್ಷಮಾ

ಇದನ್ನು ಓದಿ: ತನ್ನನ್ನು ತಾನೇ ಮದುವೆಯಾಗಲಿರುವ ಯುವತಿಗೆ ವಿಘ್ನ.. ಸಮಾರಂಭಕ್ಕೆ ಅಡ್ಡಿ, ತೀವ್ರ ವಿರೋಧ

ಮದುವೆ ಕಾರ್ಯಕ್ರಮ ನಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಯುವತಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ತನ್ನ ಮದುವೆಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. 24 ವರ್ಷದ ವಡೋದರಾದ ಯುವತಿ ಕ್ಷಮಾ ಜೂನ್​ 11ರಂದು ದೇವಸ್ಥಾನದಲ್ಲಿ ಸ್ವಯಂ ಮದುವೆ ಮಾಡಿಕೊಳ್ಳುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದರು.

Gujarat woman Kshama Bindu Married
ಅದ್ಧೂರಿಯಾಗಿ ನಡೀತು ಕ್ಷಮಾ ಬಿಂದು ಸೆಲ್ಫ್ ಮ್ಯಾರೇಜ್​

ಯುವತಿಗೆ ಯಾವುದೇ ವರನೊಂದಿಗೆ ಮದುವೆ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಆದರೆ, ವರನಿಲ್ಲದೆಯೇ ವಧು ಆಗಬೇಕು ಎಂಬ ಆಸೆ ಇತ್ತು. ಹೀಗಾಗಿ, ಸಂಪೂರ್ಣ ಜೀವನವನ್ನು ಏಕಾಂಗಿಯಾಗಿ ಕಳೆಯಲು ಬಯಸಿದ್ದೇನೆ. ಅದಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದೇನೆಂದು ಕ್ಷಮಾ ತಿಳಿಸಿದ್ದರು. ಕ್ಷಮಾ ವಡೋದರಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ನಿರ್ಧಾರಕ್ಕೆ ಪೋಷಕರು ಸಹ ಒಪ್ಪಿಗೆ ಸೂಚಿಸಿದ್ದರು.

Gujarat woman Kshama Bindu Married
ವಿರೋಧದ ಮಧ್ಯೆ ನಡೀತು ಕ್ಷಮಾ ಬಿಂದು 'ಸೆಲ್ಫ್​ ಮ್ಯಾರೇಜ್​'

Last Updated : Jun 9, 2022, 5:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.