ETV Bharat / bharat

ರಾಜ್​​ಕೋಟ್​ದಲ್ಲಿ ಕ್ರಿಕೆಟ್ ಆಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಕರೋನಾ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಳ - ರಾಜ್‌ಕೋಟ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು- ಮತ್ತೊಂದು ಪ್ರಕರಣ ಮುನ್ನೆಲೆಗೆ

Mayur Makwana
ಕ್ರಿಕೆಟ್ ಆಡುತ್ತಿದ್ದ ಮಯೂರ್ ಮಕ್ವಾನಾ ಹೃದಯಘಾತದಿಂದ ಸಾವು
author img

By

Published : Mar 19, 2023, 6:28 PM IST

ರಾಜಕೋಟ್​(ಗುಜರಾತ್): ರಾಜ್‌ಕೋಟ್‌ನ ರೇಸ್‌ ಕೋರ್ಸ್‌ ಸಮೀಪ ಇರುವ ಶಾಸ್ತ್ರಿ ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮಯೂರ್ ನಟವರ್ ಭಾಯ್ ಮಕ್ವಾನಾ(43) ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದವರು. ಭಾನುವಾರ ರಜೆ ಇರುವುದರಿಂದ ಬೆಳಗ್ಗೆ ತಮ್ಮ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

ಕ್ರಿಕೆಟ್ ಆಡುತ್ತಿದ್ದ ವೇಳೆ ಮಯೂರ್ ಮಕ್ವಾನಾ ಒಮ್ಮೆ ಕುಸಿದು ನೆಲಕ್ಕೆ ಬಿದ್ದರು. ತಕ್ಷ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಯೂರ್ ಮಕ್ವಾನಾ ಅವರ ಪ್ರಾಣ ಹಾರಿಹೋಗಿತ್ತು. ಮಯೂರ್ ಮಕ್ವಾನಾ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.

ಮಯೂರ್ ಮಕ್ವಾನಾ ಹೃದಯಘಾತದಿಂದ ಮೈದಾನದಲ್ಲಿ ಕುಸಿದು ಬಿದ್ದಿರುವ ಸುದ್ದಿ ಕೇಳಿ, ಮಯೂರ್ ಅವರ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದ್ದರು. ಮಯೂರ್​ ಮೃತಪಟ್ಟಿರುವ ಸುದ್ದಿ ಕೇಳಿ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತು. ಮೃತ ಮಯೂರ್ ಮಾವ ಶಾಂತಿಭಾಯಿ ಪರ್ಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಮಕ್ವಾನ್ ಅವರು ಭಾನುವಾರ ರಜೆ ಇದ್ದಿದ್ದರಿಂದ ಶಾಸ್ತ್ರಿ ಮೈದಾನಕ್ಕೆ ಸ್ನೇಹಿತರ ಜತೆಗೆ ಕ್ರಿಕೆಟ್ ಆಡಲು ತೆರಳಿದ್ದರು. ಕ್ರಿಕೆಟ್ ಆಡುವಾಗ ಕುಸಿದು ಬಿದ್ದಿದ್ದರು. ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಸ್ನೇಹಿತರು ತಕ್ಷಣ ಆತನನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಮಯೂರ್ ಮೃತಪಟ್ಟಿದ್ದನು.

ಮೃತ ಮಯೂರ್​​​ನಿಗೆ ಯಾವುದೇ ಕಾಯಿಲೆ, ದುಶ್ಚಟ ಇರಲಿಲ್ಲ. ಕಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಪ್ರತಿ ಭಾನುವಾರ ಕ್ರಿಕೆಟ್ ಆಡಲು ಹೋಗುತ್ತಿದ್ದರು. ಭಾನುವಾರ ಕ್ರಿಕೆಟ್ ಆಡುತ್ತಿದ್ದಾಗ ಸ್ವಲ್ಪ ಆರಂಭದಲ್ಲಿ ಬಳಲಿದಂತೆ ಕಂಡುಬಂದಿದ್ದರು. ಕೂಡಲೇ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಂದ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ. ನಂತರ ಅವರ ಸ್ನೇಹಿತರು 108ಗೆ ಮಾಹಿತಿ ನೀಡಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೃತಪಟ್ಟ ಮಯೂರ್ ನಟವರ್ ಭಾಯ್ ಮಕ್ವಾನಾ ಅವರಿಗೆ ಪತ್ನಿ, ಮಗ, ಮಗಳು ಇದ್ದಾರೆ.

ಕೊರೊನಾ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಳ: ವೈದ್ಯರ ಸಂಶೋಧನೆ ಮತ್ತು ಅನುಭವದ ಪ್ರಕಾರ, ಈಗ ಕರೋನಾ ನಂತರ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಗುಜರಾತ್ ರಾಜ್ಯದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಗಳು ಇತ್ತೀಚೆಗೆ ಜರುಗಿವೆ. ರಾಜ್‌ಕೋಟ್ ನಗರದಲ್ಲಿ ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ ಮತ್ತೊಂದು ಪ್ರಕರಣ ಇದಾಗಿದೆ.

ಸೂರತ್-ಅಹಮದಾಬಾದ್‌ ಘಟನೆಗಳು: ಎರಡು ದಿನಗಳ ಹಿಂದೆ ರಾಜ್‌ಕೋಟ್‌ನಲ್ಲಿ ಅಜಿ ಕಾಲೋನಿಯ ಖೋಡಿಯಾರ ನಗರದಲ್ಲಿ 23 ವರ್ಷದ ನೀಲೇಶ್ ಚಾವ್ಡಾ ಎಂಬ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಕೆಲ ದಿನಗಳ ಹಿಂದೆ ಅಹಮದಾಬಾದ್‌ನ ಬಚತ್ ಭವನದಲ್ಲಿ ಸರ್ಕಾರಿ ನೌಕರ ವಸಂತ್ ರಾಥೋಡ್ ಕ್ರಿಕೆಟ್ ಆಡುತ್ತಿದ್ದ ವೇಳೆ ಸಾವನ್ನಪ್ಪಿದ್ದರು.

ಸೂರತ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ವರಾಚಾದ ಪ್ರಶಾಂತ್ ಭರೋಲಿಯಾ(27) ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯುವಕ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಬಳಿಕ ಮೃತಪಟ್ಟಿದ್ದಾನೆ. ಯುವಕ ಕೆನಡಾದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದನು.

ಇದನ್ನೂ ಓದಿ:ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು, ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.