ETV Bharat / bharat

ಗುಜರಾತ್ ಚುನಾವಣೆ: ಪ್ರಥಮ ಹಂತದ ಮತದಾನ ನಾಳೆ

ಗುಜರಾತ್‌ ವಿಧಾನಸಭೆ ಚುನಾವಣೆೆಯಲ್ಲಿ ಅಭ್ಯರ್ಥಿಗಳು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವಿಭಿನ್ನ ವಿಷಯಗಳ ಮೇಲೆ ಹೋರಾಟ ನಡೆಸುತ್ತಿದ್ದಾರೆ.

ಗುಜರಾತ್ ಚುನಾವಣೆ ಪ್ರಥಮ ಹಂತದ ಮತದಾನ ನಾಳೆ: ಹಕ್ಕು ಚಲಾಯಿಸಲಿದ್ದಾರೆ 95 ಲಕ್ಷ ಮತದಾರರು
Gujarat Elections First Phase Voting Tomorrow 95 Lakh Voters Will Vote
author img

By

Published : Nov 30, 2022, 2:15 PM IST

ಗಾಂಧಿನಗರ: ಡಿಸೆಂಬರ್ 1 ರಂದು ನಡೆಯಲಿರುವ 2022ರ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಗುಜರಾತ್​ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಎಎಪಿ ಮತ್ತು ಬಿಜೆಪಿ, ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಚುನಾವಣಾ ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ. ಈ ಮಧ್ಯೆ ಎಐಎಂಐಎಂ ಕೂಡ ಸಕ್ರಿಯ ಪಾತ್ರ ವಹಿಸುವ ನಿರೀಕ್ಷೆಯಿದೆ.

ಅಭ್ಯರ್ಥಿಗಳು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಭಿನ್ನ ವಿಷಯಗಳ ಮೇಲೆ ಹೋರಾಟ ನಡೆಸುತ್ತಿದ್ದಾರೆ. ಸೂರತ್‌ನಲ್ಲಿ ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಸಮಸ್ಯೆಗಳು, ನಾಗರಿಕ ಸೌಲಭ್ಯಗಳು ಮತ್ತು ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಸಮಸ್ಯೆಗಳು ಸೂರತ್​ನ ಎಲ್ಲ ನಗರ ಸ್ಥಾನಗಳಲ್ಲಿ ಪ್ರಮುಖ ಸಮಸ್ಯೆಗಳಾಗಿವೆ ಮತ್ತು ಸ್ವಲ್ಪ ಮಟ್ಟಿಗೆ ಗ್ರಾಮೀಣ ಸ್ಥಾನಗಳಲ್ಲೂ ಇವು ಚುನಾವಣಾ ವಿಷಯಗಳಾಗಿವೆ. ಇನ್ನು ಎಎಪಿ ಪ್ರಚಾರವು ಶಿಕ್ಷಣ, ಆರೋಗ್ಯ ಮತ್ತು ಉಚಿತ ವಿದ್ಯುತ್ ಸುತ್ತಲೇ ಇತ್ತು.

ಈ ಚುನಾವಣೆಯಲ್ಲಿ ಪಟೇಲ್ ಮತ್ತು ಬುಡಕಟ್ಟು ಮತ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ ದಕ್ಷಿಣ ಗುಜರಾತ್‌ನಲ್ಲಿ 14 ಬುಡಕಟ್ಟು ಪ್ರಾಬಲ್ಯದ ಸ್ಥಾನಗಳಿವೆ. ದಕ್ಷಿಣ ಗುಜರಾತ್‌ನಲ್ಲಿ ಕಾಂಗ್ರೆಸ್ ಇದುವರೆಗೆ ಎಲ್ಲಾ 14 ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಕೋಲಿ ಪಟೇಲ್ ಸಮುದಾಯವು ಸೂರತ್ ಗ್ರಾಮಾಂತರದ 6 ವಿಧಾನಸಭಾ ಸ್ಥಾನಗಳಲ್ಲಿ ಪ್ರಾಬಲ್ಯ ಹೊಂದಿದೆ. ಅವುಗಳೆಂದರೆ ಬಾರ್ಡೋಲಿ, ಮಾಂಡ್ವಿ, ಮಹುವ, ಅಲ್ಪಾಡ್, ಕಾಮ್ರೇಜ್ ಮತ್ತು ಮಂಗ್ರೋಲ್. ಬಾರ್ಡೋಲಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಬುಡಕಟ್ಟು ಹಳಪತಿ ಸಮಾಜದ ಹೊರತಾಗಿ, ಪಾಟಿದಾರ್ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖರಾಗಿದ್ದಾರೆ. ಸೌರಾಷ್ಟ್ರ ನಿವಾಸಿಗಳು ಕಾಮ್ರೇಜ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಮಹುವಾ ವಿಧಾನಸಭೆಯಲ್ಲಿ ಚೌಧರಿ ಮತ್ತು ಧೋಡಿಯಾ ಸಮುದಾಯಗಳು ಪ್ರಾಬಲ್ಯ ಹೊಂದಿವೆ. ಮಾಂಡವಿ ವಿಧಾನಸಭಾ ಕ್ಷೇತ್ರವು ಕ್ರಿಶ್ಚಿಯನ್ ಮತಗಳನ್ನು ಹೊಂದಿದ್ದರೆ, ಮಾಂಡವಿ ತಾಲೂಕು ಚೌಧರಿ ಮತ್ತು ವಾಸವ ಸಮುದಾಯದ ಪ್ರಾಬಲ್ಯ ಹೊಂದಿದೆ. ಮಾಂಗ್ರೋಲ್ ಕ್ಷೇತ್ರವು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ವಾಸವ ಸಮುದಾಯದ ಪ್ರಾಬಲ್ಯವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.