ETV Bharat / bharat

ಗುಜರಾತ್​ನ ಪ್ರಮುಖ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧ: ಕಾಂಗ್ರೆಸ್ ಆಕ್ಷೇಪ

author img

By

Published : Nov 13, 2021, 9:53 PM IST

ಗುಜರಾತ್​ನ ರಾಜಕೋಟ್​ನಲ್ಲಿ ಮೊದಲಿಗೆ ಜಾರಿಗೊಳಿಸಲಾಗಿದ್ದ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧ ನಿಯಮವನ್ನು ಪ್ರಮುಖ ನಾಲ್ಕು ನಗರಗಳಲ್ಲಿ ಜಾರಿಗೆ ತರಲಾಗಿದೆ. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

Gujarat : Ban on non-vegetarian food sold in public place in major cities, Congress slams decision
ಗುಜರಾತ್​ನ ಹಲವು ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟ ಬ್ಯಾನ್: ಕಾಂಗ್ರೆಸ್ ಆಕ್ಷೇಪ

ಗಾಂಧಿನಗರ(ಗುಜರಾತ್): ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟವನ್ನು ನಿಷೇಧಿಸಲು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (Rajkot Municipal Corporation) ನವೆಂಬರ್ 9ರಂದು ಮೊದಲು ನಿರ್ಧರಿಸಿದೆ. ಈ ನಿರ್ಧಾರದ ವಿರುದ್ಧ ಗುಜರಾತ್ ಕಾಂಗ್ರೆಸ್ (Gujarat Congress) ಅಸಮಾಧಾನ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗುಜರಾತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ( Amit Chavda) ಗುಜರಾತ್​​ನಲ್ಲಿ 25 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ, ಪಾಲಿಕೆಗಳಲ್ಲೂ ಬಿಜೆಪಿ ಅಧಿಕಾರದಲ್ಲಿದೆ, ಬಿಜೆಪಿ ಸರ್ಕಾರ ನಿರುದ್ಯೋಗ ಹೆಚ್ಚಾಗಲು ಕಾರಣವಾಗಿದೆ. ಉದ್ಯೋಗ ನೀಡುವ ಬದಲು ದೊಡ್ಡ ಜಾಹೀರಾತುಗಳನ್ನು ನೀಡುತ್ತಿದೆ. ಯುವಕರು ಕೆಲಸವಿಲ್ಲದೇ ಜೀವನೋಪಾಯಕ್ಕಾಗಿ ತಮ್ಮದೇ ಆದ ಗಾಡಿಗಳನ್ನು ಮತ್ತು ಅಂಗಡಿಗಳನ್ನು ರಸ್ತೆ ಬದಿ ನಡೆಸುತ್ತಿರುವುದಕ್ಕೂ ಸರ್ಕಾರ ಕಡಿವಾಣ ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಸರ್ಕಾರವನ್ನು ಗೂಂಡಾ ರಾಜ್ (Goonda Raj) ಎಂದಿರುವ ಅವರು ಬಿಜೆಪಿಯವರಿಗೆ ಸುಲಿಗೆ ಗೃಹ ಕೈಗಾರಿಕೆಯಂತಾಗಿದೆ. ಬೀದಿ ಬದಿಯ ಮಾರಾಟಗಾರರಿಂದ ಸುಲಿಗೆ ಮಾಡಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಇದು ಸ್ಪಷ್ಟವಾಗಿದೆ. ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅಮಿತ್ ಚಾವ್ಡಾ ಆರೋಪಿಸಿದ್ದಾರೆ.

ನವೆಂಬರ್ 9ರಂದು ರಾಜ್‌ಕೋಟ್ ಮೇಯರ್ ಡಾ.ಪ್ರದೀಪ್ ದಾವ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಆರೋಪದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ನಿರ್ಬಂಧಿಸಿದ್ದರು. ಇದಾದ ನಂತರ ವಡೋದರಾ, ಸೂರತ್, ಭಾವನಗರ ಮತ್ತು ಜುನಾಗಡ್ ಮುನ್ಸಿಪಲ್ ಕಾರ್ಪೊರೇಶನ್‌ಗಳೂ ಇದೇ ನಿಯಮ ಅಳವಡಿಸಿಕೊಂಡಿದ್ದವು. ಮುಂದಿನ ದಿನಗಳಲ್ಲಿ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿಯೂ ರಸ್ತೆ ಬದಿ ಮಾಂಸಾಹಾರ ಮಾರಾಟ ನಿಷೇಧವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Gadchiroli encounter.. ಮಹಾರಾಷ್ಟ್ರದಲ್ಲಿ 26 ನಕ್ಸಲರ ಬೇಟೆಯಾಡಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.