ETV Bharat / bharat

'ದಿ ಕಾಶ್ಮೀರ ಫೈಲ್ಸ್​​': ಮೂರು ರಾಜ್ಯಗಳಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ - ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ

ಮಾ.11ರಂದು 'ದಿ ಕಾಶ್ಮೀರ ಫೈಲ್ಸ್​​' ಚಿತ್ರ ಬಿಡುಗಡೆಯಾಗಿದೆ. ಶುಕ್ರವಾರ ಹರಿಯಾಣ ಸರ್ಕಾರ ತನ್ನ ರಾಜ್ಯದಲ್ಲಿ ತೆರಿಗೆ ರಹಿತ ಪ್ರದರ್ಶನದ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಗುಜರಾತ್​ ಮತ್ತು ಮಧ್ಯಪ್ರದೇಶ ಸರ್ಕಾರಗಳು ಕೂಡ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿವೆ.

The Kashmir Files
The Kashmir Files
author img

By

Published : Mar 13, 2022, 8:15 PM IST

ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ ಫೈಲ್ಸ್​​' ಚಿತ್ರ ಮತ್ತು ಸಿನಿಮಾ ಆಸಕ್ತರಿಗೆ ಬಿಜೆಪಿ ಆಡಳಿತ ಇರುವ ರಾಜ್ಯಗಳು ಖುಷಿ ವಿಚಾರವನ್ನು ನೀಡಿವೆ. ಗುಜರಾತ್​ ಮತ್ತು ಮಧ್ಯಪ್ರದೇಶದಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

ಮಾ.11ರಂದು 'ದಿ ಕಾಶ್ಮೀರ ಫೈಲ್ಸ್​​' ಚಿತ್ರ ಬಿಡುಗಡೆಯಾಗಿದೆ. ಶುಕ್ರವಾರ ಹರಿಯಾಣ ಸರ್ಕಾರ ತನ್ನ ರಾಜ್ಯದಲ್ಲಿ ತೆರಿಗೆ ರಹಿತ ಪ್ರದರ್ಶನದ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಗುಜರಾತ್​ ಮತ್ತು ಮಧ್ಯಪ್ರದೇಶ ಸರ್ಕಾರಗಳು ಕೂಡ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿವೆ.

'ದಿ ಕಾಶ್ಮೀರ ಫೈಲ್ಸ್​​' ಚಿತ್ರವು 90ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳು ಎದುರಿಸಿದ ನೋವು, ಸಂಕಟ, ಹೋರಾಟ ಮತ್ತು ಆಘಾತದ ಕುರಿತ ಹೃದಯ ವಿದ್ರಾವಕ ನಿರೂಪಣೆಯನ್ನು ಹೊಂದಿದೆ. ಈ ಚಿತ್ರವನ್ನು ಅತ್ಯಧಿಕ ಸಂಖ್ಯೆಯ ಜನರು ವೀಕ್ಷಿಸಬೇಕಾಗಿದೆ. ಆದ್ದರಿಂದ ಮಧ್ಯಪ್ರದೇಶ ರಾಜ್ಯದಲ್ಲಿ ಚಿತ್ರ ಪ್ರದರ್ಶನವನ್ನು ತೆರಿಗೆ ಮುಕ್ತಗೊಳಿಸಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚವ್ಹಾಣ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಇತ್ತ, ಗುಜರಾತ್​​ನಲ್ಲಿ 'ದಿ ಕಾಶ್ಮೀರ ಫೈಲ್ಸ್​​' ಚಿತ್ರವನ್ನು ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತೀರ್ಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್​ ಮಾಡಿದೆ.

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತಾದ ಈ ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಸೇರಿ ಹಲವರು ಅಭಿನಯಿಸಿದ್ದಾರೆ. ಮಾ.11ರಂದು ಬಿಡುಗಡೆಯಾದ ಮೊದಲ ದಿನ ಚಿತ್ರವು 3.55 ಕೋಟಿ ರೂ. ಗಳಿಕೆ ಮಾಡಿತ್ತು. ಮರುದಿನ ಮಾ.12ರಂದು 8.50 ಕೋಟಿ ರೂ. ಗಳಿಸುವ ಮೂಲಕ ಎರಡು ದಿನದಲ್ಲಿ 12.50 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: ಪುಸ್ತಕ ಮೇಳದಲ್ಲಿ ಪಿಕ್​ ಪಾಕೆಟಿಂಗ್​​.. ಖ್ಯಾತ ಟಾಲಿವುಡ್​​ ನಟಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.