ETV Bharat / bharat

ಗುಜರಾತ್ ಚುನಾವಣೆ: ಮೋರ್ಬಿ ಶಾಸಕ ಸೇರಿ ಐವರು ಸಚಿವರಿಗೆ ಬಿಜೆಪಿ ಟಿಕೆಟ್ ಇಲ್ಲ

ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು 2017 ಮತ್ತು 2021 ರಲ್ಲಿ ಅವರ ಸಂಪುಟದಲ್ಲಿ ಸದಸ್ಯರಾಗಿದ್ದ ಏಳು ಶಾಸಕರನ್ನು ಸಹ ಬಿಜೆಪಿ ಕೈಬಿಟ್ಟಿದೆ.

ಗುಜರಾತ್ ಚುನಾವಣೆ: ಮೋರ್ಬಿ ಶಾಸಕ ಸೇರಿ ಐವರು ಸಚಿವರಿಗೆ ಬಿಜೆಪಿ ಟಿಕೆಟ್ ಇಲ್ಲ
gujarat-polls-morbi-mla-among-5-ministers-denied-ticket-in-bjps-1st-list-of-candidates
author img

By

Published : Nov 10, 2022, 4:49 PM IST

ಅಹಮದಾಬಾದ್: ಗುಜರಾತ್‌ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಾಗಿ 38 ಹಾಲಿ ಬಿಜೆಪಿ ಶಾಸಕರು ಸೇರಿದಂತೆ ಮೊರ್ಬಿಯ ಬಿಜೆಪಿ ಶಾಸಕ ಮತ್ತು ಇತರ ನಾಲ್ವರು ಸಚಿವರಿಗೆ ಟಿಕೆಟ್​ ನೀಡಲಾಗಿಲ್ಲ. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರೂ ಆಗಿರುವ ಮೊರ್ಬಿಯ ಹಾಲಿ ಬಿಜೆಪಿ ಶಾಸಕ ಬ್ರಿಜೇಶ್ ಮೆರ್ಜಾ ಅವರಿಗೆ ಕೇಸರಿ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ. ಇತ್ತೀಚೆಗೆ ಮೋರ್ಬಿಯ ಹಳೆಯ ತೂಗು ಸೇತುವೆ ನವೀಕರಿಸಿದ ಕೆಲವೇ ದಿನಗಳಲ್ಲಿ ಕುಸಿದು 135 ಜೀವಗಳನ್ನು ಬಲಿ ಪಡೆದಿತ್ತು.

2012 ಮತ್ತು 2017ರಲ್ಲಿ ಎರಡು ಬಾರಿ ಕಛ್‌ನ ಭುಜ್ ಅಸೆಂಬ್ಲಿಯಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದ ಗುಜರಾತ್ ವಿಧಾನಸಭೆ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದೆ.

ಮಾಜಿ ಸಿಎಂ, ಡಿಸಿಎಂ, ಸಚಿವರಿಗೂ ಟಿಕೆಟ್​ ನಿರಾಕರಣೆ: ರಾಜ್ಯ ಸಂಸದೀಯ ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ರಾಜೇಂದ್ರ ತ್ರಿವೇದಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಪ್ರದೀಪ್ ಪರ್ಮಾರ್, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಬ್ರಿಜೇಶ್ ಮೆರ್ಜಾ, ಸಾರಿಗೆ ಸಚಿವ ಅರವಿಂದ ರೈಯಾನಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಆರ್.ಸಿ.ಮಕ್ವಾನಾ ಅವರನ್ನು ಕೂಡ ಈ ಬಾರಿ ಬಿಜೆಪಿ ಪರಿಗಣಿಸಿಲ್ಲ.

ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು 2017 ಮತ್ತು 2021 ರಲ್ಲಿ ಅವರ ಸಂಪುಟದಲ್ಲಿ ಸದಸ್ಯರಾಗಿದ್ದ ಏಳು ಶಾಸಕರನ್ನು ಸಹ ಬಿಜೆಪಿ ಕೈಬಿಟ್ಟಿದೆ. ಹಿಂದಿನ ಕ್ಯಾಬಿನೆಟ್‌ನಿಂದ ಈ ಬಾರಿ ಕೈಬಿಡಲ್ಪಟ್ಟವರಲ್ಲಿ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಮಾಜಿ ಸಚಿವರಾದ ಆರ್‌ಸಿ ಫಲ್ದು, ಭೂಪೇಂದ್ರಸಿನ್ಹ್ ಚುಡಾಸಮಾ, ಸೌರಭ್ ಪಟೇಲ್, ಕೌಶಿಕ್ ಪಟೇಲ್, ವಾಸನ್ ಅಹಿರ್ ಮತ್ತು ಧರ್ಮೇಂದ್ರ ಸಿನ್ಹ್ ಜಡೇಜಾ ಸೇರಿದ್ದಾರೆ.

ರೂಪಾನಿ ಮತ್ತು ಪಟೇಲ್ ತಾವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬುಧವಾರ ಘೋಷಿಸಿದರು. ರೂಪಾನಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಿಜೆಪಿಯ ಇಬ್ಬರು ಶಾಸಕರು ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.