ಕಚ್ : ಗುಜರಾತ್ 'ಬಾಲಿಕಾ ಪಂಚಾಯತ್'ನನ್ನು ಆರಂಭಿಸಿದ ದೇಶದ ಮೊದಲ ರಾಜ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಅಭಿವೃದ್ಧಿ ಬದಲಾಗಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬಾಲಿಕಾ ಪಂಚಾಯತ್ ಇದರ ಒಂದು ಹೆಜ್ಜೆಯಾಗಿದೆ. ಬಾಲಿಕಾ ಪಂಚಾಯತ್ ಸದಸ್ಯರು 11 ರಿಂದ 21 ವರ್ಷದ ವಯೋಮಾನದ ಹುಡುಗಿಯರಾಗಿರುತ್ತಾರೆ.
ಗುರುವಾರ ಕಚ್ ಜಿಲ್ಲೆಯಲ್ಲಿ ಒಂದು ಬಾಲಿಕಾ ಪಂಚಾಯತ್ ನಡೆದಿದೆ. ಹಲವಾರು ಹುಡುಗಿಯರು ಸಭೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಸಮಸ್ಯೆಗಳು, ರಾಜಕೀಯದ ಬಗ್ಗೆ ಮಾತನಾಡಲು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಲು ಇಲ್ಲಿ ಸಭೆಗಳನ್ನು ಮಾಡಲಾಗುತ್ತದೆ.
ಬಾಲಿಕಾ ಪಂಚಾಯತ್ ಸ್ಥಾಪನೆಯಿಂದ ಗುಜರಾತ್‌ನಲ್ಲಿ ಹೆಣ್ಣು ಮಕ್ಕಳ ಶಕ್ತಿ ಬಲಪಡಲಿದೆ. ಅಲ್ಲದೇ ಬಾಲ್ಯವಿವಾಹ ಮತ್ತು ಹೆಣ್ಣುಮಕ್ಕಳ ಶಿಕ್ಷಣ ಕುಸಿಯುತ್ತಿರುವ ಇತರ ರಾಜ್ಯಗಳಿಗೆ ಇದು ಮಾದರಿಯಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ : ಚಿನ್ನದ ಪದಕ ಗೆದ್ದು ಅಚ್ಚರಿಗೊಳಿಸಿದ 106 ವರ್ಷದ ವೃದ್ಧೆ