ಜುನಾಗಢ(ಗುಜರಾತ್): ಉನ್ನತ ಹುದ್ದೆಯಲ್ಲಿರುವ ಪೋಷಕರು ತಮ್ಮ ಮಕ್ಕಳು ತಮ್ಮಂತೆಯೇ ಉನ್ನತ ಹುದ್ದೆ ಹಾಗೂ ಅದಕ್ಕೂ ಮೇಲಿನ ಹುದ್ದೆಗೇರಬೇಕೆಂದು ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾದರೆ ಹೆತ್ತರಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇಂತಹ ಅಪರೂಪದ ಕ್ಷಣಕ್ಕೆ ಗುಜರಾತ್ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿ ಸಾಕ್ಷಿಯಾಗಿದ್ದಾರೆ.
ಹೌದು, ಗುಜರಾತ್‌ನ ಅರವಲ್ಲಿಯ ಡಿವೈಎಸ್‌ಪಿ ವಿಶಾನ್ ರಾಬ್ರಿ ಅವರು ಜುನಾಗಢ್‌ನಲ್ಲಿ ಎಎಸ್‌ಐ ಆಗಿರುವ ತಮ್ಮ ತಾಯಿ ಮಧುಬಾನ್ ರಾಬ್ರಿ ಎದುರು ಬದುರು ನಿಂತು ಸೆಲ್ಯೂಟ್ ಮಾಡಿಕೊಂಡಿದ್ದಾರೆ. ಉನ್ನತ ಹುದ್ದೆಯಲ್ಲಿರುವ ಪುತ್ರಿನಿಗೆ ಈ ತಾಯಿ ಹೆಮ್ಮೆಯಿಂದಲೇ ಸೆಲ್ಯೂಟ್ ಮಾಡಿದ್ದಾರೆ. 75ನೇ ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ತಾಯಿ-ಮಗನ ಈ ಸಮಾಗಮದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್‌ನ ನಾಗರಿಕ ಸೇವಾ ಆಯೋಗದ ಅಧ್ಯಕ್ಷ ದಿನೇಶ್ ದಾಸ್ ಟ್ವಿಟ್ಟರ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ತನ್ನ ಪುತ್ರನನ್ನು ಡಿವೈಎಸ್‌ಪಿ ಹುದ್ದೆಯಲ್ಲಿ ಕಾಣುತ್ತಿರುವ ಎಎಸ್‌ಐ ತಾಯಿಗೆ ಇದಕ್ಕಿಂತ ತೃಪ್ತಿ ಮತ್ತೇನು ಬೇಕಿದೆ ಎಂದು ಬರೆದಿದ್ದಾರೆ.
ತಾಯಿಯ ಈ ಸೆಲ್ಯೂಟ್‌ಗೂ ಮುನ್ನ ಇದರ ಹಿಂದೆ ವರ್ಷಗಳ ಶ್ರಮವಿದೆ ಎಂದಿದ್ದಾರೆ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪುತ್ರಿ ಹಾಗೂ ತಂದೆಯ ಸಮಾಗಮ ಸುದ್ದಿಯಾಗಿತ್ತು.