ಗುಜರಾತ್: ಗುಜರಾತ್ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗವು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಡಿಸೆಂಬರ್ 1 ರಿಂದ 19 ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದೆ.
ರಾಜ್ಯದಲ್ಲಿ ಒಟ್ಟು 4,91,35,400 ಮತದಾರರಿದ್ದು, 18 ರಿಂದ 29 ವರ್ಷದೊಳಗಿನ ಒಟ್ಟು ಸಂಖ್ಯೆ 1.15 ಕೋಟಿ ಯುವ ಮತದಾರರಿದ್ದಾರೆ. 100 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರ ಸಂಖ್ಯೆ 10,460. 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರ ಒಟ್ಟು ಸಂಖ್ಯೆ 9,87,999. ಕೇಂದ್ರ ಚುನಾವಣಾ ಆಯೋಗವು ಗುಜರಾತ್ ರಾಜ್ಯದ ವಯೋವಾರು ಮತಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಮಾಹಿತಿ ಹೊರ ಬಿದ್ದಿದೆ.
ಒಟ್ಟು ಮತದಾರರಲ್ಲಿ 2,37,74,146 ಮಹಿಳಾ ಮತದಾರರು ಹಾಗೂ 2,53,59,863 ಪುರುಷ ಮತದಾರರಿದ್ದಾರೆ. ಇದರಲ್ಲಿ 1,15,10,015 ಯುವ ಮತದಾರರಿದ್ದಾರೆ. ಗುಜರಾತ್ನಲ್ಲಿ ಒಟ್ಟು 1391 ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಮೋದಿ, ರಾಹುಲ್ ಗಾಂಧಿ ಚುನಾವಣಾ ರ‍್ಯಾಲಿ ಇಂದು