ಸೂರತ್ (ಗುಜರಾತ್): ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣಾ ಪಕ್ಷಗಳು ಮತ್ತು ಅಭ್ಯರ್ಥಿಗಳು ವಿಭಿನ್ನ ಮತ್ತು ಆಕರ್ಷಣೀಯ ಶೈಲಿಯಲ್ಲಿ ಮತ ಪ್ರಚಾರ ನಡೆಸುತ್ತಿದೆ. ಈ ಚುನಾವಣಾ ಪ್ರಚಾರಗಳು ನಗರ ಮಾತ್ರವಲ್ಲದೇ, ಗ್ರಾಮೀಣ ಪ್ರದೇಶದಲ್ಲೂ ಜನರನ್ನು ಸೆಳೆಯಲು ಹಲವು ತಂತ್ರ ನಡೆಸಲಾಗುತ್ತಿದೆ.
ಚುನಾವಣಾ ಪಕ್ಷಗಳು ಮತದಾರರ ಸೆಳೆಯಲು ಸಾಕಷ್ಟು ಮಟ್ಟದಲ್ಲಿ ಜನರ ಮನಸ್ಸಿನಲ್ಲಿ ತಮ್ಮ ಪಕ್ಷದ ಗುರು ಮತ್ತು ಚಿಹ್ನೆ ಅಚ್ಚಳಿಯದಂತೆ ಉಳಿಯುವಂತೆ ಮಾಡಲು ಮುಂದಾಗಿದೆ. ಇದಕ್ಕಾಗಿ ಪ್ರಚಾರ ಕಾರ್ಯಕರ್ತರ ಬಟ್ಟೆ, ಆಭರಣ ಮಂಗಳಸೂತ್ರ, ಹೇರ್ ಕ್ಲಿಪ್, ಬ್ರೆಸ್ಲೆಟ್ ಮತ್ತು ರಿಂಗ್ಗಳಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳ ಫೋಟೋ ಮುದ್ರಿಸಲಾಗಿದೆ. ಈ ಮೂಲಕ ಮತದಾರರ ಸೆಳೆಯಲು ವಿಭಿನ್ನವಾಗಿ ಪ್ರಯತ್ನ ನಡೆಸಿದೆ.
ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಗುಜರಾತ್ನ 182 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಎಲ್ಲ ಪಕ್ಷದ ಕಾರ್ಯಕರ್ತರು ಚುನಾವಣೆ ಹಿನ್ನೆಲೆಯಲ್ಲಿ ಬಿಡುವಿಲ್ಲದಂತೆ ಪ್ರಚಾರ ನಡೆಸಿದ್ದಾರೆ.
ಮಂಗಳಸೂತ್ರದಲ್ಲೂ ಪಕ್ಷದ ಚಿನ್ಹೆ: ಚುನಾವಣೆ ಸಮಯದಲ್ಲಿ ಜವಳಿ ರಾಜಧಾನಿಯಾಗಿರುವ ಸೂರತ್ ನಗರದಲ್ಲಿ ಸೀರೆಗೆ ಸಾಕಷ್ಟು ಬೇಡಿಕೆ ಕಂಡುಬರುತ್ತದೆ. ಚುನಾವಣಾ ಸಂಬಂಧಿಸಿದ ವಸ್ತುಗಳನ್ನು ಸೂರತ್ನಲ್ಲಿ ಸಾಕಷ್ಟು ಮಟ್ಟದಲ್ಲಿ ತಯಾರಿಸಲಾಗುವುದು. ಅದರಲ್ಲೂ ಮಹಿಳಾ ಚುನಾವಣಾ ಕಾರ್ಯಕರ್ತರ ಸೀರೆ, ಮಂಗಳಸೂತ್ರದಲ್ಲೂ ಪಕ್ಷದ ಚಿಹ್ನೆ ಅಳವಡಿಸುವ ಮೂಲಕ ಗಮನ ಸೆಳೆಯಲಾಗಿದೆ.
ಪ್ರಚಾರಕರು ಕಮಲ, ಹಸ್ತ ಅಥವಾ ಪೊರಕೆ ಪೆಂಡೆಂಟ್ಗಳು ಧರಿಸುತ್ತಿರುವುದು ಕಂಡು ಬಂದಿದೆ. ಬೆಲ್ಟ್ ಬಕಲ್ ವಿಶೇಷವಾಗಿ ಮಹಿಳೆಯರ ಕೂದಲಿನ ಅಲಂಕಾರಿಕ ಸಾಮಾಗ್ರಿಗಳಲ್ಲಿ ಪಕ್ಷಗಳ ಚಿಹ್ನೆ ಸ್ಪಷ್ಟವಾಗಿ ಗೋಚರವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದರ ಜೊತೆ ವಜ್ರಾಧರಿತ ಕಿವಿಯೊಲೆಗಳು ಎಲ್ಲರ ಪ್ರಮುಖ ಆಕರ್ಷಣೆ ಆಗಿದೆ.
ಮಹಿಳಾ ಕಾರ್ಯಕರ್ತರು ಎಲ್ಲಾ ಪಕ್ಷಗಳ ಬೆಂಬಲ ನೀಡಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಭ್ಯರ್ಥಿಗಳು ಮಹಿಳಾ ಕಾರ್ಯಕರ್ತರಿಗೆ ಚಿಹ್ನೆ ಮತ್ತಿ ನಾಯಕರರಿರುವ ವಿಶೇಷ ಸೀರೆಗಳನ್ನು ನೀಡುತ್ತಿದ್ದಾರೆ. ಈ ವೇಳೆ ಕೈ ಮಗ್ಗ ಮತ್ತು ಡಿಜಿಟಲ್ ಪ್ರಿಂಟ್ ಆಧಾರಿಸಿರುವ ಸೀರೆಗಳು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿವೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಪ್ರಿಂಟ್ ಸೀರೆಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಕೈಚೀಲಗಳನ್ನು ವಿಭಿನ್ನ ವಸ್ತುಗಳ ಮೂಲಕ ಮಾಡಲಾಗುತ್ತಿದ್ದು, ಇದಕ್ಕೂ ಬೇಡಿಕೆ ಇದೆ. ಕನ್ನಡಿ ಕುಸುರಿ ಸೇರಿದಂತೆ ಇನ್ನಿತರ ಕೈ ಚೀಲಗಳು ಮಾರುಕಟ್ಟೆಯಲ್ಲಿ ಕಂಡು ಬಂದಿವೆ.
ಇದನ್ನೂ ಓದಿ: ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣ: ಚೆನ್ನೈನ ನಾಲ್ಕು ಕಡೆ ಪೊಲೀಸರಿಂದ ದಿಢೀರ್ ದಾಳಿ